ದಾವಣಗೆರೆ:ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಬುಧವಾರ 90ನೇ ವರ್ಷ ಪೂರೈಸಿ 91ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು, ಗಣ್ಯರು ಜನ್ಮದಿನದ ಶುಭಾಶಯ ಕೋರಿದರು.
ಶಾಮನೂರು ಶಿವಶಂಕರಪ್ಪನವರ ಮಕ್ಕಳಾದ ಮಂಜುಳಾ, ಶೈಲಜಾ, ಸುಧಾ, ಮೀನಾ, ಎಸ್.ಎಸ್. ಬಕ್ಕೇಶ್, ಎಸ್.ಎಸ್. ಗಣೇಶ್, ಎಸ್.ಎಸ್. ಮಲ್ಲಿಕಾರ್ಜುನ್, ಡಾ| ಎಸ್.ಬಿ. ಮುರುಗೇಶ್ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು, ಸಂಬಂ ಧಿಕರು ಶುಭಾಶಯ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ವಿಜಯಮಹಾಂತೇಶ ದಾನಮ್ಮನವರ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ಗಿರೀಶ್, ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಸತೀಶ್, ಬಾಪೂಜಿ ಆಸ್ಪತ್ರೆ ನಿರ್ದೇಶಕ ಡಾ| ಕುಮಾರ್, ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ನಿರ್ದೇಶಕ ಡಾ| ಎನ್.ಕೆ. ಕಾಳಪ್ಪನವರ್, ಪ್ರಾಚಾರ್ಯ ಡಾ| ಬಿ.ಎಸ್. ಪ್ರಸಾದ್, ಡಾ| ಅರುಣಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಅಣಜಿ ಚಂದ್ರಶೇಖರ್, ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಗಳ ಸಮಿತಿ, ತರಳಬಾಳು ಸೇವಾ ಸಮಿತಿ, ಸಾಯಿಬಾಬಾ ದೇವಸ್ಥಾನ ಸಮಿತಿ,ಪೌರಕಾರ್ಮಿಕರ ಸಂಘದವರು, ಆದಿ ಕರ್ನಾಟಕ ವಿದ್ಯಾಸಂಸ್ಥೆಯ ಪದಾಧಿ ಕಾರಿಗಳು, ಖಾಸಗಿ ಬಸ್ ಮಾಲೀಕರ ಸಂಘದ ಪದಾ ಧಿಕಾರಿಗಳು ತಂಜೀಮುಲ್ ಮುಸ್ಲಿàಮಿನ್ ಕಮಿಟಿಯವರು, ಮಾಜಿ ಅಧ್ಯಕ್ಷ ಸೈಯದ್ ಸೈಪುಲ್ಲಾ, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್, ಜಿಪಂ ಸದಸ್ಯ ಕೆ.ಎಸ್. ಬಸವಂತಪ್ಪ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಕೆ. ಚಮನ್ ಸಾಬ್, ಅಬ್ದುಲ್ ಲತೀಫ್, ಕಲ್ಲಳ್ಳಿ ನಾಗರಾಜ್, ಜಿ.ಡಿ. ಪ್ರಕಾಶ್, ವಿನಾಯಕ ಪೈಲ್ವಾನ್, ಪಾಮೇನಹಳ್ಳಿ ನಾಗರಾಜ್, ಜಾಕೀರ್, ಶμಕ್ ಪಂಡಿತ್, ಸಯೀದ್ ಚಾರ್ಲಿ, ಸವಿತಾ ಗಣೇಶ್ ಹುಲ್ಮನಿ, ಸುಧಾ ಇಟ್ಟಿಗುಡಿ ಮಂಜುನಾಥ್, ಶ್ವೇತಾ ಶ್ರೀನಿವಾಸ್, ಆಶಾ ಉಮೇಶ್, ಮೀನಾಕ್ಷಿ ಜಗದೀಶ್, ಉದಯ್ ಕುಮಾರ್, ಬಿ.ಎಚ್. ವೀರಭದ್ರಪ್ಪ, ಮುನ್ನಾ ಪೈಲ್ವಾನ್, ಗೌರಮ್ಮ ಎಸ್.ಎನ್. ಚಂದ್ರಪ್ಪ ಇತರರು ಶುಭ ಕೋರಿದರು. ಜನ್ಮದಿನದ ಅಂಗವಾಗಿ ದೇವರಾಜ ಅರಸು ಬಡಾವಣೆ, ಐಎಂಎ ಹಾಲ್ ಒಳಗೊಂಡಂತೆ ಇತರೆಡೆ ಉಚಿತವಾಗಿ ಕೊರೊನಾ ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಮಹಾನಗರ ಪಾಲಿಕೆ ಸದಸ್ಯರು ಶಾಮನೂರು ಶಿವಶಂಕರಪ್ಪ ಜನ್ಮದಿನದ ಅಂಗವಾಗಿ ಆಹಾರ ಕಿಟ್ ವಿತರಿಸಿದರು.