ದಾವಣಗೆರೆ: ಕೊರೊನಾ ಬರಬಾರದು ಅಂದರೆ ಪ್ರತಿದಿನ 10 ಬಾರಿಯಾದರೂ ಸೋಪು ಹಾಕಿ ಕೈ ತೊಳೆದುಕೊಳ್ಳಬೇಕು, ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಅಂತರದಲ್ಲಿ ಇರಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದರು.
ಸೋಮವಾರ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಕಾರ್ಮಿಕರಿಗೆ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಂಡ ಪ್ರತಿದಿನ ವಿವಿಧ ರೀತಿಯಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಕೆಲಸ ನಿರ್ವಹಿಸುತ್ತಿದೆ ಎಂದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಲ್ಲೇ ಇರುವಂತಾಗಿರುವ ಬಾಗಲಕೋಟೆ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ವಿವಿಧೆಡೆಯ ಭಯ ಪಡುವ ಅವಶ್ಯಕತೆ ಇಲ್ಲ. ಆಹಾರ, ಆರೋಗ್ಯಕ್ಕೆ ಸಂಬಂ ಧಿಸಿದಂತೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಜ್ವರ, ನೆಗಡಿ, ಕೆಮ್ಮು ಏನಾದರೂ ಇದ್ದರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿರಿ ಎಂದು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಎನ್‌ಜಿಓ ಸಂಸ್ಥೆಗಳಲ್ಲಿ ಬಹಳ ಪ್ರಸಿದ್ಧವಾದ ಸಂಸ್ಥೆಯಾಗಿದ್ದು, ಕೊರೊನಾ
ವೈರಸ್ ತಡೆಯುವ ಮುಂಜಾಗ್ರತಾ ಕ್ರಮಗಳ ಕರಪತ್ರಗಳು, ಆಹಾರದ ಪೊಟ್ಟಣ, ತರಕಾರಿ, ಕಟ್ಟಡ ಕಾರ್ಮಿಕರಿಗೆ ಸೋಪು, ಮಾಸ್ಕ್ ವಿತರಣೆ ಮಾಡುವ ಮೂಲಕ ಸೇವಾ ಕಾರ್ಯ ನಿರ್ವಹಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಬಿ. ಮಲ್ಲಾಪುರ, ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂ ಸಾಬ್, ರೆಡ್ ಕ್ರಾಸ್ ಚೇರ್ಮನ್ ಡಾ|ಎ.ಎಂ. ಶಿವಕುಮಾರ, ಉಪಾಧ್ಯಕ್ಷ ಉಮೇಶ ಶೆಟ್ಟಿ, ಕಾರ್ಯದರ್ಶಿ ಅನಿಲ್ ಬಾರಂಗಳ್, ಡಿ.ಎಸ್.ಸಾಗರ್, ಗೌಡರ ಚನ್ನಬಸಪ್ಪ, ಡಿ.ಎಸ್.ಸಿದ್ದಣ್ಣ, ಶಿವಾನಂದ, ಶೇಷಾಚಲ, ಪೃಥ್ವಿ ಬಾದಾಮಿ, ಕರಿಬಸಪ್ಪ, ಸಂತೋಷ ಗಾಯಕವಾಡ, ಚನ್ನಬಸವ ಶೀಲವಂತ್, ನಂದೀಶ ಬಾದಾಮಿ, ಇನಾಯತ್‌ವುಲ್ಲಾ, ರವಿಕುಮಾರ, ಎಂ.ಜಿ. ಶ್ರೀ ಕಾಂತ್, ವಿಜಯಕುಮಾರ್ ಇದ್ದರು.