Advertisement

ಶ್ರೀಲಂಕಾ ತಂಡದ ನಾಯಕರಾಗಿ ದಸುನ್‌ ಶಣಕ ಆಯ್ಕೆ

02:41 AM Jul 17, 2021 | Team Udayavani |

ಕೊಲಂಬೊ : ಪ್ರವಾಸಿ ಭಾರತದೆದುರಿನ ಸರಣಿಗಾಗಿ ಕೊನೆಗೂ ಶ್ರೀಲಂಕಾ ಕ್ರಿಕೆಟ್‌ ತಂಡ ಪ್ರಕಟಗೊಂಡಿದೆ. ದಸುನ್‌ ಶಣಕ ಈ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕಳೆದ 4 ವರ್ಷಗಳಲ್ಲಿ ಲಂಕಾ ತಂಡ 10ನೇ ನಾಯಕನ್ನು ಕಂಡಂತಾಗಿದೆ.

Advertisement

ಶ್ರೀಲಂಕಾದ ಕ್ರೀಡಾ ಸಚಿವ, ಪ್ರಧಾನಿ ಮಹಿಂದ ರಾಜಪಕ್ಷ ಅವರ ಪುತ್ರನೂ ಆಗಿರುವ ನಮಲ್‌ ರಾಜಪಕ್ಷ ಅವರ ಅನುಮತಿ ಬಳಿಕ ಶುಕ್ರವಾರ 23 ಸದಸ್ಯರ ತಂಡವನ್ನು ಪ್ರಕಟಿಸಲಾಯಿತು.

ಇದೇ ವೇಳೆ, ಬ್ಯಾಟಿಂಗ್‌ ಕೋಚ್‌ ಗ್ರ್ಯಾಂಟ್‌ ಫ್ಲವರ್‌ ಮತ್ತು ಡಾಟಾ ವಿಶ್ಲೇಷಕ ಜಿ.ಟಿ. ನಿರೋಷನ್‌ ಹೊರತುಪಡಿಸಿ ಇಂಗ್ಲೆಂಡ್‌ನಿಂದ ಮರಳಿದ ಲಂಕಾ ತಂಡದ ಬೇರೆ ಯಾವ ಸದಸ್ಯರಲ್ಲೂ ಕೊರೊನಾ ಕಂಡುಬಂದಿಲ್ಲ.

ಶ್ರೀಲಂಕಾ ತಂಡ
ದಸುನ್‌ ಶಣಕ (ನಾಯಕ), ಧನಂಜಯ ಡಿ ಸಿಲ್ವ, ಆವಿಷ್ಕ ಫೆರ್ನಾಂಡೊ, ಭನುಕ ರಾಜಪಕ್ಷ, ಪಥುಮ್‌ ನಿಸ್ಸಂಕ, ಚರಿತ ಅಸಲಂಕ, ವನಿಂದು ಹಸರಂಗ, ಅಶೇನ್‌ ಬಂಡಾರ, ಮಿನೋದ್‌ ಭನುಕ, ಲಹಿರು ಉದಾರ, ರಮೇಶ್‌ ಮೆಂಡಿಸ್‌, ಚಮಿಕ ಕರುಣರತ್ನೆ, ದುಷ್ಮಂತ ಚಮೀರ, ಲಕ್ಷಣ ಸಂದಕನ್‌, ಅಖೀಲ ಧನಂಜಯ, ಶಿರಾನ್‌ ಫೆರ್ನಾಂಡೊ, ಧನಂಜಯ ಲಕ್ಷಣ, ಇಶಾನ್‌ ಜಯರತ್ನೆ, ಪ್ರವೀಣ್‌ ಜಯವಿಕ್ರಮ, ಅಸಿತ ಫೆರ್ನಾಂಡೊ, ಕಸುನ್‌ ರಜಿತ, ಲಹಿರು ಕುಮಾರ, ಇಸುರು ಉದಾನ.

Advertisement

Udayavani is now on Telegram. Click here to join our channel and stay updated with the latest news.

Next