Advertisement

ಅಭಿವೃದ್ಧಿಗೆ ಡೇಟಾ ಸಾಕ್ಷಿ

06:55 AM Dec 27, 2018 | |

ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಜಾರಿಗೊಳಿಸಿದ ಯೋಜನೆಗಳು ಹಾಗೂ ಮಹತ್ವದ ಯೋಜನೆಗಳ ಡೇಟಾವನ್ನು ಸಾರ್ವಜನಿಕರಿಗೆ ಒದಗಿಸಲಿದೆ.

Advertisement

ಸ್ಮಾರ್ಟ್‌ ಸಿಟಿ, ಸರ್ವರಿಗೂ ಸೂರು, ಅಮೃತ್‌, ಸ್ವಚ್ಛ  ಭಾರತ ಹಾಗೂ ಇತರ ಯೋಜನೆಗಳ ಅಡಿಯಲ್ಲಿ ಉಂಟಾದ ಅಭಿವೃದ್ಧಿಯ ದಾಖಲೆಗಳನ್ನು ಸರ್ಕಾರ ಸಾರ್ವಜನಿಕರ ಮುಂದಿಡಲಿದೆ. ಇದಕ್ಕಾಗಿ ಪ್ರತ್ಯೇಕ ಅಪ್ಲಿಕೇಶನ್‌ ಅನ್ನು ಜನವರಿಯಲ್ಲಿ ಅನಾವರಣ ಗೊಳಿಸಲಾಗುತ್ತದೆ.

ಈ ಅಪ್ಲಿಕೇಶನ್‌ನಲ್ಲಿ ಜಿಯೋಟ್ಯಾಗಿಂಗ್‌ ಕೂಡ ಇರುತ್ತದೆ. ಯೋಜನೆಗಳ ವಿಡಿಯೋ, ಫೋಟೋ ಲಭ್ಯವಿರುತ್ತವೆ. ಈಗಾಗಲೇ ಆವಾಸ ಯೋಜನೆ ಅಡಿಯಲ್ಲಿ ಈ ರೀತಿಯ ಡೇಟಾ ಒದಗಿಸಲಾಗಿದೆ. ಆದರೆ ಸಮಸ್ಯೆ ಇರುವುದು ಸ್ವಚ್ಛ ಭಾರತ ಅಭಿಯಾನದಲ್ಲಿ. ಇದರ ಅಡಿ 62 ಲಕ್ಷ ಕೌಟುಂಬಿಕ ಶೌಚಾಲಯ, 5 ಲಕ್ಷ ಸಮುದಾಯ ಶೌಚಾಲಯ ನಿರ್ಮಿಸಲಾಗಿದೆ. ಇದರ ಜಿಯೋಟ್ಯಾಗ್‌ ಮಾಡುವುದು ಹಾಗೂ ಫೋಟೋ ವಿಡಿಯೋ ಅಪ್‌ಲೋಡ್‌ ಮಾಡುವುದು ಅತ್ಯಂತ ಕಷ್ಟಕರ. ಆದರೆ ಇದನ್ನು ನಿಧಾನವಾಗಿ ನಡೆಸುತ್ತೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next