Advertisement

ಗಣರಾಜ್ಯೋತ್ಸವ ಸಂಭ್ರಮಕ್ಕೆ ಬಾರದ ಜನ

02:45 PM Jan 27, 2021 | |

ದಾವಣಗೆರೆ: ಜಿಲ್ಲಾಡಳಿತ ವತಿಯಿಂದ ಮಂಗಳವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಗಣರಾಜ್ಯೋತ್ಸವ
ಕಾರ್ಯಕ್ರಮ ಸಾರ್ವಜನಿಕರೇ ಇಲ್ಲದೇ ಕೆಲವೇ ಕೆಲವು ಜನಪ್ರತಿನಿಧಿಗಳು ಹಾಗೂ ಬೆರಳೆಣಿಕೆ ಸಂಖ್ಯೆಯ ಅಧಿಕಾರಿಗಳ ಸಮ್ಮುಖದಲ್ಲಿ ನೀರಸವಾಗಿ ನಡೆಯಿತು.

Advertisement

ಕೋವಿಡ್‌-19 ಕಾರಣದಿಂದಾಗಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಕಲರವ ಇರಲಿಲ್ಲ. ಇನ್ನು ಆಹ್ವಾನ ಪತ್ರಿಕೆಯಲ್ಲಿ ಹೆಸರು ಪ್ರಕಟಿಸಿದ ಎಲ್ಲ ಜನಪ್ರತಿನಿಧಿಗಳೂ ಕಾರ್ಯಕ್ರಮದಲ್ಲಿರಲಿಲ್ಲ. ಸಾವಿರಾರು ಸಂಖ್ಯೆಯಲ್ಲಿರಬೇಕಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳೂ ಗೋಚರಿಸಲಿಲ್ಲ. ಹೀಗಾಗಿ ರಾಷ್ಟ್ರೀಯ ಕಾರ್ಯಕ್ರಮ ಕಾಟಾಚಾರದ ಕಾರ್ಯಕ್ರಮದಂತೆ ನಡೆಯಿತು ಎಂಬ ಆರೋಪ
ಕೇಳಿಬಂದಿತು.

ಕ್ರೀಡಾಂಗಣ ಪ್ರವೇಶಿಸುವ ಗೇಟ್‌ಗಳಲ್ಲಿ ಹಾಗೂ ಕ್ರೀಡಾಂಗಣ ಸಂಪರ್ಕಿಸುವ ಮುಖ್ಯ ರಸ್ತೆಗಳಲ್ಲಿಯೂ ನಿಂತಿದ್ದ ಪೊಲೀಸರು ಸಾರ್ವಜನಿಕರ
ಸ್ವತ್ಛಂದ ಪ್ರವೇಶಕ್ಕೆ ಅಡ್ಡಿಯಾದರು. ಪೊಲೀಸರ ಅತಿಯಾದ ಭದ್ರತಾ ಕ್ರಮದಿಂದಾಗಿ ಸಾರ್ವಜನಿಕ ಗಣರಾಜೋತ್ಸವ ಕಾರ್ಯಕ್ರಮಕ್ಕೆ ಸಾರ್ವಜನಿಕರೇ ಇಲ್ಲದಂತಾಯಿತು. ಹೀಗಾಗಿ ಕ್ರೀಡಾಂಗಣದ ಸುತ್ತಲಿನ ಮೆಟ್ಟಿಲುಗಳು ಖಾಲಿ ಖಾಲಿಯಾಗಿದ್ದವು. ಇನ್ನು ಅಧಿಕಾರಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ಗಣರಾಜ್ಯ ದಿನವನ್ನು ಸಂಪೂರ್ಣ ರಜಾ ದಿನವನ್ನಾಗಿಸಿಕೊಂಡು ಮನೆಯಲ್ಲಿಯೇ ಉಳಿದಿದ್ದು ಕಾರ್ಯಕ್ರಮ ಅಂದಗೆಡುವಂತಾಯಿತು.ಇದ್ದಷ್ಟು ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, 14 ಪುಟಗಳ ಭಾಷಣ ಓದಿ ಮುಗಿಸಿದರು. ಕೋವಿಡ್‌-19 ಕಾರಣದಿಂದಾಗಿ ಜಿಲ್ಲಾಡಳಿತ ಕಾರ್ಯಕ್ರಮವನ್ನು ಸರಳವಾಗಿ ಸಂಘಟಿಸಿರಬಹುದು ಎಂದು ಕೊಂಡರೂ ಸರಳ ಕಾರ್ಯಕ್ರಮವೂ ಹಲವು ಅದ್ವಾನಗಳಿಗೆ ಸಾಕ್ಷಿಯಾದದ್ದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿತು.

ಪ್ರಚಾರ ಕೆಲಸಕ್ಕೂ ಅಡ್ಡಿ: ಕಾರ್ಯಕ್ರಮದ ವರದಿಗಾಗಿ ಬಂದಂಥ ಪತ್ರಕರ್ತರಿಗೆ ಧ್ವಜ ಸ್ತಂಭದ ಬಲಭಾಗದಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಪತ್ರಕರ್ತರು ಈ ಸ್ಥಳ ಬಿಟ್ಟು ಬೇರೆ ಕಡೆ ಓಡಾದಂತೆ ನೋಡಿಕೊಳ್ಳಲು ಇಲ್ಲಿಯೂ ಪೊಲೀಸ್‌ ಭದ್ರತೆ ಬಿಗಿ ಮಾಡಲಾಗಿತ್ತು. ಪತ್ರಿಕಾ
ಛಾಯಾಗ್ರಾಹಕರು, ವಿಡಿಯೋ ಛಾಯಾಗ್ರಾಹಕರು ಇದ್ದ ಸ್ಥಳದಲ್ಲೇ ನಿಂತು ರಾಷ್ಟ್ರ ಧ್ವಜಾರೋಹಣ ಸೇರಿದಂತೆ ಕಾರ್ಯಕ್ರಮದ ವಿವಿಧ ಚಿತ್ರಗಳನ್ನು ತೆಗೆಯಲು ಸಾಧ್ಯವಾಗದೆ ಪರಿತಪಿಸಿದರು.
ಕೆಲ ಛಾಯಾಗ್ರಾಹಕರು ಮುಂದೆ ಹೋಗಿ ಫೋಟೋ ತೆಗೆಯಲು ಯತ್ನಿಸಿದರಾದರೂ ಪೊಲೀಸರು ಅವರನ್ನೆಲ್ಲ ಬಲವಂತದಿಂದ ಹಿಮ್ಮೆಟ್ಟಿಸಿದರು. ವಾರ್ತಾ ಇಲಾಖೆಯ ಅಧಿಕಾರಿಯನ್ನೂ ಬಿಡದೆ ಪೊಲೀಸರು ತಮ್ಮ “ಬಿಗಿ ಭದ್ರತೆ’ ಪ್ರದರ್ಶಿಸಿ ಸರ್ಕಾರದ ಪ್ರಚಾರ ಕೆಲಸಕ್ಕೂ
ಅಡ್ಡಿಪಡಿಸಿದ್ದು ಗಮನ ಸೆಳೆಯಿತು.

ಗಣ್ಯರಿಂದ ವಿಷಾದ: ರಾಷ್ಟ್ರ ಧ್ವಜಾರೋಹಣ, ಪರೇಡ್‌ ಸೇರಿದಂತೆ ಇನ್ನಿತರ ಪ್ರಮುಖ ಕಾರ್ಯಗಳಿಗೆ ಪತ್ರಿಕಾ ಹಾಗೂ ವಿಡಿಯೋ ಛಾಯಾಗ್ರಾಹಕರನ್ನು ದೂರವಿಟ್ಟ ಜಿಲ್ಲಾಡಳಿತದ ಅಧಿಕಾರಿಗಳು, ವಿವಿಧ ಸಾಧಕರಿಗೆ ಸನ್ಮಾನ ಮಾಡುವಾಗ ಛಾಯಾಗ್ರಾಹಕರನ್ನು ಕೈಬೀಸಿ
ಕರೆದರು.

Advertisement

ಆಗ ಯಾರೂ ಫೋಟೋ ತೆಯಲು ಹೋಗದೇ ಇದ್ದಾಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್‌, ಸಂಸದ ಜಿ.ಎಂ. ಸಿದ್ದೇಶ್ವರ್‌ ಸೇರಿದಂತೆ ಶಾಸಕರು, ಹಿರಿಯ ಅಧಿಕಾರಿಗಳು ಪತ್ರಕರ್ತರ ಬಳಿ ಬಂದು ಘಟನೆಗೆ ವಿಷಾದ ವ್ಯಕ್ತಪಡಿಸಿ, ಪತ್ರಕರ್ತರ ಮನವೊಲಿಸಲು ಪ್ರಯತ್ನಿಸಿದರು.
ಆದರೆ, ಪತ್ರಕರ್ತರು ಛಾಯಾಗ್ರಹಣ ಮಾಡಲು ನಿರಾಕರಿಸಿದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪತ್ರಿಕಾಗೋಷ್ಠಿಯಿಂದಲೂ ದೂರ ಉಳಿದರು.

ಓದಿ : ಬಿಜೆಪಿ ಕುತಂತ್ರದ ಬಗ್ಗೆ ಜಾಗೃತರಾಗಿ: ಬಾಬಾಗೌಡ

Advertisement

Udayavani is now on Telegram. Click here to join our channel and stay updated with the latest news.

Next