ದಾವಣಗೆರೆ: ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ, ಜಿಲ್ಲಾ ವರದಿಗಾರರ ಕೂಟ, ಜಿಲ್ಲಾ ಯೋಗ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಜೂ.21 ರಂದು 7ನೇ ಅಂತಾರಾಷ್ಟ್ರೀಯ ಯೋಗ ದಿನ ಹಮ್ಮಿಕೊಳ್ಳಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಯೋಗಾಸಕ್ತರ ಮನೆಗಳಲ್ಲಿ ಯೋಗ ದಿನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
7ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂ.18 ರಿಂದ 20ರವರೆಗೆ ವಿವಿಧ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂ. 18 ರ ಶುಕ್ರವಾರ ಬೆಳಗ್ಗೆ 10.30ಕ್ಕೆ ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆಯಲ್ಲಿರುವ ಹಿಮೋμಲಿಯಾ ಸೊಸೈಟಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ರಕ್ತದಾನ ಮಾಡಿದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಕೊರೊನಾ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಜೂ.19ರ ಶನಿವಾರ ಬೆಳಗ್ಗೆ 9ಕ್ಕೆ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಸಂಚಾರಿ ಪೊಲೀಸ್ ಸಿಬ್ಬಂದಿಗೆ ಹಬೆ ಯಂತ್ರ ವಿತರಣೆ ಮಾಡಲಾಗುವುದು. ಅಂದು ಮಧ್ಯಾಹ್ನ 12 ರಿಂದ ಸಂಜೆ 5ರವರೆಗೆ 8 ವರ್ಷ ಮೇಲ್ಪಟ್ಟವರಿಗೆ ಆನ್‌ಲೈನ್ ಮೂಲಕ ಯೋಗಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯವರು ಮಾತ್ರವೇ ಭಾಗವಹಿಸಬೇಕು. ಆಯ್ಕೆಯಾದ ಯೋಗಪಟುಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಜೂ.20 ರ ಭಾನುವಾರ ಬೆಳಗ್ಗೆ 6ಕ್ಕೆ ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆ, ಶಿರಮಗೊಂಡನಹಳ್ಳಿ, ಬಾಡ ಕ್ರಾಸ್‌ನಲ್ಲಿರುವ ಕೋವಿಡ್ ಕೇರ್ ಸೆಂಟರ್ ಗಳಲ್ಲಿನ ಕೋವಿಡ್ ಸೋಂಕಿತರಿಗೆ ಆರೋಗ್ಯ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೋವಿಡ್ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಜೂ.21ರ ಸೋಮವಾರ ಬೆಳಗ್ಗೆ 6 ರಿಂದ 8ರ ವರೆಗೆ ಯೋಗಾ ಯೋಗ ಶೀರ್ಷಿಕೆಯಡಿ 7ನೇ ಅಂತಾರಾಷ್ಟ್ರೀಯ ಯೋಗ ದಿನ ನಡೆಯಲಿದೆ. ಯೋಗಾಸಕ್ತರು ತಮ್ಮ ಮನೆಗಳಲ್ಲಿ ಯೋಗ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ವೈದ್ಯಶ್ರೀ ಚನ್ನಬಸವಣ್ಣನವರು ಆನ್ ಲೈನ್ ಮೂಲಕ ಯೋಗ ಪ್ರಾತ್ಯಕ್ಷಿತೆ ನಡೆಸಿಕೊಡುವರು.
ಫೇಸ್‌ಬುಕ್, ಯೂಟ್ಯೂಬ್, ಗೂಗಲ್ ಮೀಟ್, ಸ್ಥಳೀಯ ಟಿ.ವಿ ಚಾನಲ್‌ಗಳಲ್ಲಿ ಮೂಲಕ ವೀಕ್ಷಣೆ ಮಾಡಬಹುದು ಎಂದು ತಿಳಿಸಿದರು. ಯೋಗ ದಿನದಂದು ಯೋಗ ಬಂಧುಗಳು ಯಾವುದೇ ಯೋಗದ, ಸೂರ್ಯ ನಮಸ್ಕಾರ, ವ್ಯಾಯಾಮಗಳನ್ನು ವೈಯಕ್ತಿಕ, ಕುಟುಂಬ ಅಥವಾ ಗ್ರೂಪ್ ನಲ್ಲಿ ರೆಕಾರ್ಡ್ ಮಾಡಿ 1 ನಿಮಿಷದ ವಿಡಿಯೋವನ್ನು 94800- 51462, 98444-43119, 99163-31671, 90087-35273ಗೆ ಕಳಿಸಬೇಕು. ಆಯ್ದ 10 ವಿಡಿಯೋಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ| ಶಂಕರಗೌಡ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬೂಸ್ಟ್ ಕಿಟ್ ವಿತರಿಸಲಾಗಿದೆ. ಅರ್ಸೆನಿಕ್ ಆಲ್ಟಾÅ(ಹೋಮಿಯೋಪಥಿ ಔಷಧಿ) ಒಂದು ಮಾತ್ರೆಯನ್ನ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಮಾತ್ರೆ ತೆಗೆದುಕೊಳ್ಳಬೇಕು. ಪ್ರತಿ ದಿನ ಬೆಳಗ್ಗೆ ಮತ್ತು ರಾತ್ರಿ ಊಟಕ್ಕೆ ಮುನ್ನ ಚವ್ಯನ್‌ಪ್ರಾಶ್ ತೆಗೆದುಕೊಳ್ಳಬೇಕು. ಅರ್ಕೆ-ಅಜೀಬ್ ನ 2 ಹನಿಗಳನ್ನು ಮಾಸ್ಕ್, ಕರವಸ್ತ್ರಕ್ಕೆ ಹಾಕಿಕೊಂಡು ಬಳಸಬಹುದು. ಸಂಶಮನಿ ವಟಿ (ಆಯುರ್ವೇದ) 2 ಮಾತ್ರೆಗಳನ್ನು ಬೆಳಗ್ಗೆ ಮತ್ತು ರಾತ್ರಿ ಊಟದ ನಂತರ ತೆಗೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್. ವಾಸುದೇವ ರಾಯ್ಕರ್, ನಿರ್ದೇಶಕರಾದ ಎನ್. ಪರಶುರಾಮ್, ನಿರಂಜನ್ ಅಣಬೂರ್ ಮs…, ಜಯ್ಯಣ್ಣ ಬಾದಾಮಿ, ಅನಿಲ್ ರಾಯ್ಕರ್, ವಿರೂಪಾಕ್ಷ ಜವಳಿ, ನಾಗರಾಜ್, ಪ್ರಕಾಶ್ ಉತ್ತಂಗಿ ಇತರರು ಇದ್ದರು.