ಹೊನ್ನಾಳಿ: ಕೋವಿಡ್ ಕೇರ್ ಸೆಂಟರ್‌ಗಳನ್ನು ಸೋಂಕಿತರು ತಮ್ಮ ಮನೆ ಎಂದು ಭಾವಿಸಿ ಸ್ವತ್ಛವಾಗಿಟ್ಟುಕೊಳ್ಳಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕಿವಿಮಾತು ಹೇಳಿದರು.
ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಭಾನುವಾರ ಸೋಂಕಿತರನ್ನುದ್ದೇಶಿಸಿ ಅವರು ಮಾತನಾಡಿದರು. ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಬೇಕೆಂಬ ಉದ್ದೇಶದಿಂದ ನಾನು ಕೋವಿಡ್ ಕೇರ್ ಸೆಂಟರ್‌ನಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ. ನನಗೆ ಎರಡು ಬಾರಿ ಪಾಸಿಟಿವ್ ಬಂದಾಗ ನಾನೇ ನನ್ನ ಕೊಠಡಿಯನ್ನು ಸ್ವತ್ಛಗೊಳಿಸಿಕೊಳ್ಳುತ್ತಿದ್ದೆ.
ಅದೇ ರೀತಿ ನೀವು ಕೂಡ ನಿಮ್ಮ ಕೊಠಡಿಗಳನ್ನು ಸ್ವತ್ಛಗೊಳಿಸಿಕೊಳ್ಳುವ ಮೂಲಕ ಕೋವಿಡ್ ಕೇರ್ ಸೆಂಟರ್ ಸ್ವತ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರಿಗೆ ಶಾಸಕರು ಪ್ರತಿನಿತ್ಯ ಬೆಳಗ್ಗೆ ಯೋಗಾಭ್ಯಾಸ ಮಾಡಿಸುತ್ತಿದ್ದಾರೆ. ದೊಡ್ಡೇರಿ ಗ್ರಾಮದ ರೈತ ಸೋಮಣ್ಣ ಎಂಬುವವರು ತಮ್ಮ ಜಮೀನಿನಲ್ಲಿ ಬೆಳೆದ ಪಪ್ಪಾಯಿ ಹಣ್ಣನ್ನು ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರಿಗೆ ನೀಡಿದರು.
ಸುಮಾ ರೇಣುಕಾಚಾರ್ಯ, ಎಂ.ಪಿ. ರಮೇಶ್, ಮುಖಂಡರಾದ ಮಹೇಶ್ ಹುಡೇದ್, ರಂಗನಾಥ್ ಇದ್ದರು.