ಹೊಸದಿಲ್ಲಿ: ಲೋಕಸಭಾ ಚುನಾವಣೆಯ ನಂತರ ದೇಶದಲ್ಲಿ ಮತ್ತೆ ಚುನಾವಣೆಯ ಕಾವು ಏರಲಿದೆ. ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ನಿಗಧಿಯಾಗುವ ನಿರೀಕ್ಷೆಯಿದೆ.
ಚುನಾವಣಾ ಆಯೋಗ ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ಕರೆದಿದ್ದು ಅದರಲ್ಲಿ ಉಭಯ ರಾಜ್ಯಗಳ ಮತದಾನದ ದಿನಾಂಕ ಅಂತಿಮಗೊಳಿಸಲಿದೆ.
2014ರಲ್ಲಿ ಕೂಡಾ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಗಳು ಏಕಕಾಲಕ್ಕೆ ನಡೆದಿತ್ತು. ಅಂದು ಅಕ್ಚೋಬರ್ 15ಕ್ಕೆ ಮತದಾನ ನಡೆದಿದ್ದರೆ, ಮತೆಣಿಕೆ ಅಕ್ಚೋಬರ್ 19ಕ್ಕೆ ನಡೆಸಲಾಗಿತ್ತು.
ಉಭಯ ರಾಜ್ಯದಲ್ಲೂ ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣಾ ತಯಾರಿ ನಡೆಸಲು ಆರಂಭಿಸಿವೆ. ಪ್ರಧಾನಿ ನರೇಂದ್ರ ಮೋದಿ ಎರಡೂ ರಾಜ್ಯದಲ್ಲಿ ಚುನಾವಣಾ ರಾಲಿ ನಡೆಸಿದ್ದಾರೆ.
ಉಭಯ ರಾಜ್ಯದಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ. ಮಹರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿದ್ದರೆ, ಹರ್ಯಾಣದಲ್ಲಿ ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ.