Advertisement
ಓದಿ : 48 ಎಂಪಿ ಎಐ ಟ್ರಿಪಲ್ ಕ್ಯಾಮೆರಾದೊಂದಿಗೆ ವೀವೊ ವೈ 31 ಮಾರುಕಟ್ಟೆಯಲ್ಲಿ ಲಭ್ಯ
ಇತ್ತೀಚಿನ ದಿನಗಳಲ್ಲಿ ಯಾರು ಕನ್ನಡ ಸಾಹಿತ್ಯಕ್ಕೆ ಒತ್ತು ಕೊಡದೆ, ಇಂಗ್ಲಿಷ್‌ನತ್ತ ಗಮನ ಹರಿಸುತ್ತಾರೆ. ನಮಗೆ ಎಲ್ಲ ಭಾಷೆ ಮುಖ್ಯ. ಆದರೆ, ಮೊದಲು ಮಾತೃಭಾಷೆಗೆ ಮಹತ್ವ ಕೊಡುವಂತಾಗಬೇಕು. ಕನ್ನಡ ಭಾಷೆಯನ್ನು ಬೆಳೆಸುವಲ್ಲಿ, ಉಳಿಸುವಲ್ಲಿ ಸೋಲುತ್ತಿದ್ದೇವೆ ಎಂದು
ವಿಷಾದಿಸಿದರು.
Related Articles
Advertisement
17 ಮತ್ತು 18ನೇ ಶತಮಾನದಲ್ಲಿ ಹಣದ ಹಾಗೂ ಕಲ್ಯಾಣದ ಶಾಸ್ತ್ರದಲ್ಲಿ ಹೆಚ್ಚಾಗಿ ಹೇಳಿರುವುದು ಹಣಕ್ಕಿಂತ ಕಲ್ಯಾಣ ಮುಖ್ಯ ಎಂದು ಅದಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದರು. ಇದೀಗ ನಮಗೆ ಯಾವ ಕಲ್ಯಾಣ ಮುಖ್ಯ ಎಂಬುದನ್ನು ನೋಡಿದರೆ, ಅತೀ ಹೆಚ್ಚಾಗಿ ಎಲ್ಲರೂ ಸಾಂಸ್ಕೃತಿಕ, ಸಮುದಾಯದ ಕಲ್ಯಾಣಗಳತ್ತ ಗಮನ ಹರಿಸುತ್ತಾರೆ. ಇಂದು ಸಾಹಿತ್ಯದ ಕಲ್ಯಾಣವಾಗಬೇಕು ಎಂದು ತಿಳಿಸಿದರು.ಏಷ್ಯ ಮತ್ತು ಆಫ್ರಿಕಾ ಖಂಡದ ಬಹುತೇಕ ರಾಷ್ಟ್ರಗಳಲ್ಲಿ ಬಡತನ, ನಿರುದ್ಯೋಗ, ಹಸಿವು, ಸಾಮಾಜಿಕ ಹಾಗೂ ಆರ್ಥಿಕ ದೌರ್ಬಲ್ಯಗಳಿರುವುದಿಲ್ಲ. ಅಲ್ಲಿನ ಜನರು ಕಾಯಕ ತತ್ವಗಳನ್ನು ಪ್ರತಿಪಾದಿಸದೆ ತಮ್ಮ ಕೆಲಸ ಮಾಡುವುದಿಲ್ಲ. ಆದರೆ, ನಮ್ಮ ದೇಶದಲ್ಲಿ ತತ್ವದ ಪಾಲನೆಗಿಂತ ಹೆಚ್ಚಾಗಿ ಹಣಕ್ಕೆ ಮಹತ್ವ ಕೊಡುತ್ತಿರುವುದು ದುಸ್ಥಿತಿಯಾಗಿದೆ ಎಂದು ತಿಳಿಸಿದರು. ಓದಿ : ‘ಲವ್ ಯೂ ರಚ್ಚು’ ಫಸ್ಟ್ ಲುಕ್ ಬಿಡುಗಡೆ ಹಳೆಗನ್ನಡ ಅಥವಾ ಹೊಸಗನ್ನಡ ಯಾವುದಾದರೂ ಆಗಲಿ ಸಾಹಿತ್ಯ ಬೆಳೆಸುವಲ್ಲಿ ಬಹಳಷ್ಟು ಪರಿಶ್ರಮ ಇದೆ. ಪ್ರಾಚೀನ ಸಾಹಿತ್ಯಗಳೊಂದಿಗೆ ಬರಗೂರು ರಾಮಚಂದ್ರಪ್ಪ, ಚನ್ನವೀರ ಕಣವಿ, ಕಲಬುರ್ಗಿ, ತ್ರಿವೇಣಿ, ಚಂದ್ರಶೇಖರ ಪಾಟೀಲ್, ಭಗವಾನ್ ಸೇರಿದಂತೆ ಮಹಾನ್ ಚಿಂತಕರ ಸಾಹಿತ್ಯಗಳನ್ನು ನಾವೆಲ್ಲರೂ ಓದಿ, ಜೀವನದಲ್ಲಿ ಅನುಸರಿಸಿಕೊಳ್ಳಬೇಕು. ಸಾಹಿತ್ಯವನ್ನು ಬೆಳೆಸಬೇಕು ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾನಿಲಯ ದೊಡ್ಡ ಸಾಧನೆ ಮಾಡಿದೆ. ಕರ್ನಾಟಕದ 70 ವಿಶ್ವವಿದ್ಯಾಲಯದ ಪೈಕಿ ಮೊದಲನೇ ಸ್ಥಾನದಲ್ಲಿದೆ. ಭಾರತದ 1ಸಾವಿರ ವಿವಿಯ ಪೈಕಿ 73ನೇ ಸ್ಥಾನದಲ್ಲಿದೆ. ಆದರೆ ಆ ಸ್ಥಾನವನ್ನು 33ನೇ ಸ್ಥಾನಕ್ಕೆ ತರಬೇಕೆಂಬ ಪ್ರಯತ್ನದಲ್ಲಿದ್ದೇನೆ. ಏಷ್ಯಾದ 5
ಸಾವಿರ ವಿವಿ ಪೈಕಿ 451ನೇ ಸ್ಥಾನದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಯಕ್ಷಗಾನ ಕಲಾವಿದ ನಾಗೇಶ ಅಣೆÌàಕರ್ ಅಧ್ಯಕ್ಷತೆ ವಹಿಸಿದ್ದರು. ಪದ್ಮಾ ಮೂರ್ತಿ, ಗಿರಿಜಾ ಮಾಲೀ ಪಾಟೀಲ್, ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟೀನ್ ಡಿಸೌಜಾ, ಸುಬ್ರಮಣ್ಯ ನಾಡಿಗೇರ್, ಈ.ರವೀಶ, ಸೋಮನಾಥ ಸಾಲಿಮಠ, ಕಲಾಕುಂಚ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್‌ಶೆಣೈ, ಅಧ್ಯಕ್ಷ ಕೆ.ಎಚ್. ಮಂಜುನಾಥ್, ಹೇಮಾ ಶಾಂತಪ್ಪ ಪೂಜಾರಿ ಇತರರಿದ್ದರು. ಓದಿ : ಕನ್ನಡದಲ್ಲೂ ಬರ್ತಿದೆ ಆರ್‌ಜಿವಿ ‘ಡಿ ಕಂಪೆನಿ’