Advertisement
ದತ್ತಜಯಂತಿ ಎರಡನೇ ದಿನವಾದ ಬುಧವಾರ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಹಮ್ಮಿಕೊಂಡಿ ದ್ದ ಶೋಭಾಯಾತ್ರೆಗೆ ನಗರದ ರತ್ನಗಿರಿ ರಸ್ತೆಯ ಕಾಮಧೇನು ಗಣಪತಿ ದೇವಸ್ಥಾನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನೀಲ್‌ಕುಮಾರ್ ಚಾಲನೆ ನೀಡಿದರು.
Related Articles
Advertisement
ಶಿವಾಜಿ ಮಹಾರಾಜ್, ಆಂಜನೇಯನ ಬೃಹತ್ ಭಗವಾಧ್ವಜಗಳು ಹಾರಾಡಿದವು. ಡಿಜೆಸೌಂಡಿಗೆ ಯುವಕರು, ಯುವತಿಯರು, ಮಹಿಳೆಯರು ಹುಚ್ಚೆದ್ದು ಕುಣಿದರು. ನಾಸಿಕ್‌ಡೋಲ್ ವಾದನಕ್ಕೆ ಜನರು ಕುಣಿಯುತ್ತಿದ್ದರೆ, ಸಣ್ಣ ಮಕ್ಕಳು ಚಿಕ್ಕಭಗವಾಧ್ವಜಗಳನ್ನು ಹಿಡಿದು ಪುಟ್ಟಪುಟ್ಟ ಹೆಜ್ಜೆಹಾಕಿ ಕುಣಿಯುತ್ತಿದ್ದು ನೋಡುಗರ ಮನಸೆಳೆಯಿತು. ಜೈ ಶ್ರೀರಾಮ್, ಶಿವಾಜಿಮಹಾರಾಜ್ ಎಂದು ಡಿಜೆಯಲ್ಲಿ ಕೇಳಿಸುತ್ತಿದ್ದಂತೆ ಕುಣಿಯುತ್ತಿದ್ದ ಯುವಕರು ಉತ್ಸಹ ಹೆಚ್ಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ತೆರದವಾಹನದಲ್ಲಿ ಭಗವಾಧ್ವಜಗಳನ್ನು ತರುತ್ತಿದ್ದಂತೆ ಧ್ವಜಗಳನ್ನು ಕೈಯಲ್ಲಿ ಹಿಡಿದು ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಲು ಧ್ವಜಕ್ಕಾಗಿ ಯುವಕರು, ಯುವತಿಯರು, ಬಾಲಕರು ಮುಗಿಬಿದ್ದರು. ಅವುಗಳನ್ನು ಹಿಡಿದು ಮೆರಣಿಗೆ ಯಲ್ಲಿ ಅಮಿತೋತ್ಸವದಿಂದ ಹೆಜ್ಜೆಹಾಕಿದರು. ಮೆರವಣಿಗೆಯಲ್ಲಿ ಯುವರತ್ನ ಪುನೀತ್ ರಾಜ್‌ಕುಮಾರ್ ಭಾವಚಿತ್ರ ವನ್ನು ಹಿಡಿದು ಅಭಿಮಾನಿಗಳು ಸಾಗುತ್ತಿದ್ದ ದೃಶ್ಯಗಳು ಕಂಡು ಬಂದವು. ಮೆರವಣಿಗೆ ಸಾಗುವ ಮಹಾತ್ಮಗಾಂಧಿರಸ್ತೆಯಲ್ಲಿ ನೀರಿನಿಂದ ರಸ್ತೆಯನ್ನು ಶುಭ್ರಗೊಳಿಸಿ, ಬಣ್ಣಬಣ್ಣದ ರಂಗೋಲಿ ಬಿಡಿಸಲಾಗಿತ್ತು.
ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ದತ್ತಾತ್ರೇಯ ಚಿತ್ರಪಟವನ್ನಿಟ್ಟು ಪೂಜಿಸಲಾಗಿತ್ತು. ಕಟ್ಟಡ ಗಳನ್ನು ಏರಿದ ಜನರು ಮೆರವಣಿಗೆ ವೈಭವವನ್ನು ಸವಿದರು. ಹನುಮಂತಪ್ಪ ವೃತ್ತಕ್ಕೆ ಯಾತ್ರೆ ಆಗಮಿಸುತ್ತಿದ್ದಂತೆ ಮಬ್ಬು ಕತ್ತಲು ಆವರಿಸಿದ್ದು. ವಿದ್ಯುತ್ ದೀಪಗಳಿಂದ ಮೆರವಣಿಗೆ ಕಂಗೊಳಸಿತು. ಪ್ರತ್ಯೇಕ ಎರಡು ಜಿಡಿಗಳನ್ನು ವ್ಯವಸ್ಥೆ ಕಲ್ಪಿಸಿದ್ದು, ಯುವಕರು ತಂಡ ಒಂದು ಡಿಜೆ ಹಿಂಭಾಗದಲ್ಲಿ ಹುಚ್ಚೆದ್ದು ಕುಣಿಯುತ್ತಿದ್ದರೇ, ಮತ್ತೊಂದು ಡಿ.ಜೆ ಹಿಂಭಾಗದಲ್ಲಿ ಮಹಿಳೆಯರ ಗುಂಪು ಕಣಿಯುತ್ತಿದ್ದದು ಕಂಡು ಬಂತು. ರಾತ್ರಿವೇಳೆಗೆ ಯಾತ್ರೆ ಶಾಂತಿಯುತವಾಗಿ ಆಜಾದ್‌ಪಾರ್ಕ್ ವೃತ್ತ ತಲುಪಿತು. ಅಲ್ಲಿ ಹಿಂದೂ ಸಂಘಟನೆಯ ಮುಖಂಡರು ಬಹಿರಂಗ ಸಭೆ ನಡೆಸಿದರು.