Advertisement

ದಾಸವರೇಣ್ಯ ಶ್ರೀ ವಿಜಯದಾಸರು ಹಾಡು ಬಿಡುಗಡೆ

06:32 PM Jan 13, 2024 | Team Udayavani |

“ದಾಸವರೇಣ್ಯ ಶ್ರೀವಿಜಯದಾಸರು’ ಚಿತ್ರದ ಧ್ವನಿ ಸುರುಳಿ ಇತ್ತೀಚೆಗೆ ಬಿಡುಗಡೆಯಾಯಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಿಡುಗಡೆ ಮಾಡಿ ಶುಭಕೋರಿದರು. ತ್ರಿವಿಕ್ರಮ ಜೋಶಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಮಧುಸೂದನ್‌ ಹವಾಲ್ದಾರ್‌ ನಿರ್ದೇಶಿಸಿದ್ದಾರೆ.

Advertisement

“ಶ್ರೀವೇದವ್ಯಾಸರು ರಚಿಸಿದ ವೇದಗಳು ಸಾಮಾನ್ಯ ಜನರಿಗೆ ಅರ್ಥವಾಗುವುದು ಕಷ್ಟ. ಹರಿದಾಸರು ವೇದಗಳ ಸಾರವನ್ನು ಕನ್ನಡ ಭಾಷೆಯಲ್ಲಿ ಜನರಿಗೆ ಅರ್ಥವಾಗುವ ಹಾಗೆ ಹಾಡುಗಳ ಮೂಲಕ ನೀಡಿದ್ದಾರೆ. ಪುರಂದರ ದಾಸರ ನಂತರ ಬರುವ ವಿಜಯ ದಾಸರು 2800 ಕ್ಕೂ ಹೆಚ್ಚು ಸುಳಾದಿಗಳನ್ನು, ಸಾಕಷ್ಟು ದೇವರನಾಮಗಳನ್ನು ರಚಿಸಿದ್ದಾರೆ. ಹರಿದಾಸರ ಚಿತ್ರಗಳ ಹ್ಯಾಟ್ರಿಕ್‌ ನಿರ್ದೇಶಕ ಮಧುಸೂದನ್‌ ಹವಾಲ್ದಾರ್‌ ನಿರ್ದೇಶಿಸಿದ್ದಾರೆ. ವಿಜಯಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾರೈಸಿದರು.

” ಶ್ರೀದಾಸವರೇಣ್ಯ ವಿಜಯ ದಾಸರು ಚಿತ್ರವನ್ನು ನಮ್ಮ ತಂದೆ – ತಾಯಿಯ ಆಶೀರ್ವಾದದಿಂದ ನಿರ್ಮಿಸಿದ್ದೇನೆ. ಮುಂದೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಸರ ಕುರಿತಾದ ಚಿತ್ರಗಳನ್ನು ನಿರ್ಮಿಸುವ ಆಸೆಯಿದೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ’ ಎನ್ನುವುದು ನಿರ್ಮಾಪಕ ತ್ರಿವಿಕ್ರಮ ಅವರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next