Advertisement

ಮೊಟ್ಟೆ ವಿತರಣೆ ಯೋಜನೆಗೆ ಆಕ್ಷೇಪವೇಕೆ?

06:06 PM Dec 14, 2021 | Team Udayavani |

ದಾವಣಗೆರೆ: ರಾಜ್ಯ ಸರ್ಕಾರ ಶಾಲಾಮಕ್ಕಳಿಗೆ ಕೋಳಿಮೊಟ್ಟೆ ವಿತರಿಸುವಯೋಜನೆಯನ್ನು ಮುಂದುವರೆ ಸಬೇಕುಎಂದು ಕರ್ನಾಟಕ ರಾಜ್ಯ ಕೋಳಿಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ್‌ಒತ್ತಾಯಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಳಿಮೊಟ್ಟೆ ವೈಜ್ಞಾನಿಕವಾಗಿ ಪೌಷ್ಟಿಕ ಆಹಾರವಾಗಿದ್ದು,ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆವರದಾನ. ಶಾಲಾ ವಿದಾರ್ಥಿಗಳಲ್ಲಿಪೌಷ್ಟಿಕತೆ ಹೆಚ್ಚಿಸುವ ಉದ್ದೇಶದಿಂದರಾಜ್ಯ ಸರ್ಕಾರ ಪ್ರಾರಂಭಿಸಿರುವ ಮೊಟ್ಟೆವಿತರಣೆ ಯೋಜನೆಗೆ ಕೆಲ ಮಠಾಧೀಶರು,ಸ್ವಾಮೀಜಿಯವರು ಆಕ್ಷೇಪವ್ಯಕ್ತಪಡಿಸುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರ ಯಾರಧ್ದೋ ಒತ್ತಾಸೆ,ಆಕ್ಷೇಪಣೆಗೆ ಕಟ್ಟುಬಿದ್ದು ಮೊಟ್ಟೆ ವಿತರಣೆಮಾಡುವುದನ್ನು ಯಾವುದೇ ಕಾರಣಕ್ಕೂನಿಲ್ಲಿಸಬಾರದು ಎಂದು ಒತ್ತಾಯಿಸಿದರು.

ಮಹಾಮಾರಿ ಕೊರೊನಾದಸಂದರ್ಭದಲ್ಲಿ ಅಪೌಷ್ಟಿಕತೆಯಿಂದಬಳಲುತ್ತಿರುವ ಮಕ್ಕಳು ಸಾಕಷ್ಟುತೊಂದರೆ ಅನುಭವಿಸಿದ್ದಾರೆ. ವೈದ್ಯರುಸಹ ಮಕ್ಕಳಿಗೆ ದಿನಕ್ಕೊಮ್ಮೆ ಮೊಟ್ಟೆನೀಡುವುದರಿಂದ ಪೌಷ್ಟಿಕತೆ ಹೆಚ್ಚಾಗುತ್ತದೆಎಂದು ಹೇಳುತ್ತಾರೆ. ಹಾಗಾಗಿ ರಾಜ್ಯಸರ್ಕಾರ ಕಳೆದ ವರ್ಷದಿಂದ ಶಾಲೆಗಳಲ್ಲಿಮೊಟ್ಟ ವಿತರಣೆ ಯೋಜನೆ ಪ್ರಾರಂಭಿಸಿದೆ.ಈಗ ಕೆಲವು ಮಠಾಧೀಶರು,ಸ್ವಾಮೀಜಿಯವರು ಮೊಟ್ಟೆ ವಿತರಣೆಗೆವಿರೋಧ ಮಾಡುತ್ತಿರು ವುದು ಸರಿಯಲ್ಲ.ಮಠಾಧೀಶರು, ಸ್ವಾಮೀಜಿಗಳುಮೌಡ್ಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ.

ಸಂಪ್ರದಾಯ, ಆಚಾರ, ವಿಚಾರಗಳನ್ನುಮನೆಗೆ ಮಾತ್ರ ಸೀಮಿತಗೊಳಿಸಬೇಕು.ಸರ್ಕಾರದ ಯೋಜನೆ, ಕಾರ್ಯಕ್ರಮಗಳಿಗೆಸಂಪ್ರದಾಯ, ಆಚಾರ, ವಿಚಾರಗಳಬಣ್ಣ ಬಳಿಯುವುದು ಖಂಡನೀಯ.ರಾಜ್ಯ ಸರ್ಕಾರ ಶಾಲೆಯಲ್ಲಿಯಾವುದೂ ಕಾರಣಕ್ಕೂ ಮೊಟ್ಟೆವಿತರಣೆ ಸ್ಥಗಿತಗೊಳಿಸಬಾರದು.ಒಂದೊಮ್ಮೆ ನಿಲ್ಲಿಸಿದಲ್ಲಿ ರಾಜ್ಯಾದ್ಯಂತಹೋರಾಟ ನಡೆಸಲಾಗುವುದು ಎಂದುಎಚ್ಚರಿಸಿದರು.ಕೋಳಿ ಸಾಕಾಣಿಕೆದಾರರಕ್ಷೇಮಾಭಿವೃದ್ಧಿ ಸಂಘದ ಐಗೂರುಶಿವಮೂರ್ತಪ್ಪ, ತಿಮ್ಮೇಶ್‌, ಅಣಜಿಶಿವಮೂರ್ತಿ, ಜಿ.ಟಿ. ನೂರುದೀªನ್‌ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next