ಕೊಂಡು ತಮ್ಮ ಮೊಬೈಲ್‌ಗಳಲ್ಲಿದ್ದ ಡೇಟಾಗಳನ್ನು ನಿಷ್ಕ್ರಿಯಗೊಳಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆದ್ದರಿಂದ ಆರೋಪಿಗಳ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್‌ಗಳನ್ನು ಸಂಬಂಧಪಟ್ಟ ಸೇವಾದಾರರಿಂದ ಪಡೆದುಕೊಂಡು ರೀ ಆ್ಯಕ್ಸೆಸ್ ಮಾಡಲು ಕೋರ್ಟ್ ಮೂಲಕ ತನಿಖಾಧಿಕಾರಿಗಳು ಅನುಮತಿ ಪಡೆದುಕೊಂಡಿದ್ದಾರೆ.
Advertisement
ದರ್ಶನ್‌ಗೆ ಹಣ ಪೂರೈಸಿದ ಮೋಹನ್ರಾಜ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಮತ್ತೂಂದೆಡೆ ಪ್ರದೂಷ್ ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ದ ಮತ್ತೂಬ್ಬ ವ್ಯಕ್ತಿಯ ಹೆಸರು ಬಾಯಿಬಿಟ್ಟಿದ್ದಾನೆ. ಆತನನ್ನು ಪತ್ತೆ ಹಚ್ಚಿ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ದರ್ಶನ್ ಸೇರಿ ನಾಲ್ವರು ಆರೋಪಿಗಳ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದು ಅವುಗಳನ್ನು ಅನ್‌ಸಿàಲ್ ಮಾಡಿ ಪುನಃ ರಿ ಆ್ಯಕ್ಸೆಸ್ ಮಾಡಲು ಕೋರ್ಟ್ ಅನುಮತಿ ನೀಡಿದೆ. ಆದರೆ ಆರೋಪಿಗಳು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಸುಮ್ಮನಹಳ್ಳಿಯ ರಾಜಕಾಲುವೆಗೆ ಎಸೆದಿದ್ದು ರೇಣುಕಾಸ್ವಾಮಿಯ ಮೊಬೈಲ್‌ನಲ್ಲಿದ್ದ ಡೇಟಾವನ್ನು ನಿಷ್ಕ್ರಿಯಗೊಳಿಸಿದ್ದಾರೆ. ಹೀಗಾಗಿ ಮೃತನ ಹೆಸರಿನಲ್ಲಿ ಹೊಸ ಸಿಮ್‌ಕಾರ್ಡ್‌ಗಳನ್ನು ಸಂಬಂಧಪಟ್ಟ ಸರ್ವಿಸ್ ಪ್ರೊವೈಡರ್‌ಗಳಿಂದ ಪಡೆದುಕೊಂಡು ರಿ ಆ್ಯಕ್ಸೆಸ್ ಮಾಡಲು ಕೋರ್ಟ್ ಅನುಮತಿ ಪಡೆದುಕೊಂಡಿರುವ ತನಿಖಾಧಿಕಾರಿಗಳು, ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಪ್ರಬಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ತಾಂತ್ರಿಕ ಸಾಕ್ಷ್ಯಾಧಾರಗಳಲ್ಲೂ ಆರೋಪಿಗಳು ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Related Articles
Advertisement
ಮೃತನ ಬಟ್ಟೆ ಬದಲಿಸಿದ್ದರುಆರೋಪಿಗಳು ರೇಣುಕಾಸ್ವಾಮಿಯನ್ನು ಕೊಲೆಗೈದು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆತನ ಬಟ್ಟೆಗಳನ್ನು ಬದಲಾಯಿಸಿದ್ದಾರೆ. ಆತ ಧರಿಸಿದ್ದ ಪ್ಯಾಂಟ್ ಅನ್ನು ಎಸೆದಿದ್ದ ಸಂದರ್ಭದ ಸಾಕ್ಷಿದಾರರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಳ್ಳಲಾಗಿದೆ. ಕರಿಯನಿಗೆ ಇದೆಯೇ
ಕ್ರಿಮಿನಲ್‌ಗಳ ಸಂಪರ್ಕ?
