Advertisement

ಲೈಂಗಿಕ ದೌರ್ಜನ್ಯ ತಡೆಗೆ ಸಮಿತಿ ರಚಿಸಿ

04:23 PM Dec 10, 2021 | Team Udayavani |

ದಾವಣಗೆರೆ: ಪ್ರತಿಯೊಂದು ಸರ್ಕಾರಿ ಅಥವಾಖಾಸಗಿ ಸಂಸ್ಥೆಗಳ ಕಚೇರಿಯಲ್ಲಿಯೂ ಮಹಿಳೆಯರಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕುರಿತುಆಂತರಿಕ ಸಮಿತಿ ರಚಿಸುವುದು ಕಡ್ಡಾಯ ಎಂದುಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು.

Advertisement

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆಲೈಂಗಿಕ ಕಿರುಕುಳ ತಡೆಗಟ್ಟುವಿಕೆ (ನಿಷೇ ಧಿಸುವಿಕೆ,ನಿವಾರಿಸುವಿಕೆ) ಅಧಿನಿಯಮ 2013ರ ಕುರಿತಂತೆರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದವತಿಯಿಂದ ಜಿಲ್ಲಾಡಳಿತ ಭವನದ ತುಂಗಭದ್ರಾಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ಸನಾತನ ಸಂಸ್ಕೃತಿಯ ದೇಶವಾಗಿದ್ದು,ಎಲ್ಲಿ ನಾರಿಯನ್ನು ಗೌರವಿಸುವರೋ, ಪೂಜಿಸುವರೋಆ ಸ್ಥಳದಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಮಾತಿದೆ.ದೇಶದಲ್ಲಿ ಪ್ರತಿಯೊಬ್ಬರಿಗೂ ಗೌರವಪೂರ್ವಕವಾಗಿಜೀವಿಸುವ ಸ್ವಾತಂತ್ರÂ, ಸಮಾನತೆಯನ್ನು ನಮ್ಮದೇಶದಸಂವಿಧಾನ ಕಲ್ಪಿಸಿಕೊಟ್ಟಿದೆ.

ಆದರೆ ಕೆಲಸನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರ ಮೇಲೆನಡೆಯುವ ಲೈಂಗಿಕ ದೌರ್ಜನ್ಯ ಸಂವಿಧಾನಕಲ್ಪಿಸಿರುವ ಸಮಾನತೆ, ಸ್ವಾತಂತ್ರದ ಆಶಯಕ್ಕೆ ಧಕ್ಕೆತರುವಂತಹದ್ದಾಗಿದೆ ಎಂದರು.ದೇಶದಲ್ಲಿ ಸಂವಿಧಾನದ ಆಶಯಕ್ಕೆವಿರುದ್ಧವಾಗುವಂತಹ, ಮಹಿಳೆಯರ ಮೇಲಿನದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದುನಿಜಕ್ಕೂ ಕಳವಳಕಾರಿಯಾಗಿದೆ. ಸರ್ಕಾರ ಇಂತಹದೌರ್ಜನ್ಯ ತಡೆಗಟ್ಟಿ, ಮಹಿಳೆಯರಿಗೆ ನ್ಯಾಯದೊರಕಿಸುವ ನಿಟ್ಟಿನಲ್ಲಿ 2013ರಲ್ಲಿಯೇ ಕೆಲಸದಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳತಡೆಗಟ್ಟುವಿಕೆ (ನಿಷೇಧಿಸುವಿಕೆ, ನಿವಾರಿಸುವಿಕೆ)ಅಧಿನಿಯಮ ಜಾರಿಗೊಳಿಸಿದೆ.

ಮಹಿಳೆಯರರಕ್ಷಣೆಗೆ ಇದು ದೊಡ್ಡ ಮೈಲುಗಲ್ಲಾಗಿದೆ.ಇದರನ್ವಯ 10ಕ್ಕಿಂತ ಹೆಚ್ಚು ಜನ ಕೆಲಸ ಮಾಡುವಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಪ್ರತಿಯೊಂದುಖಾಸಗಿ, ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿಯೂಮಹಿಳಾ ಅಧಿಕಾರಿ, ಸಿಬ್ಬಂದಿ ಒಳಗೊಂಡ ಆಂತರಿಕಸಮಿತಿ ರಚಿಸುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿಅದು ಅಪರಾಧವಾಗುತ್ತದೆ. ಮಹಿಳೆಯರ ಮೇಲಿನಲೈಂಗಿಕ ದೌರ್ಜನ್ಯ ತಡೆಗಟ್ಟಲು ಇಂತಹ ಸಮಿತಿಗಳುಪರಿಣಾಮಕಾರಿಯಾಗಿವೆ. ಆದರೆ ಕೆಲವೆಡೆ ಇಂತಹಆಂತರಿಕ ಸಮಿತಿಗಳು ರಚನೆಯಾಗಿಲ್ಲ ಎಂದುಬೇಸರ ವ್ಯಕ್ತಪಡಿಸಿದರು.

Advertisement

ಪೊಲೀಸ್‌ ಉಪಾಧೀಕ್ಷಕಿ ಕನ್ನಿಕಾ ಸಕ್ರಿವಾಲ್‌ಮಾತನಾಡಿ, ಕೆಲಸ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯಎಂದರೇನು, ಯಾವುದು ಲೈಂಗಿಕ ದೌರ್ಜನ್ಯಎಂಬುದನ್ನು ಅಧಿನಿಯಮದಲ್ಲಿ ಸ್ಪಷ್ಟವಾಗಿತಿಳಿಸಲಾಗಿದೆ. ಅಧಿನಿಯಮದ ಕುರಿತು ಮಹಿಳಾನೌಕರರಲ್ಲಿ ಅರಿವಿನ ಕೊರತೆಯಿದೆ. ಮಹಿಳೆಯರುಕಚೇರಿಗಳಲ್ಲಿ ದಕ್ಷತೆಯಿಂದ, ಪ್ರಾಮಾಣಿಕತೆಯಿಂದ,ಉತ್ತಮ ಸೇವೆ ಸಲ್ಲಿಸುವಂತಹ ಪೂರಕ ವಾತಾವರಣಇರಬೇಕು. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿನಜ್ಮಾ, ಪೊಲೀಸ್‌ ಉಪಾಧೀಕ್ಷಕ ಬಸವರಾಜನಾಯಕ್‌, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್‌,ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್‌,ಪಾಲಿಕೆ ಉಪ ಆಯುಕ್ತರಾದ ನಳಿನಾ ಹಾಗೂವಿವಿಧ ಇಲಾಖೆಗಳಲ್ಲಿನ ಮಹಿಳಾ ಉದ್ಯೋಗಿಗಳುಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next