Advertisement

ದಾವಣಗೆರೆ ಜಿಲ್ಲೆಯಲ್ಲಿ 789 ಮಂದಿ ಗುಣಮುಖ : 183 ಹೊಸ ಪ್ರಕರಣ ಪತ್ತೆ

06:59 PM Jun 15, 2021 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಮಂಗಳವಾರ ಕೊರೊನಾದಿಂದ 789 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸತತ ಎರಡನೇ ದಿನ ಸೋಂಕಿತರಿಗಿಂತಲೂ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿರುವುದು ವಿಶೇಷ.

Advertisement

ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 255 , ಹರಿಹರದಲ್ಲಿ 108, ಜಗಳೂರಿನಲ್ಲಿ 98, ಚನ್ನಗಿರಿಯಲ್ಲಿ 164, ಹೊನ್ನಾಳಿಯಲ್ಲಿ 155 ಹಾಗೂ ಹೊರ ಜಿಲ್ಲೆಯ ಒಂಭತ್ತು ಜನರು ಒಳಗೊಂಡಂತೆ 789 ಸೋಂಕಿತರು ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಮಂಗಳವಾರ 183 ಜನರಲ್ಲಿ ಸೋಂಕು ಪತ್ತೆಯಾಗಿದೆ. ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ 69 ಪ್ರಕರಣ ಪತ್ತೆಯಾಗಿವೆ. ಹರಿಹರದಲ್ಲಿ 24, ಜಗಳೂರಿನಲ್ಲಿ 7 , ಚನ್ನಗಿರಿಯಲ್ಲಿ 30, ಹೊನ್ನಾಳಿಯಲ್ಲಿ 38 ಹಾಗೂ ಹೊರ ಜಿಲ್ಲೆಯ 15 ಜನರು ಒಳಗೊಂಡಂತೆ 183 ಜನರಲ್ಲಿ ಮಹಾಮಾರಿ ಕೊರೊನಾ ಪತ್ತೆಯಾಗಿದೆ.

ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 25229, ಹರಿಹರದಲ್ಲಿ 6605 , ಜಗಳೂರಿನಲ್ಲಿ 2565, ಚನ್ನಗಿರಿಯಲ್ಲಿ 5862, ಹೊನ್ನಾಳಿಯಲ್ಲಿ 6004, ಹೊರ ಜಿಲ್ಲೆಯ 1403 ಜನರು ಸೇರಿದಂತೆ ಈವರೆಗೆ ಒಟ್ಟು 47,668 ಜನರು ಸೋಂಕಿಗೆ ಒಳಗಾಗಿದ್ದಾರೆ.

ಇದನ್ನೂ ಓದಿ :ಕೊವಿಡ್ ಲಸಿಕೆಯೊಂದಿಗೆ ಹಳ್ಳಿ ಹಳ್ಳಿಗೆ ಸಂಚರಿಸಲಿವೆ NEKRTC ಬಸ್

Advertisement

ಕೊರೊನಾದಿಂದ ಈವರೆಗೆ ದಾವಣಗೆರೆ ತಾಲೂಕಿನಲ್ಲಿ 23246, ಹರಿಹರದಲ್ಲಿ 6133, ಜಗಳೂರಿನಲ್ಲಿ 2412, ಚನ್ನಗಿರಿಯಲ್ಲಿ 5462, ಹೊನ್ನಾಳಿಯಲ್ಲಿ 5223, ಹೊರ ಜಿಲ್ಲೆಯ 1089 ಜನರು ಸೇರಿದಂತೆ 43,565 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 3655 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಮಂಗಳವಾರ ಕೊರೊನಾದಿಂದ  7 ಜನರು ಮೃತಪಟ್ಟಿದ್ದಾರೆ. ದಾವಣಗೆರೆಯ ಮುದ್ದಾಭೋವಿ ಕಾಲೋನಿಯ 65 ವರ್ಷದ ವೃದ್ಧ, ಬೀರಲಿಂಗೇಶ್ವರ ಬಡಾವಣೆಯ 27 ವರ್ಷದ ಮಹಿಳೆ, ಎಂಸಿಸಿ ಎ ಬ್ಲಾಕ್‌ನ 72 ವರ್ಷದ ವೃದ್ಧೆ, ಹೊನ್ನಾಳಿ ತಾಲೂಕಿನ ಅರೇಹಳ್ಳಿಯ 33 ವರ್ಷದ ವ್ಯಕ್ತಿ, ಟಿ.ಜಿ. ಹಳ್ಳಿಯ ನಿವಾಸಿ 42 ವರ್ಷದ ವ್ಯಕ್ತಿ, ತಾಕನಹಳ್ಳಿಯ 22 ವರ್ಷದ ವ್ಯಕ್ತಿ, ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ 27 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಈವರೆಗೆ ಮಹಾಮಾರಿ ಕೊರೊನಾದಿಂದ ಜಿಲ್ಲೆಯಲ್ಲಿ 448 ಜನರು ಸಾವನ್ನಪ್ಪಿದ್ದಂತಾಗಿದೆ.

ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 133 ಸೋಂಕಿತರು ಸಾಮಾನ್ಯ, 523 ಸೋಂಕಿತರು ಆಕ್ಸಿಜನ್, 25 ಸೋಂಕಿತರು ಎನ್‌ಐವಿ, 49 ಸೋಂಕಿತರು ವೆಂಟಿಲೇಟರ್ 34 ಸೋಂಕಿತರು ವೆಂಟಿಲೇಟರ್ ರಹಿತ, 466 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 761 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದಾರೆ.

ಮೂವರಿಗೆ ಬ್ಯ್ಲಾಕ್ ಫಂಗಸ್

ಮಂಗವಾರ ಜಿಲ್ಲೆಯಲ್ಲಿ ಮೂರು ಜನರಲ್ಲಿ ಹೊಸದಾಗಿ ಬ್ಯ್ಲಾಕ್ ಫಂಗಸ್ ಕಂಡು ಬಂದಿದೆ. ಕೊರೊನಾದಿಂದ ಗುಣಮುರಾದ ಜಿಲ್ಲಾ ಆಸ್ಪತ್ರೆಯಲ್ಲಿನ 3 ಜನರಿಗೆ ಬ್ಯ್ಲಾಕ್ ಫಂಗಸ್ ವಕ್ಕರಿಸಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 51, ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ 28, ಬಾಪೂಜಿ ಆಸ್ಪತ್ರೆಯಲ್ಲಿ ಇಬ್ಬರು, ಕಾಲೇಜು ಆಫ್ ಡೆಂಟಲ್ ಸೈನ್ಸೆಸ್‌ನಲ್ಲಿ ಒಬ್ಬರು ಒಳಗೊಂಡಂತೆ 82 ಜನರು ಬ್ಯ್ಲಾಕ್ ಫಂಗಸ್‌ಗೆ ತುತ್ತಾಗಿದ್ದರು. ಅವರಲ್ಲಿ ಈವರೆಗೆ 37 ಜನರು ಗುಣಮುಖರಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ 28, ಎಸ್.ಎಸ್. ಹೈಟೆಕ್‌ನಲ್ಲಿ 15, ಬಾಪೂಜಿ ಮತ್ತು ಕಾಲೇಜ್ ಆಫ್ ಡೆಂಟಲ್ ಸೈನ್ಸೆಸ್‌ನಲ್ಲಿ ತಲಾ ಒಬ್ಬರು ಒಳಗೊಂಡಂತೆ 45 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next