ದೊಡ್ಡಬಳ್ಳಾಪುರ: ಘಮಘಮಿಸುವ ದವನವನ್ನು ಈ ಬಾರಿಯೂ ಹೆಚ್ಚಿನ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆಯಾದರೂ ಮಾರುಕಟ್ಟೆ ಏರುಪೇರುಗಳಿಂದ, ರೈತರಿಗೆ ಆದಾಯ ಕುಂಠಿತವಾಗುತ್ತಿದೆ. ಹೀಗಾಗಿ ಸರ್ಕಾರ ದವನಕ್ಕೆ ಪ್ರೋತ್ಸಾಹಧನ ನೀಡುವ ಯೋಜನೆ ರೂಪಿ ಸುವಂತೆ ರೈತರು ಒತ್ತಾಯಿಸಿದ್ದಾರೆ.
ದವನ ಬೆಳೆ: ತಾಲೂಕಿನಲ್ಲಿ ಸುಮಾರು 300ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ದವನ ಬೆಳೆಯುತ್ತಿದ್ದು ಕಸಬಾ ಹಾಗೂ ತೂಬಗೆರೆ ಹೋಬಳಿಯಲ್ಲಿ ಹೆಚ್ಚು ದವನ ಬೆಳೆಯುತ್ತಿದ್ದಾರೆ.
ಬೆಳೆಯುವುದು ಹೇಗೆ?: ದವನದ ಗಿಡವನ್ನು ಕೆಂಪು ಮತ್ತು ಜಿಗಟು ಮಣ್ಣು ಅಥವಾ ಕೆಸರು ಮಣ್ಣಿನಲ್ಲಿಬೆಳೆಯಲಾಗುತ್ತದೆ. ಮಣ್ಣು ಸತ್ವಯುತ ಹಾಗೂಸಾವಯವವಾಗಿದ್ದರೆ ಸೂಕ್ತ. ಬಿತ್ತನೆ ಕಾರ್ಯಅಕ್ಟೋಬರ್, ನವೆಂಬರ್‌ನಲ್ಲಿ ಮಳೆ ಕಡಿಮೆಯಾಗುತ್ತಿದ್ದಂತೆ ಆರಂಭವಾಗುತ್ತದೆ. ಚಳಿಗಾಲದಲ್ಲಿ ಮಾತ್ರ ಬೆಳೆಯಲಾಗುವ ದವನ ಸೊಪ್ಪು ಮಾರ್ಚ್ ವೇಳೆಗೆಬಹುತೇಕ ಎಲ್ಲಾ ಕಡೆ ಕೊಯ್ಲು ಆಗಲಿದೆ. ಅಕಾಲಿಕವಾಗಿ ಮಳೆ ಬಂದರೆ ದವನ ಸೊಪ್ಪಿನಲ್ಲಿ ಎಣ್ಣೆಬರುವ ಪ್ರಮಾಣ, ಸೊಪ್ಪಿನ ತೂಕ ಹಾಗೂ ಸೊಪ್ಪಿನ ಬೆಲೆ ತೀವ್ರವಾಗಿ ಕುಸಿತವಾಗಲಿದೆ ಎನ್ನುತ್ತಾರೆ ರೈತರು.
ದವನ ಬೆಳೆ: ಜಾತ್ರೆ, ದೇವರ ಉತ್ಸವ, ಹೂವಿನ ಅಲಂಕಾರ ಮೊದಲಾದ ವಿಶೇಷ ದಿನಗಳಲ್ಲಿಸುಗಂಧದ ಗಿಡ ಮೂಲಿಕೆ ದವನಕ್ಕೆ ಪ್ರಾಮುಖ್ಯತೆಇದ್ದೇ ಇದೆ. ಇದು ಶಿವನಿಗೆ ಪ್ರಿಯವಾದದ್ದೂ ಹೌದು.ಸಾಮಾನ್ಯವಾಗಿ 2 ರಿಂದ 3 ಅಡಿ ಉದ್ದ ಬೆಳೆಯುತ್ತದೆ.ದವನದ ಎಣ್ಣೆ ದೇಶದ ರಪು¤ ಸಾಮಗ್ರಿಯೂ ಹೌದು. ಸೊಪ್ಪಿನಿಂದ ತಯಾರಾಗುವ, ಸುಗಂಧ ದ್ರವ್ಯವಾದದವನದ ಎಣ್ಣೆಯನ್ನು ಮೈ ಸೋಪು, ಪೌಡರ್‌ಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.
