Advertisement

ಪ್ರಿಯಕರನಿಗೆ ಸುಪಾರಿ ನೀಡಿ ತಂದೆ ಹತ್ಯೆ ಮಾಡಿಸಿದ ಮಗಳು

09:19 PM Aug 31, 2019 | Team Udayavani |

ಹಾಸನ: ತನ್ನ ಪ್ರಿಯಕರನೊಂದಿಗೆ ಸೇರಿ ಮಗಳು 15 ಲಕ್ಷ ರೂ. ಸುಪಾರಿ ನೀಡಿ ತಂದೆಯನ್ನೇ ಕೊಲೆ ಮಾಡಿಸಿರುವ ಪ್ರಕರಣವನ್ನು ಭೇದಿಸಿರುವ ಜಿಲ್ಲೆಯ ಜಿಲ್ಲೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ರಾಮ್‌ ನಿವಾಸ್‌ ಸೆಪೆಟ್‌ ಅವರು, ಆ.26 ರಂದು ಆಲೂರು ತಾಲೂಕಿನ ಮಣಿಗನಹಳ್ಳಿ ಬಳಿ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು.

Advertisement

ಆಲೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಎಲ್ಲಾ ಪೊಲೀಸ್‌ ಠಾಣೆಗಳಿಗೂ ಮಾಹಿತಿ ನೀಡಿದ್ದರು. ಅದೇ ದಿನ ವಿದ್ಯಾ ಎಂಬ ಯುವತಿ ತನ್ನ ತಂದೆ ಬೆಂಗಳೂರಿನ ಮುನೇಶ್ವರ ನಗರದ ನಿವಾಸಿ ಮುನಿರಾಜು ಎಂಬವರು ಬೆಂಗಳೂರಿನಲ್ಲಿ ಕಾರು ಚಾಲಕರಾಗಿದ್ದು ಅವರು ಆ.23 ರಿಂದ ಕಾಣೆಯಾಗಿದ್ದಾರೆ ಎಂದು ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಳು.

ಆಲೂರು ಪೊಲೀಸರು ಹಿರೀಸಾವೆ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿ ಕಾಣೆಯಾದ ವ್ಯಕ್ತಿಯ ಫೋಟೋವನ್ನು ದೂರು ನೀಡಿದ್ದ ವಿದ್ಯಾಳಿಗೆ ತೋರಿಸಿದಾಗ ಮೃತ ವ್ಯಕ್ತಿ ತನ್ನ ತಂದೆ ಎಂದು ಆಕೆ ಗುರ್ತಿಸಿದಳು. ಆನಂತರ ತನಿಖೆ ಆರಂಭಿಸಿದ ಪೊಲೀಸರು ವಿದ್ಯಾ ಪ್ರಿಯಕರ ಚಿದಾನಂದ್‌ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಕೊಲೆಯ ರಹಸ್ಯ ಹೊರ ಬಿದ್ದಿತು ಎಂದು ಹೇಳಿದರು.

ವಿಚ್ಛೇದನ ಪಡೆದಿದ್ದ ವಿದ್ಯಾ: ಬೆಂಗಳೂರಿನ ಮುನೇಶ್ವರ ನಗರದ ನಿವಾಸಿ ಹಾಗೂ ಚಾಲಕ ಮುನಿರಾಜು ಅವರ ಪುತ್ರಿ ವಿದ್ಯಾ ವಿವಾಹವಾಗಿ ಪತಿಯಿಂದ ವಿಚ್ಛೇಧನ ಪಡೆದಿದ್ದಳು. ಆನಂತರ ಆಕೆ ಬೆಂಗಳೂರು ಅಂಚೆಪಾಳ್ಯದ ಬಿ.ಪಿ.ಚಿದಾನಂದ ಎಂಬಾತನೊಂದಿಗೆ ಅನೈತಿ ಸಂಬಂಧ ಹೊಂದಿದ್ದಳು. ಇದರಿಂದ ಬೇಸರಗೊಂಡಿದ್ದ ಮುನಿರಾಜು ಮಗಳಿಗೆ ಬುದ್ದಿ ಹೇಳಿ ಚಿದಾನಂದನಿಂದ ದೂರವಿರುವಂತೆ ಸೂಚಿಸಿದ್ದರು.

