Advertisement

ತಂಬಾಕು ಬಳಕೆಯಿಂದ ವಾರ್ಷಿಕ ಲಕ್ಷಕ್ಕೂ  ಹೆಚ್ಚು  ಜನರ ಸಾವು

12:07 PM Mar 02, 2019 | Team Udayavani |

ದಾವಣಗೆರೆ: ತಂಬಾಕು ಉತ್ಪನ್ನಗಳಲ್ಲಿರುವ ಆರು ಸಾವಿರದಷ್ಟು ಕೆಮಿಕಲ್‌ ಅಂಶಗಳಲ್ಲಿ 60 ಕೆಮಿಕಲ್‌ ಅಂಶಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸರ್ವೇಕ್ಷಣಾಧಿಕಾರಿ ಡಾ| ಗಂಗಾಧರ್‌ ತಿಳಿಸಿದ್ದಾರೆ.

Advertisement

ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ, ಕೋಟ್ಪಾ-2003ರ ಕಾಯ್ದೆ ಅನುಷ್ಠಾನಗೊಳಿಸಲು ಹೋಟೆಲ್‌, ಬಾರ್‌ ಮಾಲೀಕರ ಸಂಘದ ಸದಸ್ಯರಿಗೆ ಮತ್ತು ವಿವಿಧ ಪಾಲುದಾರಿತ ಸಂಸ್ಥೆ ಸದಸ್ಯರಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಜನರು ತಂಬಾಕು ಉತ್ಪನ್ನಗಳ ಅಧಿಕ ಬಳಕೆಯಿಂದ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ತಂಬಾಕು ನಿಯಂತ್ರಣ ಅವಶ್ಯ ಎಂದು ತಿಳಿಸಿದರು.

15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ. 25 ರಷ್ಟು ಹೆಣ್ಣು ಮಕ್ಕಳು ತಂಬಾಕು ಸೇವನೆ ಮಾಡುತ್ತಿದ್ದಾರೆ. ಹಲವಾರು ಕಾಯಿಲೆಗಳು ತುತ್ತಾಗುತ್ತಿದ್ದಾರೆ. ತಂಬಾಕು ಉತ್ಪನ್ನಗಳ ಬಳಕೆಯಿಂದ ದೇಹದಲ್ಲಿನ ರೋಗ ನಿಯಂತ್ರಣ ಶಕ್ತಿ ಕಡಿಮೆಯಾಗುತ್ತದೆ. ಅಂಗಾಂಗಳು ಹಾನಿಗೊಳಗಾಗುತ್ತವೆ. ಸಾರ್ವಜನಿಕರಿರುವ ಸ್ಥಳಗಳಲ್ಲಿ ತಂಬಾಕು ಸೇವನೆಯಿಂದ ಸೇವಿಸದ ಇತರರಿಗೂ ಕಾಯಿಲೆಗಳು ಬರುತ್ತವೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಪ್ರತಿ ವರ್ಷ 1 ಲಕ್ಷಕ್ಕೂ ಅಧಿಕ ಜನರು ಮರಣಹೊಂದುತ್ತಿದ್ದಾರೆ. 6 ಲಕ್ಷಕ್ಕೂ ಅಧಿ ಕ ಜನರು ಮಾರಾಣಾಂತಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.

ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಡಾ| ಚನ್ನಪ್ಪ ಮಾತನಾಡಿ, ಸಾರ್ವಜನಿಕರಿರುವ ಸ್ಥಳಗಳಲ್ಲಿ ತಂಬಾಕು ಬಳಸಬಾರದು. ತಂಬಾಕು ಸೇವನೆಯ ಅಪಾಯಗಳು ಮತ್ತು ನಿಯಂತ್ರಣ ಕ್ರಮಗಳು ಹಾಗೂ ಕೊಟಾ³ ಕಾಯ್ದೆಯ ಬಗ್ಗೆ ತಿಳಿಯುವ ಜೊತೆಗೆ ಇತರರಲ್ಲೂ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ರಾಜ್ಯ ತಂಬಾಕು ನಿಯಂತ್ರಣ ಘಟಕ ವಿಭಾಗೀಯ ಸಂಯೋಜಕ ಮಹಾಂತೆಶ್‌ ಉಳ್ಳಗಡ್ಡಿ, ಜಿಲ್ಲಾ ಸಲಹೆಗಾರ ಸತೀಶ್‌ ಕಲಹಾಳ, ಆರೋಗ್ಯ ಮೆಲ್ವಿಚಾರಕ ರಾಚಪ್ಪ ಕುಪಸ್ತ, ಕೆ.ಪಿ. ದೇವರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next