Advertisement

ಅ.6ರಿಂದ 13 ರವರೆಗೆ ದತ್ತಮಾಲಾ ಅಭಿಯಾನ

10:52 PM Sep 10, 2019 | Lakshmi GovindaRaju |

ಚಿಕ್ಕಮಗಳೂರು: ಶ್ರೀರಾಮಸೇನೆ ಪ್ರತಿವರ್ಷ ಆಯೋಜಿಸುವ ದತ್ತಮಾಲಾ ಅಭಿಯಾನ ಈ ಬಾರಿ ಅ.6ರಿಂದ 13ರ ವರೆಗೆ ನಡೆಯಲಿದೆ ಎಂದು ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್‌ ಕುಲಕರ್ಣಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅ.6 ರಂದು ನಗರದ ಶ್ರೀ ಶಂಕರ ಮಠದ ಆವರಣ ದಲ್ಲಿ ದತ್ತಮಾಲಾ ಧಾರಣೆ ಮಾಡಲಾಗುವುದು.

Advertisement

ಅದೇ ದಿನ ರಾಜ್ಯದೆಲ್ಲೆಡೆ ದತ್ತ ಭಕ್ತರು ಮಾಲಾ ಧಾರಣೆ ಮಾಡಲಿದ್ದಾರೆ. ಅ.13 ರಂದು ರಾಜ್ಯದ ವಿವಿಧೆಡೆಗಳಿಂದ 5 ಸಾವಿರಕ್ಕೂ ಹೆಚ್ಚು ವೃತಾಧಾರಿಗಳು ನಗರಕ್ಕೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿ ದರು. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌, ರಾಜ್ಯಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಪುನನ್‌ ಕಾಶ್ಮೀರ ಸಂಘಟನೆಯ ರಾಷ್ಟ್ರೀಯ ಸಂಯೋಜಕ ರಾಹುಲ್‌ ಕೌಲ್‌, ರಾಜ್ಯದ ವಿವಿಧೆಡೆಯ ಅವಧೂತರು, ಸ್ವಾಮೀಜಿಗಳು ಭಾಗವಹಿಸುವರು ಎಂದರು.

ನಂತರ ನಗರದಲ್ಲಿ ಬೃಹತ್‌ ಶೋಭಾಯಾತ್ರೆ ನಡೆಯಲಿದೆ. ಬಳಿಕ ದತ್ತಮಾಲಾ ಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆಗಳ ದರ್ಶನ ಪಡೆಯುವರು. ದತ್ತಪೀಠದಲ್ಲಿ ದತ್ತಾತ್ರೇಯ ಹೋಮ, ಪೂಜೆ ಹಾಗೂ ಸಾಧು- ಸಂತರ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗೆ ಆಹ್ವಾನ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಾವು ಸಿಎಂ ಆದಲ್ಲಿ ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಭೇಟಿ ನೀಡುವುದಾಗಿ ಈ ಹಿಂದೆ ಹೇಳಿದ್ದರು. ಈಗ ಅವರು ಮುಖ್ಯಮಂತ್ರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪದಾಧಿಕಾರಿಗಳು ಸೆ.16 ರಂದು ಅವರನ್ನು ಭೇಟಿ ಮಾಡಿ ಅ.13 ರಂದು ದತ್ತಪೀಠಕ್ಕೆ ಬಂದು ದತ್ತಮಾಲಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಗಂಗಾಧರ್‌ ಕುಲಕರ್ಣಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next