Advertisement
ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 77 , ಹರಿಹರದಲ್ಲಿ 8, ಜಗಳೂರಿನಲ್ಲಿ 2, ಚನ್ನಗಿರಿಯಲ್ಲಿ 37, ಹೊನ್ನಾಳಿಯಲ್ಲಿ 33 ಹಾಗೂ ಹೊರ ಜಿಲ್ಲೆಯ 9 ಜನರು ಒಳಗೊಂಡಂತೆ 150 ಸೋಂಕಿತರು ಗುಣಮುಖರಾಗಿದ್ದಾರೆ.
Related Articles
Advertisement
ಇದನ್ನೂ ಓದಿ :ರಾಯಚೂರು: ವ್ಯಾಪಾರ-ವಹಿವಾಟು ಮುಕ್ತ, ಮುಂಜಾಗ್ರತೆ ವಹಿಸಲು ಸಲಹೆ
ಜಿಲ್ಲೆಯಲ್ಲಿ ಸೋಮವಾರ ಕೊರೊನಾದಿಂದ ಏಳು ಜನರು ಮೃತಪಟ್ಟಿದ್ದಾರೆ. ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ 59 ವರ್ಷದ ವ್ಯಕ್ತಿ, ಹೊನ್ನಾಳಿ ತಾಲೂಕಿನ ಶಿಂಗಟಗೆರಿ ಗ್ರಾಮದ 84 ವರ್ಷದ ವಯೋವೃದ್ಧ, ಸಾಸ್ವೇಹಳ್ಳಿ ಗ್ರಾಮದ 70 ವರ್ಷದ ವೃದ್ಧ, ದಾವಣಗೆರೆಯ ಶಾಂತಿನಗರದ 58 ವರ್ಷದ ವ್ಯಕ್ತಿ, ಬಾಷಾ ನಗರದ 54 ವರ್ಷದ ಮಹಿಳೆ, ದಾವಣಗೆರೆ ತಾಲೂಕಿನ ಮತ್ತಿ ಗ್ರಾಮದ 45 ವರ್ಷದ ವ್ಯಕ್ತಿ, ಆಲೂರು ಗ್ರಾಮದ 65 ವರ್ಷದ ವೃದ್ಧ ಮೃತಪಟ್ಟವರು. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ ಜಿಲ್ಲೆಯಲ್ಲಿ 501 ಜನರು ಸಾವನ್ನಪ್ಪಿದ್ದಂತಾಗಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 107 ಸೋಂಕಿತರು ಸಾಮಾನ್ಯ, 403 ಸೋಂಕಿತರು ಆಕ್ಸಿಜನ್, 16 ಸೋಂಕಿತರು ಎನ್‌ಐವಿ, 49 ಸೋಂಕಿತರು ವೆಂಟಿಲೇಟರ್ 23 ಸೋಂಕಿತರು ವೆಂಟಿಲೇಟರ್ ರಹಿತ, 356ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 412 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದಾರೆ.
ಮೂವರಲ್ಲಿ ಬ್ಯ್ಲಾಕ್ ಫಂಗಸ್
ಜಿಲ್ಲೆಯಲ್ಲಿ ನಿನ್ನೆ ಮೂವರಲ್ಲಿ ಬ್ಯ್ಲಾಕ್ ಫಂಗಸ್ ಕಂಡು ಬಂದಿದೆ. ಈವರೆಗೆ ಜಿಲ್ಲೆಯಲ್ಲಿ 94 ಜನರಲ್ಲಿ ಬ್ಯ್ಲಾಕ್ ಫಂಗಸ್ ಕಂಡು ಬಂದಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ 29, ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ 17, ಬಾಪೂಜಿ ಆಸ್ಪತ್ರೆಯಲ್ಲಿ ಒಬ್ಬರು ಒಳಗೊಂಡಂತೆ 47 ಜನರು ಗುಣಮುಖರಾಗಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ28, ಎಸ್.ಎಸ್. ಹೈಟೆಕ್‌ನಲ್ಲಿ 17, ಬಾಪೂಜಿ ಮತ್ತು ಕಾಲೇಜ್ ಆಫ್ ಡೆಂಟಲ್ ಸೈನ್ಸೆಸ್‌ನಲ್ಲಿ ತಲಾ ಒಬ್ಬರು ಒಳಗೊಂಡಂತೆ 47 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.