Advertisement

9 ವರ್ಷ ಕೋಮಾದಲ್ಲಿದ್ದ ದಾಸ್‌ಮುನ್ಶಿ ನಿಧನ

06:25 AM Nov 21, 2017 | Team Udayavani |

ಕೋಲ್ಕತಾ/ಹೊಸದಿಲ್ಲಿ: ಬರೋಬ್ಬರಿ ಒಂಭತ್ತು ವರ್ಷಗಳಿಂದ ಕೋಮಾದಲ್ಲಿದ್ದ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಪ್ರಿಯರಂಜನ್‌ ದಾಸ್‌ಮುನ್ಶಿ (72)ಸೋಮವಾರ ನಿಧನರಾಗಿದ್ದಾರೆ. ಒಂದು ತಿಂಗಳಿನಿಂದ ತೀವ್ರವಾಗಿ ಅಸ್ವಸ್ಥರಾಗಿದ್ದ ಅವರು ಸೋಮವಾರ ಮಧ್ಯಾಹ್ನ 12.10ಕ್ಕೆ ಕೊನೆಯುಸಿ ರೆಳೆದಿದ್ದಾರೆ. ಅವರು ಪತ್ನಿ, ಮಾಜಿ ಸಚಿವೆ ದೀಪಾ ದಾಸ್‌ಮುನ್ಶಿ ಮತ್ತು ಪುತ್ರ ಪ್ರಿಯ ದೀಪ್‌ ದಾಸ್‌ಮುನ್ಶಿ ಅವರನ್ನು ಅಗಲಿದ್ದಾರೆ.

Advertisement

2008ರಲ್ಲಿ ದಾಸ್‌ಮುನ್ಶಿಗೆ ಪಾರ್ಶ್ವವಾಯು ಬಾಧಿಸಿದ ಬಳಿಕ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಶ್ಚಿಮ ಬಂಗಾಳದ ರಾಯ್‌ಗಂಜ್‌ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಅವರು 1985ರಲ್ಲಿ ಮೊದಲ ಬಾರಿಗೆ ವಾಣಿಜ್ಯ ಖಾತೆ ಸಹಾಯಕ ಸಚಿವರಾದರು. ಡಾ.ಮನ ಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದಲ್ಲಿ ಅವರು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದರು. 1970- 1971ರ ಅವಧಿಯಲ್ಲಿ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. ಜತೆಗೆ ಅಖೀಲ ಭಾರತ ಫ‌ುಟ್ಬಾಲ್‌ ಫೆಡರೇಷನ್‌ನ ಅಧ್ಯಕ್ಷರೂ ಆಗಿದ್ದರು ದಾಸ್‌ಮುನ್ಶಿ. ಕಾಂಗ್ರೆಸ್‌ನ ಹಿರಿಯ ನಾಯಕನ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿ ಹಲವು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next