ಬೆಳಗಾವಿ : ಅನೈತಿಕ ಸಂಬಂಧ ಎನ್ನುವುದು ತಂದೆ, ತಾಯಿ , ಮಗ, ಮಗಳು, ಪತಿ, ಪತ್ನಿ, ಸ್ನೇಹಿತ ಯಾರನ್ನೂ ಬಲಿ ಪಡೆಯ ಬಲ್ಲುದು ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ . ವಿವಾಹಿತ ಪುತ್ರಿಯ ಅನೈತಿಕ ಸಂಬಂಧ ಪ್ರಶ್ನಿಸಿದ ತಂದೆಯನ್ನೇ ಮಗಳು ಸುಪಾರಿ ನೀಡಿ ಕೊಲೆಗೈದು ನಾಪತ್ತೆ ಕಥೆ ಕಟ್ಟಿದ ಬೆಚ್ಚಿ ಬೀಳಿಸುವ ಘಟನೆ ಗೋಕಾಕ್‌ನ ಕಡಬಗಟ್ಟಿ ಬಳಿ ನಡೆದಿದೆ.
ಏನಿದು ಸಿನಿಮಾ ಮಾದರಿ ಘಟನೆ?
ಕೈತನಾಳ ಹೊಸುರು ನಿವಾಸಿಯಾದ ಕೆಂಚಪ್ಪ ನೊಗನಿಹಾಳ ಎಂಬಾತ ತನ್ನ ಪುತ್ರಿಯ ಸಿದ್ದವ್ವಾ ಕಟ್ಟಿಕಾರ್ ಳ ಅನೈತಿಕ ಸಂಬಂಧ ಪ್ರಶ್ನಿಸಿ ನಿಗೂಢವಾಗಿ ಹತ್ಯೆಗೀಡಾಗಿದ್ದಾರೆ. ಮಗಳು 70 ಸಾವಿರ ಸುಪಾರಿ ನೀಡಿ ಕೊಲೆ ಮಾಡಿಸಿ ನಾಪತ್ತೆಯಾಗಿದ್ದಾನೆ ಎಂದು ಕಥೆ ಕಟ್ಟಿದ್ದಾಳೆ . ಎಲ್ಲಾ ವಿಚಾರಗಳು ಪೊಲೀಸರ ತನಿಖೆ ವೇಳೆ ಬಹಿರಂಗೊಂಡಿವೆ. ಸಿದ್ದವ್ವಾ ಕೃತ್ಯಕ್ಕೆ ಆಕೆಯ ತಾಯಿ (ಕೆಂಚಪ್ಪನ ಪತ್ನಿ) ಯೂ ಸಾಥ್ ನೀಡಿರುವುದು ಕಂಡು ಬಂದಿದೆ.
ಕೆಂಚಪ್ಪ ನಾಪತ್ತೆಯಾಗಿರುವ ಸುದ್ದಿ ಊರೆಲ್ಲಾ ಹಬ್ಬಿದ ಬಳಿಕ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಅನುಮಾನದಲ್ಲಿ ವಿಚಾರಣೆಗಿಳಿದಾಗ ಭಯಾನಕ ಸತ್ಯ ಬಹಿರಂಗವಾಗಿದೆ.
ಕೆಂಚಪ್ಪನನ್ನು ಬರ್ಬರವಾಗಿ ಕೊಲೆಗೈದು ಹೂತು ಹಾಕಲಾಗಿದ್ದು, ಪೊಲೀಸರು ಸ್ಥಳ ಪರೀಕ್ಷೆ ನಡೆಸಿ ಶವವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಪ್ರಮುಖ ಆರೋಪಿಗಳಾದ ಗೌರವ್ವ ನೊಗನಿಹಾಳ ಹಾಗೂ ಸಿದ್ದವ್ವ ಕಟ್ಟಿಕಾರ ಸುಪಾರಿ ಪಡೆದ ಆರೋಪಿಗಳಾದಶಿವಾಜಿ ಹೊಳೆವ್ವಗೋಳ, ಶಂಕರ ದೇಶಿಂಗೆ, ದುರ್ಗಪ್ಪಾ ನಂದಿ, ರಾಮಸಿದ್ದಪ್ಪ ನಂದಿ ಅವರನ್ನು ಬಂಧಿಸಿದ್ದಾರೆ.ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.