Advertisement

ದೂಡಾದಿಂದ ಅಮರ್‌ ಜವಾನ್‌ ಸ್ಮಾರಕ ನಿರ್ಮಾಣ

08:26 PM Jun 20, 2021 | Team Udayavani |

ದಾವಣಗೆರೆ : ಹುತಾತ್ಮ ಸೈನಿಕರ ನೆನಪಿಗಾಗಿ ನಗರದ ಎಸ್‌. ನಿಜಲಿಂಗಪ್ಪ ಬಡಾವಣೆಯಲ್ಲಿನ ವರ್ತುಲ ರಸ್ತೆ ವೃತ್ತದ (ಸರ್ಕಾರಿ ನೌಕರರ ಸಮುದಾಯ ಭವನದ ಎದುರು) ಬಳಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಾಯ್ದಿರಿಸಲಾದ ಬಯಲು ಜಾಗದಲ್ಲಿ ಅಮರ್‌ ಜವಾನ್‌ ಸ್ಮಾರಕ ನಿರ್ಮಿಸಲು ಕಾಮಗಾರಿ ಕೈಗೊಳ್ಳಲಾಗಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ತಿಳಿಸಿದರು.

Advertisement

ದೂಡಾ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಅಮರ್‌ ಜವಾನ್‌ ಸ್ಮಾರಕದ ಜೊತೆಗೆ ಹುತಾತ್ಮರಾದ ಸೈನಿಕರ ನೆನಪಿಗಾಗಿ ದೇಶದಲ್ಲಿಯೇ ಉತ್ತಮವಾದ ಸ್ಮಾರಕ ಹಾಗೂ ಸೌಂದಯಕರಣ ಉದ್ಯಾನವನವನ್ನಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಾಧಿಕಾರದ ವತಿಯಿಂದ 63 ಲಕ್ಷ ರೂ. ಕಾಮಗಾರಿ ಮುಕ್ತಾಯ ಹಂತದಲ್ಲಿದೆ.

ಉದ್ಯಾನವನಕ್ಕೆ ಹೆಚ್ಚುವರಿಯಾಗಿ ಪ್ರಾಧಿಕಾರದಿಂದ ಒಂದು ಕೋಟಿ ರೂ. ಹಣ ನಿಗದಿ ಮಾಡಿ ಹೆಚ್ಚು ಅಭಿವೃದ್ಧಿ ಮಾಡಲು ಸಂಸದ ಜಿ.ಎಂ. ಸಿದ್ದೇಶ್ವರವರು ಸೂಚನೆ ನೀಡಿದ್ದಾರೆ ಎಂದರು.

ಸೈನಿಕ ಸಂಘದ ಮಾಜಿ ಅಧ್ಯಕ್ಷ ಸತ್ಯಪ್ರಕಾಶ ಮಾತನಾಡಿ, ಮೈದಾನದ ಮಧ್ಯ ಭಾಗದಲ್ಲಿ ಫ್ಲಾಟ್‌ಫಾರ್ಮ್, ಕೆಳ ಭಾಗದಲ್ಲಿ ಪ್ರವಾಸಿಗರಿಗೆ ಧ್ಯಾನ ಮಾಡಲು ಒಂದು ಚಿಕ್ಕ ಕೊಠಡಿ ಹಾಗೂ ಮೈದಾನದ ಮೂಲೆಯಲ್ಲಿ (ಸರ್ಕಲ್‌) ಒಂದು ಓಪನ್‌ ಆಡಿಟೋರಿಯಂ ರೀತಿಯ ವೇದಿಕೆ ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕೆಂದು ಸಲಹೆ ನೀಡಿದರು. ನಕ್ಷೆಗಳನ್ನು ತಯಾರಿಸಿ ಕಚೇರಿಗೆ ಒಂದು ಡೆಮೋ ಮಾದರಿ ನೀಡಬೇಕೆಂದು ದೂಡಾ ಅಧ್ಯಕ್ಷರು ಆಯುಕ್ತರಿಗೆ ಮತ್ತು ಸೈನಿಕ ಸಂಘದವರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next