Advertisement

ತಾಯಿ ಹುಡುಕಿಕೊಂಡು ಸ್ವೀಡನ್‌ನಿಂದ ಬಂದ ಪುತ್ರಿ

11:25 PM Feb 23, 2020 | Lakshmi GovindaRaj |

ಮಂಡ್ಯ: 29 ವರ್ಷಗಳ ಬಳಿಕ ತಾಯಿಯನ್ನು ಹುಡುಕಿಕೊಂಡು ದೂರದ ಸ್ವೀಡನ್‌ ದೇಶದಿಂದ ಪುತ್ರಿ ಆಗಮಿಸಿದ್ದಾಳೆ. ತಾಯಿಯನ್ನು ಕಾಣುವ ಪತ್ನಿಯ ಹಂಬಲಕ್ಕೆ ಪತಿ ಕೂಡ ಸಾಥ್‌ ಕೊಟ್ಟಿದ್ದಾರೆ. ಸ್ವೀಡನ್‌ ದೇಶದ ಜೋಲಿ ತನ್ನ ಪತಿ ಎರಿಕ್‌ ಜೊತೆ ತವರೂರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇಶಹಳ್ಳಿಗೆ ಬಂದಿದ್ದು ಊರಿನಲ್ಲೆಲ್ಲಾ ಹುಡುಕಾಟ ನಡೆಸಿದ್ದಾರೆ.

Advertisement

ಸಂಬಂಧಿಕರಿಗೂ ಶೋಧ ನಡೆಸಿದ್ದಾರೆ. ಆದರೆ, ಆಕೆಗೆ ತಂದೆ-ತಾಯಿ ಸಹಿತ ಸಂಬಂಧಿಕರೂ ಸಿಗದಿರುವುದು ತೀವ್ರ ನಿರಾಸೆ ಮೂಡಿಸಿದೆ. ದೇಶಹಳ್ಳಿ ಗ್ರಾಮದ ಜಯಮ್ಮ, ಬೋರೇಗೌಡ ದಂಪತಿ ಪುತ್ರಿಯಾಗಿರುವ ಜೋಲಿ 1993ರಲ್ಲಿ 6 ವರ್ಷದ ಬಾಲಕಿಯಾಗಿದ್ದ ಸಮಯದಲ್ಲಿ ತಾಯಿ ಜಯಮ್ಮ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು.

ಬೆಂಗಳೂರಿಗೆ ಚಿಕಿತ್ಸೆಗಾಗಿ ಬಂದಿದ್ದ ಜಯಮ್ಮ ಬಡತನದ ಕಾರಣದಿಂದ ಮಗಳನ್ನು ಸಾಕಲಾಗದೆ ಇಂದಿರಾನಗರದಲ್ಲಿರುವ ಆಶ್ರಯ ದತ್ತು ಕೇಂದ್ರದಲ್ಲಿ ಮಗಳನ್ನು ಬಿಟ್ಟು ಹೋಗಿದ್ದರು. ಅದೇ ಸಮಯದಲ್ಲಿ ಸ್ವೀಡನ್‌ ದೇಶದ ದಂಪತಿಯೊಬ್ಬರು ಜೋಲಿಯನ್ನು ದತ್ತು ಪಡೆದು ತಮ್ಮ ದೇಶಕ್ಕೆ ಕರೆದುಕೊಂಡು ಹೋಗಿದ್ದರು.

ಇತ್ತೀಚೆಗೆ ತನ್ನ ತಾಯಿ ಆತ್ಮಹತ್ಯೆ ಮಾಡಿಕೊಂಡ ಕನಸು ಜೋಲಿಗೆ ಬಿದ್ದಿದ್ದು ಪೋಷಕರ ಬಳಿ ತಾನು ಯಾರು ಎಂಬುದನ್ನು ಪ್ರಶ್ನಿಸಿದ್ದಾಳೆ. ಆಗ ಪೋಷಕರು 29 ವರ್ಷದ ಹಿಂದೆ ದತ್ತು ಪಡೆದ ಬಗ್ಗೆ ಮಾಹಿತಿ ನೀಡಿದ್ದಾರೆ. ಜೋಲಿ ಪತಿ ಎರಿಕ್‌ ಕರೆದುಕೊಂಡು ಬಂದು ತನ್ನ ತಂದೆ-ತಾಯಿ ಸಂಬಂಧಿಕರಿಗಾಗಿ ಹುಡುಕಾಟ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next