Advertisement

ದಾವಣಗೆರೆ ಮೇಯರ್ ಚುನಾವಣೆ ಪಟ್ಟಿಯಲ್ಲಿ ಪರಿಷತ್ ಸದಸ್ಯರ ಹೆಸರು: ಕಾಂಗ್ರೆಸ್ ಪ್ರತಿಭಟನೆ

03:57 PM Feb 03, 2021 | Team Udayavani |

ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣಾ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸಚಿವ ಆರ್. ಶಂಕರ್, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡರ ಹೆಸರು ಸೇರಿಸಲಾಗಿದೆ ಎಂದು ಆರೋಪಿಸಿ ವಿಪಕ್ಷ ನಾಯಕ ಎ. ನಾಗರಾಜ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು, ಮುಖಂಡರು ಆಯುಕ್ತರ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.

Advertisement

ಕಳೆದ ಫೆ.19 ರಂದು ನಡೆದ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ವಾಸವಿರದ ವಿಧಾನ ಪರಿಷತ್ ಸದಸ್ಯರ ಹೆಸರು ಸೇರಿಸಿ ಅಧಿಕಾರಕ್ಕೇರಿರುವ ಬಿಜೆಪಿಯವರು ಈ ಬಾರಿಯೂ ಸಚಿವ ಶಂಕರ್, ಪರಿಷತ್ ಸದಸ್ಯ ಚಿದಾನಂದ ಗೌಡರ ಹೆಸರು ಸೇರಿಸಿದೆ. ಯಾವುದೇ ಕಾರಣಕ್ಕೂ ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಗೊಂಡಿರುವರಿಗೆ ಅವಕಾಶ ನೀಡುವುದಿಲ್ಲ. ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇದನ್ನೂ ಓದಿ:ಜೆಇ “ಆವಟೆ’ ಬ್ರಹ್ಮಾಂಡ ಆಸ್ತಿ ಬಯಲು; 2.78 ಕೋಟಿ ರೂ. ಮೌಲ್ಯದ ಚರ-ಸ್ಥಿರಾಸ್ತಿ ಪತ್ತೆ

ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಸದಸ್ಯರಾದ ಶ್ರೀನಿವಾಸ್, ಜಿ.ಎಸ್. ಮಂಜುನಾಥ್, ಕೆ. ಚಮನ್ ಸಾಬ್, ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್. ನಾಗಭೂಷಣ್ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next