ದವನದ ಬೆಳೆಗೆ ಮೊದಲೇ ಬೆಲೆ ನಿಗದಿ ಮಾಡಿ ಒಪ್ಪಿಗೆ ಇದ್ದರೆ ಮಾತ್ರ ಬೆಳೆಯಿರಿ ಎಂದು ಕೆಲವು ಎಣ್ಣೆ ಕಾರ್ಖಾನೆಗಳು ಹೇಳುತ್ತಿರುವುದು ರೈತರ ಆತಂಕಕ್ಕೆಕಾರಣ. ಮುಂದಿನ ಹಂಗಾಮಿಗೆ ಈ ಹಿಂದೆನೀಡುತ್ತಿದ್ದಂತೆ ದವನ ಬೆಳೆಯುವ ಎಲ್ಲಾ ರೈತರಿಗೂಪ್ರೋತ್ಸಾಹ ಧನ ನೀಡಬೇಕು. ದವನಕ್ಕೆ ಮಾರುಕಟ್ಟೆವ್ಯವಸ್ಥೆ ಕಲ್ಪಿಸಬೇಕು ಎಂದು ಹಲವು ರೈತರು ಒತ್ತಾಯಿಸಿದ್ದಾರೆ.
ಈ ಹಿಂದೆ 6 ಸಾವಿರ ಕೊಡುತ್ತಿದ್ದರು :
ದವನದ ಬೆಲೆ ಒಂದು ಟನ್‌ಗೆ 12 ಸಾವಿರದವರೆಗೂ ಇದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹಾಗೂ ನೆರೆಯ ದೇವನಹಳ್ಳಿಯಲ್ಲಿ ದವನದ ಎಣ್ಣೆಉತ್ಪಾದನೆ ಮಾಡುವ ಕಾರ್ಖಾನೆಗಳಿದ್ದು,ಸೊಪ್ಪನ್ನು ಸಗಟಾಗಿ ಖರೀದಿಸಲಾಗುತ್ತಿದೆ. ಅಲ್ಲದೇಕೆಲವು ಕಂಪನಿಗಳು ಬೀಜಗಳನ್ನು ನೀಡಿ ಬೆಳೆದ ದವನ ಖರೀದಿ ಮಾಡುತ್ತಿದ್ದಾರೆ. ಕಳೆದ 8 ವರ್ಷಗಳ ಹಿಂದೆ ಸುಗಂಧ ದ್ರವ್ಯ ಬೆಳೆ ಪ್ರೋತ್ಸಾಹಿಸುವಸಲುವಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ 5 ವರ್ಷಗಳ ಹಿಂದೆ ದವನಬೆಳೆಯುವ ಎಲ್ಲಾ ರೈತರಿಗೂ ಹೆಕ್ಟೇರ್‌ಗೆ 6 ಸಾವಿರರೂ.ಗಳವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು.ಆದರೆ, ಇತ್ತೀಚಿನ ವರ್ಷಗಳಲ್ಲಿ ಯಾವುದೇಪ್ರೋತ್ಸಾಹ ಧನ ನೀಡುತ್ತಿಲ್ಲ ಎಂದು ತಿಪ್ಪಾಪುರದ ರೈತ ತಿಮ್ಮೇಗೌಡ ತಿಳಿಸಿದ್ದಾರೆ.
ದವನ ಬೆಳೆಗೆ ತೋಟಗಾರಿಕೆ ಇಲಾಖೆಯಿಂದ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ. ಪ್ರೋತ್ಸಾಹ ಧನದ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಿದ್ದು ರೈತರ ಮನವಿಯನ್ನು ಮುಂದಿನ ಸಭೆಗಳಲ್ಲಿ ಚರ್ಚಿಸಿ, ಸರ್ಕಾರದ ಗಮನಕ್ಕೆ ತರಲಾಗುವುದು.
– ಎಂ.ಎಸ್.ದೀಪಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು
-ಡಿ.ಶ್ರೀಕಾಂತ