Advertisement

ದತ್ತಪೀಠ: ಸರ್ಕಾರದಿಂದ ಹಿಂದೂಗಳಿಗೆ ಅನ್ಯಾಯ:ಸಿ.ಟಿ.ರವಿ 

06:10 AM Apr 10, 2018 | Team Udayavani |

ಚಿಕ್ಕಮಗಳೂರು: ಚುನಾವಣಾ ಸಂದರ್ಭದಲ್ಲಿ ದತ್ತಪೀಠ ವಿವಾದ ಕುರಿತು ನ್ಯಾ| ನಾಗಮೋಹನ್‌ ದಾಸ್‌ ಸಮಿತಿ ವರದಿಯನ್ನು ಸು.ಕೋರ್ಟ್‌ಗೆ ಸಲ್ಲಿಸಿ ರಾಜ್ಯ ಸರಕಾರ ಹಿಂದೂಗಳಿಗೆ ಅನ್ಯಾಯ ಮಾಡಿದೆ. ಈ ಬಗ್ಗೆ ನ್ಯಾಯಾಲಯ ಹಾಗೂ ಜನತಾ ನ್ಯಾಯಾಲಯದ ಮುಂದೆ ಹೋಗಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ವತಿಯಿಂದ ದೂರು ನೀಡಲಾಗುವುದು ಎಂದರು.

ಶಾಖಾದ್ರಿಯವರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯಿಂದ ತಪ್ಪಿಸಿಕೊಳ್ಳಲು ರಾಜ್ಯ ಸರಕಾರ ನ್ಯಾ| ನಾಗಮೋಹನ್‌ ದಾಸ್‌ ಸಮಿತಿ ರಚನೆ ಮಾಡಿ ಏಕಪಕ್ಷೀಯವಾಗಿ ವರದಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂದು ಆರೋಪಿಸಿದರು.

ನಾಗೇನಹಳ್ಳಿಯಲ್ಲಿ ಬಾಬಾಬುಡನ್‌ ಸ್ವಾಮಿ ದರ್ಗಾ ಇದೆ. ದತ್ತಪೀಠ ಬೇರೆ, ದರ್ಗಾ ಬೇರೆ ಎಂದು ಸರಕಾರಿ ದಾಖಲೆಗಳು ದೃಢಪಡಿಸುತ್ತವೆ. ಈ ವಾಸ್ತವಿಕತೆಯನ್ನು ಮರೆ ಮಾಚಿ, ದತ್ತಪೀಠದ ಆಸ್ತಿ ದುರುಪಯೋಗ ಮಾಡಿಕೊಂಡಿರುವ ಶಾಖಾದ್ರಿಗಳಿಗೆ ದತ್ತಪೀಠದ ಆಡಳಿತ ವಹಿಸುವ ಹುನ್ನಾರ ನಡೆದಿದೆ. ನ್ಯಾಯದ ಪರಾಮರ್ಶೆಯಾಗಬೇಕು. ಈ ಬಗ್ಗೆ ಚರ್ಚೆ ನಡೆದು ಸತ್ಯಾಂಶ ಹೊರಗೆ ತರಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next