ಅಮಾನುಷವಾಗಿ ರೇಣುಕಾಸ್ವಾಮಿಯ ಹತ್ಯೆಗೈದ ದರ್ಶನ್ ಮತ್ತು ಗ್ಯಾಂಗ್, ಒಳಸಂಚು ರೂಪಿಸಿ ಸಾಕ್ಷ್ಯ ನಾಶ ಪಡಿಸುವ ಉದ್ದೇಶದಿಂದ ಶವ ಸಾಗಿಸಲು ಹಣದ ಪ್ರಭಾವ ಬಳಸಿದ್ದಾರೆ. ಜತೆಗೆ ಕೆಲವು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಹಾಗೂ ಆರ್ಥಿಕ ಸಮಸ್ಯೆ ಹೊಂದಿರುವ ಕೆಲವರಿಗೆ ಆಮಿಷ ತೋರಿಸಿ, ಅವರ ಮೂಲಕ ಮೃತದೇಹವನ್ನು ಕೃತ್ಯ ನಡೆದ ಸ್ಥಳದಿಂದ ಬೇರೆ ಕಡೆ ಸಾಗಿಸಿ ಸಾಕ್ಷಿ ನಾಶ ಪಡಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ದರ್ಶನ್, ರಾಘವೇಂದ್ರ, ಕಾರ್ತಿಕ್, ಕೇಶವಮೂರ್ತಿ ಕ್ರಿಮಿನಲ್ ಹಿನ್ನೆಲೆಯಳ್ಳವರಾಗಿದ್ದಾರೆ. ಅಲ್ಲದೆ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳು ತಮ್ಮ ಅಭಿಮಾನಿ ಬಳಗವನ್ನು ಬಳಸಿಕೊಂಡು ಪ್ರಕರಣದ ತನಿಖೆಗೆ ನಿರಂತರ ಅಡ್ಡಿಪಡಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಸಾಕ್ಷಿಗಳಿಗೆ ಬೆದರಿಕೆ : ದರ್ಶನ್, ಸಹಚರರ ಮೇಲೆ ಮತ್ತೊಂದು ಕೇಸ್
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆಯ ಆರೋಪಿ ದರ್ಶನ್ ತನ್ನ ಸಹಚರರ ಮೂಲಕ ಸಾಕ್ಷಿದಾರರಿಗೆ ಬೆದರಿಕೆ ಹಾಕಿಸಿರುವ ಆರೋಪ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ 60ಕ್ಕೂ ಹೆಚ್ಚು ಸಾಕ್ಷಿದಾರಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ ಈ ಎಲ್ಲ ಸಾಕ್ಷಿಗಳಿಗೆ ದರ್ಶನ್‌ನ ಕೆಲವು ಸಹಚರರು ಪ್ರಾಣ ಬೆದರಿಕೆ ಹಾಕಿ, ಸಾಕ್ಷಿ ನುಡಿಯದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನೊಂದ ಕೆಲವು ಸಾಕ್ಷಿಗಳು ದೂರು ನೀಡಿದ್ದು, ಪೊಲೀಸರು ದರ್ಶನ್ ಮತ್ತು ಸಹಚರರ ವಿರುದ್ಧ ಸಾಕ್ಷಿಗಳಿಗೆ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ 60ಕ್ಕೂ ಹೆಚ್ಚು ಸಾಕ್ಷಿದಾರರು ಇದ್ದಾರೆ. ಜತೆಗೆ ಈ ಸಾಕ್ಷಿದಾರರ ಮೊಬೈಲ್‌ಗಳನ್ನು ರಿಟ್ರೀವ್ ಮಾಡಿಸಲು ಎಲ್ಲ ಮೊಬೈಲ್ ವಶಕ್ಕೆ ಪಡೆಯಲಾಗಿದೆ.