Advertisement

ಮಂಗಳೂರು :ಅಕ್ರಮ ಆಸ್ತಿ ಗಳಿಕೆ ಆರೋಪ, ಕೆಐಎಡಿಬಿ ಅಧಿಕಾರಿ ದಾಸೇಗೌಡ ಮನೆ ಮೇಲೆ ಎಸಿಬಿ ದಾಳಿ

10:18 AM Jun 12, 2020 | sudhir |

ಮಂಗಳೂರು : ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಕೆಐಎಡಿಬಿ ವಿಶೇಷ ಅಧಿಕಾರಿ ದಾಸೇಗೌಡ ಅವರ ಮಂಗಳೂರು, ಬೆಂಗಳೂರು ಹಾಗೂ ಮಂಡ್ಯದಲ್ಲಿರುವ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

Advertisement

ಕೆಐಎಡಿಬಿ ವಿಶೇಷ ಅಧಿಕಾರಿಯಾಗಿದ್ದ ದಾಸೇಗೌಡ ಭೂಸ್ವಾಧೀನದ ಪರಿಹಾರ ಮೊತ್ತದಲ್ಲಿ ಕಮಿಷನ್ ಪಡೆದು 2019ರ ಡಿಸೆಂಬರ್ ನಲ್ಲಿ ಸಿಕ್ಕಿಬಿದ್ದಿದ್ದರು. ಸದ್ಯ ಲಂಚ ಸ್ವೀಕಾರ ಆರೋಪದಡಿ ಅಮಾನತ್ತಿನಲ್ಲಿದ್ದಾರೆ.

ಆದುದರಿಂದ ವಿಶೇಷ ಅಧಿಕಾರಿಗಳು ದಾಸೇಗೌಡನಿಗೆ ಸೇರಿದ ಮಂಗಳೂರು, ಮಂಡ್ಯ ಮತ್ತು ಬೆಂಗಳೂರು ನಿವಾಸಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಎಸಿಬಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿ ಜಾಮೀನು ಪಡೆದು ಹೊರಬಂದಿದ್ದ ದಾಸೇಗೌಡ ಸದ್ಯ ರಾಜ್ಯದ ಹಲವೆಡೆ ಅಕ್ರಮ ಆಸ್ತಿ ಇರೋ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಗಳೂರು ಎಸಿಬಿ ಎಸ್ಪಿ ಉಮಾಪ್ರಶಾಂತ್, ಡಿವೈಎಸ್ಪಿ ಮಂಜುನಾಥ್, ಇನ್ಸ್ ಪೆಕ್ಟರ್ ಯೋಗೀಶ್ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆದಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next