Advertisement

ಆರ್ ಎಸ್ಎಸ್ ನ ಸರಕಾರ್ಯವಾಹರಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ

01:17 PM Mar 20, 2021 | Team Udayavani |

ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್ ಎಸ್ಎಸ್) ಎರಡನೇ ಅತೀ ಉನ್ನತ ಜವಾಬ್ದಾರಿಗೆ ಕರ್ನಾಟಕದ ದತ್ತಾತ್ರೇಯ ಹೊಸಬಾಳೆಯವರು ಆಯ್ಕೆಯಾಗಿದ್ದಾರೆ.

Advertisement

ಬೆಂಗಳೂರಿನ ಹೊರವಲಯದ ಚೆನ್ನೇನಹಳ್ಳಿ ಜನ ಸೇವಾ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ(ಎಬಿಪಿಎಸ್)ದಲ್ಲಿ ನಡೆದ ಚುನಾವಣೆಯಲ್ಲಿ ಇವರು ಆಯ್ಕೆಯಾಗಿದ್ದಾರೆ ಎಂದು ಆರ್ ಎಸ್ಎಸ್ ತಿಳಿಸಿದೆ.

ಆರ್ ಎಸ್ಎಸ್ ನಲ್ಲಿ ಸರಸಂಘಚಾಲಕ್ ಮತ್ತು ಸರಕಾರ್ಯವಾಹ ಅತ್ಯುನ್ನತ ಹುದ್ದೆ ಹಾಗೂ ಜವಾಬ್ದಾರಿಯಾಗಿದೆ. ಡಾ. ಮೋಹನ್ ಭಾಗವತ್ ಅವರು ಸರ ಸಂಘ ಚಾಲಕರಾಗಿದ್ದಾರೆ. ಭೈಯಾಜಿ ಜೋಶಿಯವರು 2009ರಿಂದ ಸರಕಾರ್ಯವಾಹರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶನಿವಾರ ಎಬಿಪಿಎಸ್ ನಲ್ಲಿ ನಡೆದ ಆರ್ ಎಸ್ಎಸ್ ನ ಆಂತರಿಕ ಚುನಾವಣೆಯಲ್ಲಿ ಕರ್ನಾಟಕದ ದತ್ತಾತ್ರೇಯ ಹೊಸಬಾಳೆಯವರಿಗೆ ಸರಕಾರ್ಯವಾಹ ಜವಾಬ್ದಾರಿ ಲಭಿಸಿದೆ.

ಇದನ್ನೂ ಓದಿ:ಕೇಂದ್ರ ಸಮಿತಿಗೆ ಉಪ ಚುನಾವಣೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ: ಸಿ.ಟಿ.ರವಿ

ಕರ್ನಾಟಕದಿಂದ ಹೋ.ವೇ.ಶೇಷಾದ್ರಿ ಅವರು ಸರಕಾರ್ಯವಾಹರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಈಗ ಕನ್ನಡಿಗರಾದ ದತ್ತಾತ್ರೇಯ ಹೊಸಬಾಳೆಯವರು ಇದೇ ಹುದ್ದೆಗೆ ನೇಮಕಗೊಂಡಿದ್ದಾರೆ. ದತ್ತಾತ್ರೇಯ ಹೊಸಬಾಳೆಯವರು ಸಹ ಸರಕಾರ್ಯವಾಹರಾಗಿ ಸೇವೆ ಸಲ್ಲಿಸುತ್ತಿದ್ದರು. ಅದಕ್ಕೂ ಮೊದಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ರಾಷ್ಟ್ರೀಯ ಜವಾಬ್ದಾರಿ ಹೊಂದಿದ್ದರು.

Advertisement

ಇವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆಯವರಾಗಿದ್ದಾರೆ. ಕಾಲೇಜು ಶಿಕ್ಷಣದ ನಂತರ ಸಂಘದ ಪೂರ್ಣಾವಧಿ ಕಾರ್ಯಕರ್ತ(ಪ್ರಚಾರಕ) ಸೇವೆ ಸಲ್ಲಿಸುತ್ತಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next