Advertisement

ದಾವಣಗೆರೆ ಜಿಲ್ಲೆಯಲ್ಲಿ 44 ಮಂದಿಗೆ ಕೋವಿಡ್ ಪಾಸಿಟಿವ್ !24 ಮಂದಿ ಗುಣಮುಖ

09:53 PM Nov 06, 2020 | sudhir |

ದಾವಣಗೆರೆ : ಜಿಲ್ಲೆಯಲ್ಲಿ ಶುಕ್ರವಾರ 44 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು 24 ಜನರು ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿದ್ದಾರೆ. ದಾವಣಗೆರೆ ನಗರದ 75 ವರ್ಷದ ವೃದ್ಧರೋರ್ವರು ಮೃತಪಟ್ಟಿದ್ದಾರೆ.

Advertisement

ದಾವಣಗೆರೆ ತಾಲೂಕಿನಲ್ಲಿ 21, ಹರಿಹರ ತಾಲೂಕಿನಲ್ಲಿ ಒಂಭತ್ತು, ಜಗಳೂರು ತಾಲೂಕಿನಲ್ಲಿ ಎರಡು, ಚನ್ನಗಿರಿ ತಾಲೂಕಿನಲ್ಲಿ ನಾಲ್ಕು, ಹೊನ್ನಾಳಿ ತಾಲೂಕಿನಲ್ಲಿ ಏಳು, ಹೊರ ಜಿಲ್ಲೆಯ ಒಂದು ಸೇರಿ ಒಟ್ಟು 44 ಪ್ರಕರಣಗಳು ವರದಿಯಾಗಿವೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 21,000ಪ್ರಕರಣಗಳು ದಾಖಲಾಗಿದ್ದು 20,261ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಈವರೆಗೆ 261 ಜನರ ಸಾವು ಸಂಭವಿಸಿದ್ದು ಪ್ರಸ್ತುತ 478 ಸಕ್ರಿಯ ಪ್ರಕರಣಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next