Advertisement

‘ರಾಬರ್ಟ್’ಎಂಟ್ರಿಗೆ ಡೇಟ್ ಫಿಕ್ಸ್

12:00 PM Jan 10, 2021 | Team Udayavani |

ಬೆಂಗಳೂರು: ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ರಾಬರ್ಟ್’ ತೆರೆಮೇಲೆ ಬರಲು ಡೇಟ್ ಫಿಕ್ಸ್ ಆಗಿದೆ. ಮುಂಬರುವ  ಮಾರ್ಚ್ 11 ರಂದು ತೆರೆಕಾಣಲಿರುವ ಈ ಸಿನಿಮಾ ಅಭಿಮಾನಿಗಳ ಮನತಣಿಸಲು ರೆಡಿಯಾಗಿದೆ.

Advertisement

ಈ ಕುರಿತು ತಮ್ಮ ಟ್ವೀಟರ್ ನಲ್ಲಿ ರಾಬರ್ಟ್ ಸಿನಿಮಾದ ಪೋಸ್ಟರ್ ಒಂದನ್ನು ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವ  ನಟ ದರ್ಶನ್, ಮಹಾ ಶಿವರಾತ್ರಿಗೆ ಸಿನಿಮಾದ ಬಿಡುಗಡೆ ಮಾಡಲಿದ್ದೇವೆ ಎನ್ನುವುದರ ಮೂಲಕ ಸಿನಿಮಾ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ:ಬಾಗಿಲು ತೆರೆದ ಕೇದಾರನಾಥ-ಬಾದಾಮಿ ಶುಗರ್ಸ್‌: ದಶಕದಿಂದ ಸ್ತಬ್ಧಗೊಂಡ ಕಾರ್ಖಾನೆಗಳಿಗೆ ಮರುಜೀವ

ಈ ಸಿನಿಮಾ ಯಾವುದೇ ಓಟಿಟಿ ಪ್ಲಾಟ್ ಪಾರ್ಮ್ ಗಳಲ್ಲಿ ಬಿಡುಗಡೆಗೊಳ್ಳುತ್ತಿಲ್ಲ, ಬದಲಾಗಿ ಚಿತ್ರಮಂದಿರದಲ್ಲಿಯೇ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ ಎಂದಿರುವ ನಟ ಎಲ್ಲಾ ಸಿನಿಪ್ರಿಯರು ಚಿತ್ರಮಂದಿರದಲ್ಲಿಯೇ ರಾಬರ್ಟ್ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.

Advertisement

ನಿರ್ದೇಶಕ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಒಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ಖ್ಯಾತ ಸಂಗೀತ ನಿರ್ದೇಶಕ  ಅರ್ಜುನ್ ಜನ್ಯ ಅವರ  ಸಂಗೀತ ನಿರ್ದೇಶನವಿರಲಿದ್ದು ಉಮಾಪತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next