Advertisement

ರೇಣುಕಾಚಾರ್ಯ ವಾಸ್ತವ್ಯ ಅವಹೇಳನ ಸಲ್ಲ

09:53 PM Jun 18, 2021 | Team Udayavani |

ಹೊನ್ನಾಳಿ: ತಾಲೂಕಿನ ಅರಬಗಟ್ಟೆ ಗ್ರಾಮದ ವಸತಿ ಶಾಲೆಯ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಾಸ್ತವ್ಯ ಹೂಡಿದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಇಲ್ಲಿ ಕ್ವಾರಂಟೈನ್‌ನಲ್ಲಿರುವ ಮಹಿಳೆಯರನ್ನು ನೀವು ಅವಮಾನಿಸಿದ್ದೀರಿ ಎಂದು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇರುವ ತಾಲೂಕಿನ ಹೊಸಹಳ್ಳಿ ಗ್ರಾಮದ ನಯನ ಅವರು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ತಾಲೂಕಿನ ಅರಬಗಟ್ಟೆ ಗ್ರಾಮದ ವಸತಿ ಶಾಲೆಯ ಕೋವಿಡ್‌ ಕೇರ್‌ ಸೆಂಟರ್‌ನ ಸೋಂಕಿತರಿಗೆ ಹಣ್ಣು, ನೀರಿನ ಬಾಟಲ್‌ಗ‌ಳನ್ನು ವಿತರಿಸಲು ಗುರುವಾರ ಆಗಮಿಸಿದ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರನ್ನು ಪ್ರಶ್ನಿಸಿ ಅವರು ಮಾತನಾಡಿದರು. ಅರಬಗಟ್ಟೆ ಗ್ರಾಮದ ವಸತಿ ಶಾಲೆಯ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಹಲವಾರು ಮಹಿಳೆಯರು ಕ್ವಾರಂಟೈನ್‌ನಲ್ಲಿದ್ದಾರೆ. ಇಲ್ಲಿ ನನ್ನೊಂದಿಗೆ ನಮ್ಮ ತಾಯಿಯೂ ಇದ್ದಾರೆ.

ಹೀಗೆ ನೀವು ಮಾತನಾಡಿದ್ದು ಎಷ್ಟು ಸರಿ? ರೇಣುಕಾಚಾರ್ಯ ಅವರು ಇಲ್ಲಿ ವಾಸ್ತವ್ಯ ಹೂಡುತ್ತಿರುವ ಬಗ್ಗೆ ನೀವು ನಿಮ್ಮ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವುದು ನಮ್ಮ ಮನಸ್ಸಿಗೆ ಆಘಾತವನ್ನುಂಟುಮಾಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿರುವ ವೀಡಿಯೋವನ್ನು ಪ್ರದರ್ಶಿಸಿ ಇದಕ್ಕೆ ನೀವು ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸದಾ ನಮ್ಮೊಂದಿಗೆ ಇರುತ್ತಾರೆ. ಊಟ-ಉಪಾಹಾರ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದಾರೆ. ತಮ್ಮ ಮನೆಯನ್ನು ತೊರೆದು ಇಲ್ಲಿಯೇ ವಾಸ್ತವ್ಯ ಹೂಡುವ ಮೂಲಕ ಅವರು ನಮ್ಮೊಂದಿಗೆ ಇದ್ದಾರೆ. ನೀವು ವಾಸಿಯಾಗಿ ಮನೆಗೆ ತೆರಳುವವರೆಗೂ ನಾನು ಅರಬಗಟ್ಟೆ ಗ್ರಾಮದ ವಸತಿ ಶಾಲೆಯ ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿಯೇ ನಿಮ್ಮೊಂದಿಗೆ ಇರುತ್ತೇನೆ ಎನ್ನುತ್ತಿದ್ದಾರೆ.

ನಮ್ಮನ್ನು ಅವರು ತಾಯಿ, ಅಕ್ಕ-ತಂಗಿ ಎಂದು ಸಂಬೋ ಧಿಸುತ್ತಾರೆ. ಅವರಂಥ ಶಾಸಕರನ್ನು ಪಡೆದ ನಾವೇ ಧನ್ಯರು. ಅವರು ನಮ್ಮ ರಾಜ್ಯವಷ್ಟೇ ಅಲ್ಲದೇ ರಾಷ್ಟ್ರಾದ್ಯಂತ ಉತ್ತಮ ಹೆಸರು ಗಳಿಸಿದ್ದಾರೆ. ಅವರು ವರ್ಲ್ಡ್ ಫೇಮಸ್‌. ಅವರ ಬಗ್ಗೆ ನೀವು ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು. ನಯನ ಅವರ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ನನಗೆ ಮಹಿಳೆಯರ ಬಗ್ಗೆ ಅಪಾರ ಗೌರವವಿದೆ. ಅರಬಗಟ್ಟೆ ಗ್ರಾಮದ ವಸತಿ ಶಾಲೆಯ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇರುವ ಮಹಿಳೆಯರ ಬಗ್ಗೆ ನಾನು ಮಾತನಾಡಿಲ್ಲ. ನೀವು ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ ಎಂದು ತಿಳಿಸಿದರು. ನನ್ನ ಮಡದಿ, ಇಬ್ಬರು ಸೊಸೆಯಂದಿರು ಸೇರಿದಂತೆ ನಮ್ಮ ಮನೆಯಲ್ಲೂ ಮಹಿಳೆಯರಿದ್ದಾರೆ. ಮಹಿಳೆಯರ ಬಗ್ಗೆ ನನಗೆ ಅಪಾರ ಗೌರವವಿದೆ.

Advertisement

ದಯವಿಟ್ಟು ಯಾರೂ ಅನ್ಯಥಾ ಭಾವಿಸಬಾರದು ಎಂದು ಹೇಳಿದರು. ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರ ಸ್ಪಷ್ಟನೆಯಿಂದ ತೃಪ್ತರಾಗದ ಮಹಿಳೆಯರು ಕಾಂಗ್ರೆಸ್‌ ವತಿಯಿಂದ ವಿತರಿಸಲು ತಂದಿದ್ದ ಹಣ್ಣು-ಮಿನರಲ್‌ ವಾಟರ್‌ಗಳ ಬಾಟಲ್‌ಗ‌ಳನ್ನು ತಿರಸ್ಕರಿಸಿ ತಮ್ಮ ವಾಸ್ತವ್ಯದ ಕೊಠಡಿಗಳತ್ತ ಹೆಜ್ಜೆಹಾಕಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ಇತರ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next