Advertisement
ದಾವಣಗೆರೆ: ಪ್ರಸ್ತುತ ಎದುರಿಸುತ್ತಿರುವ ಕೊರೊನಾದಂತಹ ಸಂಕಷ್ಟ ಸ್ಥಿತಿಯಲ್ಲಿ ಹಾಗೂ ಭವಿಷ್ಯದಲ್ಲಿ ಜನದಟ್ಟಣೆ ತಪ್ಪಿಸಿ ಜನಾರೋಗ್ಯ ಕಾಪಾಡುವ ದಿಸೆಯಲ್ಲಿ ಮಹಾನಗರ ಪಾಲಿಕೆ, ವಾರ್ಡ್‌ಗೊಂದು ಮಾರುಕಟ್ಟೆ ನಿರ್ಮಿಸಲು ಮಹಾನಗರ ಪಾಲಿಕೆ ಗಂಭೀರ ಚಿಂತನೆ ನಡೆಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
Related Articles
Advertisement
ಕಷ್ಟದ ಕೆಲಸವಲ್ಲ…: ಮಹಾನಗರದಲ್ಲಿ 45ವಾಡ್ ìಗಳಿದ್ದು ಪ್ರತಿ ವಾರ್ಡ್‌ನಲ್ಲಿ 10-12ಸಾವಿರದ ವರೆಗೂ ಜನಸಂಖ್ಯೆ ಇದೆ. ಪ್ರತಿ ವಾರ್ಡ್ ಎರಡೂ ಕಿ.ಮೀ. ವ್ಯಾಪ್ತಿ ಹೊಂದಿದೆ. ಪ್ರತಿ ವಾರ್ಡ್‌ನಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲು ಪಾಲಿಕೆಗೆ ಕಷ್ಟದ ಕೆಲಸವೂ ಆಗದು. ವಾರ್ಡ್‌ಗಳಲ್ಲಿರುವ ಬಯಲು ಜಾಗೆಗಳನ್ನು ಮಾರುಕಟ್ಟೆಗಾಗಿ ಬಳಸಿಕೊಂಡು ವ್ಯಾಪಾರಿಗಳಿಗೆ ಒಂದಿಷ್ಟು ನೀರು, ಶೌಚಾಲಯದಂಥ ಮೂಲಸೌಲಭ್ಯ ಹಾಗೂ ಗ್ರಾಹಕರಿಗೆ ವಾಹನ ನಿಲುಗಡೆ ವ್ಯವಸ್ಥೆ ಮಾಡಿದರೆ ಸಾಕಾಗುತ್ತದೆ. ಇನ್ನು ಇದರ ನಿರ್ವಹಣೆಗಾಗಿ ಪಾಲಿಕೆಗೆ ಒಂದಿಷ್ಟು ಆದಾಯವೂ ಸಂಗ್ರಹವಾಗುತ್ತದೆ. ವಾರ್ಡ್‌ಗೊಂದು ಮಾರುಕಟ್ಟೆ ಮಾಡಿದರೆ ಸಾವಿರಾರು ಜನರಿಗೆ ವ್ಯಾಪಾರದ ಹೊಸ ಉದ್ಯೋಗ ಸೃಷ್ಟಿಸಿದಂತೆಯೂ ಆಗುತ್ತದೆ. ಜನರಿಗೂ ತಮ್ಮ ವಾರ್ಡ್‌ನಲ್ಲಿಯೇ ಹಣ್ಣು, ತರಕಾರಿ, ಧಾನ್ಯ ಸಿಗುವ ಜತೆಗೆ ಒಂದೇ ಕಡೆ ಜನದಟ್ಟಣೆ ಆಗುವುದು ತಪ್ಪಿದಂತಾಗುತ್ತದೆ. ರೈತರಿಗೂ ವಾರ್ಡ್ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟರೆ ವಾರದ ಒಂದು ದಿನ ವಾರ್ಡ್‌ಗಳಲ್ಲಿಯೂ ರೈತ ಸಂತೆಯೂ ಮಾಡಬಹುದಾಗಿದೆ. ರೈತರಿಗೂ ತಮ್ಮ ಉತ್ಪನ್ನ ಮಾರಾಟದ ಅವಕಾಶಗಳು ಹೆಚ್ಚಾಗಿ ಉತ್ತಮ ದರವೂ ಸಿಗಲಿದೆ. ಒಟ್ಟಾರೆ ವಾರ್ಡ್‌ವಾರು ಮಾರುಕಟ್ಟೆ ನಿರ್ಮಾಣ ಮಾಡುವ ಬಗ್ಗೆ ಮಹಾನಗರ ಪಾಲಿಕೆ ಶೀಘ್ರ ಚಿಂತನೆ ಮಾಡಿ ದಿಟ್ಟ ಹೆಜ್ಜೆ ಇಡಲು ಇದು ಸಕಾಲವಾಗಿದೆ.