Advertisement

ನಾವು ಚಿನ್ನವನ್ನೂ ಎಸೀತೇವೆ!

08:45 AM Jan 02, 2018 | Team Udayavani |

ಹೊಸದಿಲ್ಲಿ: ಪ್ರತಿ ವರ್ಷ ಇಲೆಕ್ಟ್ರಾನಿಕ್‌ ತ್ಯಾಜ್ಯದ ಜತೆಗೆ 18 ಸಾವಿರ ಕೋಟಿ ರೂ. ಮೌಲ್ಯದ ಅಮೂಲ್ಯ ಲೋಹಗಳನ್ನೂ ಭಾರತ ಎಸೆಯುತ್ತಿದೆ ಎಂಬ ಅಚ್ಚರಿಯ ಅಂಶ ಇದೀಗ ಬೆಳಕಿಗೆ ಬಂದಿದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಅಂತಾರಾಷ್ಟ್ರೀಯ ಟೆಲಿಕಮ್ಯೂನಿಕೇಶನ್‌ ಯೂನಿಯನ್‌ (ಐಟಿಯು) ಬಿಡುಗಡೆ ಮಾಡಿದ ವರದಿಯಲ್ಲಿ ಈ ವಿವರಗಳಿವೆ. ವರದಿ ಪ್ರಕಾರ 2016ರಲ್ಲಿ 20 ಲಕ್ಷ ಟನ್‌ ಎಲೆಕ್ಟ್ರಾನಿಕ್‌ ಸಾಮಗ್ರಿಗಳನ್ನು ಭಾರತ ಬಿಸಾಡಿದೆ. ಇನ್ನು ವಿಶ್ವಾದ್ಯಂತ 4.4 ಕೋಟಿ ಟನ್‌ ಇ-ತ್ಯಾಜ್ಯ ಎಸೆಯಲಾಗುತ್ತದೆ. ಇದರಲ್ಲಿರುವ ಅಮೂಲ್ಯ ಲೋಹಗಳ ಮೌಲ್ಯವು 4.21 ಲಕ್ಷ ಕೋಟಿ ರೂ. ಇರುತ್ತದೆ.

Advertisement

2016ರಲ್ಲಿ ಭಾರತವು 728 ಕಿಲೋ ಟನ್‌ಗಳಷ್ಟು ಕಬ್ಬಿಣ, 96.8 ಕಿ.ಟನ್‌ ತಾಮ್ರ, 110.6 ಕಿ.ಟನ್‌ ಅಲ್ಯೂಮಿನಿಯಂ, 71 ಕಿಲೋ ಬೆಳ್ಳಿ, 22 ಕೆಜಿ ಚಿನ್ನ ಹಾಗೂ 9 ಕಿಲೋ ಪಲಾಡಿಯಂ ಇವೆ. ಅಂದರೆ 6,347 ಕೋಟಿ ರೂ. ಮೌಲ್ಯದ ಚಿನ್ನ, 300 ಕೋಟಿ ರೂ. ಮೌಲ್ಯದ ಬೆಳ್ಳಿಯನ್ನು ಎಸೆದಂತಾಗಿದೆ. ಇದೇ ರೀತಿ 3,262 ಕೋಟಿ ರೂ. ಮೌಲ್ಯದ ತಾಮ್ರ ಹಾಗೂ 1,228 ಕೋಟಿ ರೂ. ಮೌಲ್ಯದ ಅಲ್ಯೂಮಿನಿಯಂ ಎಸೆಯಲಾಗಿದೆ. ವಿಶ್ವಾದ್ಯಂತ ಒಟ್ಟು 1,600 ಕಿಲೋ ಚಿನ್ನವನ್ನು ಎಸೆಯಲಾಗಿದ್ದು, ಇದರ ಮೌಲ್ಯ 1.44 ಲಕ್ಷ ಕೋಟಿ ರೂ. ಆಗಿದೆ ಎಂದು ವರದಿ ಹೇಳಿದೆ.

ಬೆಂಗಳೂರಿಗೆ ಮೂರನೇ ಸ್ಥಾನ
ಅಚ್ಚರಿಯ ಸಂಗತಿಯೆಂದರೆ, ಭಾರತದ ಸಿಲಿಕಾನ್‌ ಸಿಟಿ ಎಂದೇ ಕರೆಸಿಕೊಂಡಿರುವ ಬೆಂಗಳೂರು (92,000 ಮೆಟ್ರಿಕ್‌ ಟನ್‌) ಅತಿ ಹೆಚ್ಚು ಇ-ತ್ಯಾಜ್ಯ ಉತ್ಪಾದಿಸುವ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬಯಿ (1,20,000 ಮೆಟ್ರಿಕ್‌ ಟನ್‌) ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ, ದಿಲ್ಲಿ (98,000 ಮೆಟ್ರಿಕ್‌ ಟನ್‌) ಎರಡನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next