ದಾವಣಗೆರೆ: ನಗರದಲ್ಲಿ ಹೆಚ್ಚಿರುವ ಬೀದಿನಾಯಿ, ಬಿಡಾಡಿದನಗಳ ಹಾವಳಿ ನಿಯಂತ್ರಿಸುವಲ್ಲಿ ಮಹಾನಗರ ಪಾಲಿಕೆಸಂಪೂರ್ಣ ವಿಫಲವಾಗಿದೆ ಎಂದು ಕರ್ನಾಟಕ ಸೋಷಿಯಲ್‌ಸರ್ವಿಸ್, ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್, ಭೀಮ್ ಆರ್ಮಿಸಂಘಟನೆಗಳು ದೂರಿವೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕಸೋಷಿಯಲ್ ಸರ್ವಿಸ್ ಅಧ್ಯಕ್ಷ ಮಹಮ್ಮದ್ ಹಯಾತ್,ದಾವಣಗೆರೆಯಲ್ಲಿ ಪ್ರತಿ ನಿತ್ಯ ಬೀದಿನಾಯಿಗಳ ದಾಳಿಯಿಂದಮಕ್ಕಳು, ವಯೋವೃದ್ಧರು ಗಾಯಗೊಂಡು ಚಿಕಿತ್ಸೆಗೆದಾಖಲಾಗುವುದು ಸಾಮಾನ್ಯ ಎನ್ನುವಂತಾಗಿದೆ. ಬಿಡಾಡಿ ದನ,ಬೀದಿನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿಹಲವಾರು ಬಾರಿ ಪ್ರತಿಭಟನೆ, ಮನವಿ ಸಲ್ಲಿಸಿದರೂ ಯಾವುದೇಪ್ರಯೋಜನ ಆಗುತ್ತಿಲ್ಲ ಎಂದು ದೂರಿದರು.
ಈಚೆಗೆ ಬಾಷಾನಗರದಲ್ಲಿ 7 ವರ್ಷದ ಸಾದಿಕ್ ಎಂಬಬಾಲಕನ ಮೇಲೆ ಏಕಕಾಲದಲ್ಲಿ 7-8 ನಾಯಿಗಳು ದಾಳಿಮಾಡಿದ್ದರ ಪರಿಣಾಮ ತೀವ್ರ ಗಾಯಗೊಂಡಿರುವಬಾಲಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಆಜಾದ್ ನಗರದಲ್ಲಿ ಕೆಲ ದಿನಗಳ ಇದೇ ರೀತಿ ನಾಯಿಗಳುಬಾಲಕನನ್ನು ಕಚ್ಚಿದ್ದವು. ಮೇಯರ್, ಆಯುಕ್ತರಿಗೆಮನವಿ ಮಾಡಿಕೊಂಡರೂ ಬೀದಿನಾಯಿ, ಬಿಡಾಡಿದನಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ವೈಜ್ಞಾನಿಕಸಂತಾನಹರಣ ಶಸ್ತ್ರಚಿಕಿತ್ಸೆ ಒಳಗೊಂಡಂತೆ ಅಗತ್ಯಕ್ರಮಗಳ ಮೂಲಕ ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಕಾರ್ಯದರ್ಶಿ ಆದಿಲ್ ಖಾನ್ ಮಾತನಾಡಿ,ಕಳೆದ ಎರಡು ವರ್ಷದಿಂದ ಬೀದಿನಾಯಿ, ಬಿಡಾಡಿದನಗಳ ನಿಯಂತ್ರಣಕ್ಕೆ ಒತ್ತಾಯಿಸಿ ಹಲವಾರು ಬಾರಿಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ. ಯಾವುದಕ್ಕೂನಗರಪಾಲಿಕೆ ಸ್ಪಂದಿಸುತ್ತಿಲ್ಲ. ವಿರೋಧ ಪಕ್ಷ ಇದೆಯೋಇಲ್ಲವೋ ಎನ್ನುವಂತಿದೆ.
ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತುವರೇಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ಬೀದಿನಾಯಿಗಳಸಂತಾನಶಕ್ತಿ ಹರಣ ಒಳಗೊಂಡಂತೆ ನಿಯಂತ್ರಣಕ್ಕೆ 40ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಪಾಲಿಕೆಯಲೆಕ್ಕಾಚಾರದ ಪ್ರಕಾರ 8,300 ಬೀದಿನಾಯಿಗಳಲ್ಲಿ 2,500ಬೀದಿನಾಯಿಗಳನ್ನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆಒಳಪಡಿಸಲಾಗಿದೆ. ಆದರೂ ಬೀದಿನಾಯಿಗಳ ಹಾವಳಿನಿಂತಿಲ್ಲ.
ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.ಇಲ್ಲದಿದ್ದಲ್ಲಿ ಸಂಘಟನೆಯ ಖರ್ಚಿನಲ್ಲಿ ಬೀದಿನಾಯಿಗಳನ್ನುಸೆರೆ ಹಿಡಿಸಿ ನಗರಪಾಲಿಕೆ ಆವರಣ, ಸದಸ್ಯರ ಮನೆಗಳಮುಂದೆ ಬಿಡಬೇಕಾಗುತ್ತದೆ. ಬೀದಿನಾಯಿಗಳ ನಿಯಂತ್ರಣಕ್ಕೆಮೀಸಲಿಟ್ಟಿರುವ ಅನುದಾನದ ಬಳಕೆ ಬಗ್ಗೆ ಸಾರ್ವಜನಿಕರಿಗೆಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ ಕಾರ್ಯದರ್ಶಿ ಅಹಮ್ಮದ್‌ಬಾಷಾ, ಸಹ ಕಾರ್ಯದರ್ಶಿ ಖಲೀಲ್, ಭೀಮ್ ಆರ್ಮಿ ಅಧ್ಯಕ್ಷಬಸವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.