Advertisement
ಜಿಲ್ಲೆಯ ಸಂಸದರು, ಶಾಸಕರು ಶಿವಮೊಗ್ಗ ಮಾದರಿಯಲ್ಲಿ ನಾಲ್ಕು ದಿನ ಸಂಪೂರ್ಣ, ಮೂರು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿ, ಈಗಿನಂತೆ ಲಾಕ್‌ಡೌನ್ ಮಾಡಬೇಕು ಎಂದು ತಿಳಿಸಿದ್ದಾರೆ. ಸಂಪೂರ್ಣ ಲಾಕ್‌ಡೌನ್ ಯಾವ ಮಾದರಿಯಲ್ಲಿ ಇರಬೇಕು ಎಂಬುದರ ಬಗ್ಗೆ ಚರ್ಚಿಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಇದಕ್ಕೂ ಮುನ್ನ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಶಿವಮೊಗ್ಗ ಮಾದರಿಯಲ್ಲಿ ವಾರಕ್ಕೆ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್ ಮಾಡಬೇಕು. ನರಪಿಳ್ಳೆಯೂ ಓಡಾಡದಂತೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲು ಆಗುವುದಿಲ್ಲ ಎಂದರು.
Related Articles
Advertisement
ಸಮಸ್ಯೆ ನಿವಾರಣೆ: ಒಂದು ವಾರದಲ್ಲಿ ಆಕ್ಸಿಜನ್ ಒಳಗೊಂಡಂತೆ ಎಲ್ಲ ಸಮಸ್ಯೆ ಬಗೆಹರಿಯಲಿದೆ. ಮುಂದಿನ ವಾರ ಲಸಿಕೆ ಬಂದರೆ ಸಮಸ್ಯೆ ಬಗೆಹರಿಯಲಿದೆ. ಹಿಂದೆ ಲಸಿಕೆ ಹಾಕಿಸಿಕೊಳ್ಳುವಂತೆ ಗೋಗೆರೆದರೂ ಜನರು ಬರುತ್ತಿರಲಿಲ್ಲ. ಈಗ ನೂಕು ನುಗ್ಗಲು ಕಂಡು ಬರುತ್ತಿದೆ. ಎಲ್ಲವನ್ನೂ ಸರಿಪಡಿಸುವ ಕೆಲಸ ಆಗಲಿದೆ. ಲಸಿಕೆಯನ್ನ ಸಂಪೂರ್ಣವಾಗಿ ನೀಡಲಾಗುವುದು. ಅಧಿಕಾರಿಗಳು ಯುದೊœàಪಾದಿಯಲ್ಲಿ ಕೆಲಸ ಮಾಡುವ ಮೂಲಕ ಜಿಲ್ಲೆಯ ಜನರ ಪ್ರಾಣ ರಕ್ಷಣೆ ಮಾಡಬೇಕು. ನನ್ನ ಬಗ್ಗೆಯೂ ಟೀಕೆ ಮಾಡುತ್ತಿದ್ದಾರೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಕ್ಕೆ ಹೋಗುವುದಿಲ್ಲ. ನನಗೆ ನನ್ನ ಜಿಲ್ಲೆಯ ಜನರ ಪ್ರಾಣ ರಕ್ಷಣೆ ಮಾಡುವುದು ಮುಖ್ಯ. ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಸಚಿವ ಬಿ.ಎ. ಬಸವರಾಜ್ ತಿಳಿಸಿದರು.
ಆಕ್ಸಿಜನ್ ಘಟಕ: ಚನ್ನಗಿರಿಯಲ್ಲಿ 10 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಘಟಕ ಪ್ರಾರಂಭಕ್ಕೆ ಸೋಪ್ ಮತ್ತಯ ಡಿರ್ಟಜೆಂಟ್ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮುಂದೆ ಬಂದಿದ್ದಾರೆ. ಅಲ್ಲಿಯೇ ಆಮ್ಲಜನಕ ಉತ್ಪಾದನೆ ಮಾಡುವುದರಿಂದ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವರು ತಿಳಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಜಿಲ್ಲೆಗೆ 23 ಕೆ.ಎಲ್. ಆಮ್ಲಜನಕ ಬೇಕಾಗಿದೆ. 16 ಕೆ.ಎಲ್. ಮಾತ್ರ ಬರುತ್ತಿದೆ. ಟ್ಯಾಂಕರ್ ಕೊಡಿಸಿಕೊಟ್ಟರೆ ಆಮ್ಲಜನಕ ತುಂಬಿಸಿ ಕೊಡಿಸುತ್ತೇನೆ. ಗಣಿ ಇಲಾಖೆ ಸಚಿವ ಮುರುಗೇಶ್ ನಿರಾಣಿ ಅವರು ಸಹ ಟ್ಯಾಂಕರ್ ಒದಗಿಸುವುದಾಗಿ ತಿಳಿಸಿದ್ದಾರೆ.
ಆಮ್ಲಜನಕ ಎಕ್ಸ್‌ಪ್ರೆಸ್ ಮೂಲಕ ಇನ್ನೂ ಹೆಚ್ಚಿನ ಆಕ್ಸಿಜನ್ ಪಡೆಯುವಂತಾಗಬೇಕು. ಜಿಲ್ಲೆಗೆ ವ್ಯಾಕ್ಸಿನ್, ಆಮ್ಲಜನಕ, ಇಂಜೆಕ್ಷನ್ ಏನು ಬೇಕೋ ಅದನ್ನು ಪಡೆಯಲಿಕ್ಕೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡೋಣ ಎಂದು ತಿಳಿಸಿದರು.
ಜಿಲ್ಲೆಗೆ ಏನೇನೋ ಬೇಕು ಎಂಬುದರ ಬಗ್ಗೆ ಪತ್ರ ಕೊಡಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ. ಆಮ್ಲಜನಕ ಏಜೆನ್ಸಿಗಳ ಬಳಿ ಅಧಿಕಾರಿಗಳ ಹೊರತುಪಡಿಸಿ ಇತರರು ಸುಳಿಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿಗೆ ಸೂಚಿಸಿದರು. ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ. ಎನ್. ಲಿಂಗಣ್ಣ, ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.