ವಿದ್ಯಾಳಿಗೆ ಈ ಹಿಂದೆ ಅಪಘಾತವಾಗಿದ್ದು ಈ ಸಂಬಂಧದ ವಿಮಾ ಹಣ ಮತ್ತು ಗಂಡನಿಂದ ವಿಚ್ಛೇಧನ ಪಡೆದ ಪರಿಹಾರದ ಹಣವೂ ಆಕೆಯ ಬಳಿ ಇದ್ದು ಆ ಹಣವನ್ನು ತನಗೆ ಕೊಡಬೇಕೆಂದು ತಂದೆ ಮುನಿರಾಜು ಒತ್ತಾಯಿಸುತ್ತಿದ್ದರೆಂದು ಮತ್ತು ಪ್ರಿಯಕರ ಚಿದಾನಂದನಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದರಿಂದ ಆಕೆ ತಂದೆಯ ವಿರುದ್ಧ ದ್ವೇಷ ಸಾಧಿಸುತ್ತಿದ್ದಳು.

Advertisement

15 ಲಕ್ಷ ರೂ. ಸುಪಾರಿ: ಈ ಎಲ್ಲಾ ಬೆಳವಣಿಯಿಂದ ತನ್ನ ತಂದೆಯನ್ನು ಕೊಲೆ ಮಾಡಿಸಲು ಪ್ರಿಯಕರ ಚಿದಾನಂದನಿಗೆ ಹೇಳಿ ಅದಕ್ಕಾಗಿ 15 ಲಕ್ಷ ರೂ. ಕೊಡುವುದಾಗಿಯೂ ಆಕೆ ಹೇಳಿದ್ದಳು. ಆನಂತರ ಚಿದಾನಂದ ಮುನಿರಾಜುವನ್ನು ಕೊಲೆ ಮಾಡುವ ಯೋಜನೆ ರೂಪಿಸಿ ತನ್ನ ಸ್ನೇಹಿತ ರಘು ಸಹಾಯ ಪಡೆಯಲು ನಿರ್ಧರಿಸಿದ.

ಕಾರು ಚಾಲಕನಾಗಿದ್ದ ಮುನಿರಾಜುವನ್ನು ಸಂಪರ್ಕಿಸಿ ತನ್ನ ಸಂಬಂಧಿಕರೊಬ್ಬರಿಗೆ ತೀವ್ರ ಅನಾರೋಗ್ಯವಿದ್ದು ಅವರನ್ನು ಆಲೂರು ತಾಲೂಕಿನ ಮಣಿಗನಹಳ್ಳಿಯಿಂದ ಬೆಂಗಳೂರಿಗೆ ಕರೆತರಬೇಕು ಎಂದು ಬಾಡಿಗೆಗೆ ಮುನಿರಾಜುವನ್ನು ಕರೆ ತಂದು ಮಣಿಗನಹಳ್ಳಿ ಗ್ರಾಮದ ಹತ್ತಿರ ಕಾರು ಹೋಗುತ್ತಿದ್ದಾಗ ಕಾರು ಚಾಲನೆ ಮಾಡುತ್ತಿದ್ದ ಮುನಿರಾಜು ಕುತ್ತಿಗೆಗೆ ರಘು ಕಾರಿನ ಆಕ್ಸ್‌ ಕೇಬಲ್‌ನಿಂದ ಬಿಗಿದಿದ್ದಾನೆ ಆನಂತರ ಚಿದಾನಂದ ಮುನಿರಾಜು ಎದೆಗೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಮಾಡಿದ

ನಂತರ ಮುನಿರಾಜು ಮೃತ ದೇಹವನ್ನು ಮಣಿಗನಹಳ್ಳಿಯ ಬಳಿ ಹೇಮಾವತಿ ನ್ನೀರಿಗೆ ಎಸೆದಿದ್ದರು. ಈ ಪ್ರಕರಣದ ದಾರಿ ತಪ್ಪಿಸಲು ಮಗಳು ವಿದ್ಯಾ ಹಿರೀಸಾವೆ ಠಾಣೆಯಲ್ಲಿ ತಂದೆ ಮುನಿರಾಜು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು ಎಸ್ಪಿ ವಿವರ ನೀಡಿದರು. ನಂತರ ಪ್ರಕರಣದ ಜಾಡು ಹಿಡಿದ ಪೊಲೀಸ್‌ ಸಿಬ್ಬಂದಿ ಡಿವೈಸ್ಪಿಗಳಾದ ಲಕ್ಷ್ಮೇಗೌಡ ಮತ್ತು ಶಶಿಧರ್‌ ಮಾರ್ಗದರ್ಶನದಲ್ಲಿ ಆಲೂರು ಇನ್‌ಸ್ಪಕ್ಟರ್‌ ಪಿಎಸ್‌ಐ ಟಿ.ಪಿ. ಕುಸುಮಾ ಮತ್ತಿತರನ್ನು ಜಿಲ್ಲಾ ರಕ್ಷಣಾಧಿಕಾರಿ ಶ್ಲಾ ಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next