Advertisement

ಪುತ್ರಿ ಜನಿಸಿದರೂ ನೋಡಲು ಹೋಗದೆ ಕರ್ತವ್ಯನಿಷ್ಠೆ ಮೆರೆದ ಶುಶ್ರೂಷಕ

01:52 AM Apr 11, 2020 | Sriram |

ಬೆಂಗಳೂರು: ಒಂದೆಡೆ ಕರುಳ ಬಳ್ಳಿಯ ಕೂಗು, ಮತ್ತೂದೆಡೆ ಕರ್ತವ್ಯದ ಕರೆ. ಶುಶ್ರೂಷಕ ಆಯ್ಕೆ ಮಾಡಿದ್ದು ರೋಗಿಗಳ ಸೇವೆಯನ್ನು!

Advertisement

ವಿಕ್ಟೋರಿಯಾ ಆಸ್ಪತ್ರೆ ಶುಶ್ರೂಷಕ ವಿದ್ಯಾನಂದ್‌ ಮಂಗಾವತಿ ಅವರ ಪತ್ನಿ ಮಾ. 27ರಂದು ಬೆಳಗಾವಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಆದರೆ, ಈ ವೇಳೆ ವಿದ್ಯಾನಂದ್‌ ಅವರು ಆಸ್ಪತ್ರೆಯ ಕೋವಿಡ್‌-19 ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೋಗಲು ಮನಸ್ಸಾಗದೆ ಕೆಲಸ ಮುಂದುವರಿಸಿದ್ದಾರೆ. ಸದ್ಯ ಅವರ ಪಾಳಿ ಮುಗಿದಿದ್ದರೂ ಕೋವಿಡ್‌ ವಾರ್ಡ್‌ನಲ್ಲಿ ಕಾರ್ಯ ನಿರ್ವಹಿಸಿರುವುದರಿಂದ ಕಡ್ಡಾಯವಾಗಿ ಮುಂದಿನ 28 ದಿನ ಕ್ವಾರೆಂಟೈನ್‌ನಲ್ಲಿ ಇರಬೇಕಿದೆ. ಹೀಗಾಗಿ, ಆಸ್ಪತ್ರೆ ಸೂಚಿಸಿರುವ ಸಾಮೂಹಿಕ ಕ್ವಾರೆಂಟೈನ್‌ ಘಟಕದಲ್ಲಿದ್ದಾರೆ. ಪತ್ನಿ, ಮಗು ಭೇಟಿಗೆ ಒಂದು ತಿಂಗಳಾಗಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next