ಮಾಸ್ಕೋ: ಉಕ್ರೇನ್ ಯುದ್ಧದ ಮಾಸ್ಟರ್ ಮೈಂಡ್ ಅಲೆಕ್ಸಾಂಡರ್ ಡುಗಿನ್ ನ ಪುತ್ರಿ ದರ್ಯಾ ಡುಗಿನ್ ಅವರು ಶನಿವಾರ ರಾತ್ರಿ ಮಾಸ್ಕೋದಲ್ಲಿ ನಡೆದ ಕಾರು ಸ್ಪೋಟದಲ್ಲಿ ಸಾವನ್ನಪ್ಪಿದ್ದಾರೆ. ಅಲೆಕ್ಸಾಂಡರ್ ಡುಗಿನ್ ರನ್ನು ಗುರಿಯಾಗಿಸಿ ಈ ಸ್ಪೋಟ ನಡೆಸಲಾಗಿತ್ತು ಎಂದು ವರದಿ ತಿಳಿಸಿದೆ.
ರಷ್ಯಾದ ರಾಜಧಾನಿ ಮಾಸ್ಕೋ ಹೊರವಲಯದ ಬೊಲ್ಶಿಯೆ ವ್ಯಾಜ್ಯೋಮಿ ಎಂಬ ಗ್ರಾಮದ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
60 ವರ್ಷದ ಅಲೆಕ್ಸಾಂಡರ್ ಡುಗಿನ್ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರ ‘ಮೆದುಳು’ ಎಂದೇ ಕರೆಯಲಾಗುತ್ತದೆ. ಬಾಂಬ್ ಸ್ಪೋಟದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ದರ್ಯಾ ಡುಗಿನ್ ಅವರ ಲ್ಯಾಂಡ್ ಕ್ರೂಸರ್ ಪ್ರಾಡೊ ಬೆಂಕಿಯಲ್ಲಿ ಸುಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ:ದಾಖಲೆ ಪೂರ್ಣವಾಗಿದ್ದರೆ ತತ್‌ಕ್ಷಣ ತೀರ್ಮಾನ : ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ
ಹಬ್ಬವೊಂದರಿಂದ ಹಿಂದೆ ಬರುತ್ತಿದ್ದ ವೇಳೆ ದರ್ಯಾ ಡುಗಿನ್ ಕಾರು ಸ್ಪೋಟವಾಗಿದೆ. ಮೂಲಗಳ ಪ್ರಕಾರ ಅಲೆಕ್ಸಾಂಡರ್ ಡುಗಿನ್ ಕೂಡಾ ಅದೇ ಕಾರಿನಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆತ ಬೇರೆ ಕಾರಿನಲ್ಲಿ ಹೊರಟಿದ್ದ.
ಉಕ್ರೇನ್ ನ ಭಯೋತ್ಪಾದಕರು ಈ ಕೃತ್ಯ ನಡೆಸಿದ್ದಾರೆಂದು ರಷ್ಯಾ ಹೇಳಿಕೊಂಡಿದೆ. ಅಲೆಕ್ಸಾಂಡರ್ ರನ್ನು ಹತ್ಯೆ ಮಾಡಲು ಹೋಗಿ ಅವರ ಮಗಳನ್ನು ಸ್ಪೋಟಿಸಿದ್ದಾರೆ. ಆಕೆ ನಿಜವಾದ ರಷ್ಯನ್ ಹುಡುಗಿ ಎಂದು ಹೇಳಿಕೆಯಲ್ಲಿ ತಿಳಿಸಿದೆ.