Advertisement
ಹಿಂದೂ ಅವಿಭಕ್ತ ಕುಟುಂಬಗಳ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಸಮಪಾಲು ಪಡೆಯುವ ಹಕ್ಕುಳ್ಳವರು ಎಂದು 2005ರ ಸೆ. 9ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆ ತೀರ್ಪಿನ ಅನ್ವಯ ಹಿಂದೂ ಉತ್ತರಾಧಿಕಾರ ಕಾಯ್ದೆ (ಎಚ್‌ಎಸ್‌ಎ) ರೂಪಿಸಲಾಗಿದೆ. ಆದರೆ 2005ಕ್ಕೂ ಮುನ್ನ ತಂದೆ ತೀರಿದ್ದಲ್ಲಿ ಈ ಕಾಯ್ದೆ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆ ಇತ್ತು. ಈಗ ಈ ಕುರಿತಾಗಿ ಸುಪ್ರೀಂ ಕೋರ್ಟ್ ತೀರ್ಪಿನಿಂದ ಸ್ಪಷ್ಟತೆ ಲಭಿಸಿದೆ. ಅಲ್ಲದೆ 2005ರ ತೀರ್ಪಿನ ಅನಂತರ ತಂದೆ ಅಥವಾ ಪುತ್ರಿ ಬದುಕಿದ್ದರೆ ಮಾತ್ರ ಆಸ್ತಿಯಲ್ಲಿ ಸಮಾನ ಹಕ್ಕು ಕೇಳಬಹುದು ಎಂಬ ಕೆಳ ನ್ಯಾಯಾಲಯಗಳ ತೀರ್ಪುಗಳನ್ನೂ ಈ ತೀರ್ಪು ಬದಿಗಿರಿಸಿದೆ.
ಈ ತೀರ್ಪಿನಿಂದಾಗಿ 2005ರಲ್ಲಿ ಎಚ್‌ಎಸ್‌ಎ ಕಾಯ್ದೆ ತಿದ್ದುಪಡಿ ಆಗುವುದಕ್ಕೂ ಮುನ್ನ ಅಥವಾ ತಿದ್ದುಪಡಿಯ ಅನಂತರ ಪುತ್ರಿ ಜೀವಂತ ಇರಲಿ, ಇಲ್ಲದಿರಲಿ; ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹಳಾಗಿರುತ್ತಾಳೆ. ಪುತ್ರಿ ಜೀವಂತವಾಗಿಲ್ಲದಿದ್ದರೂ ಆಕೆಯ ಮಕ್ಕಳು ತಮ್ಮ ತಾಯಿಗೆ ಸಿಗಬೇಕಾದ ಹಕ್ಕುಗಳನ್ನು ಕೇಳಬಹುದಾಗಿದೆ.