Advertisement
ಅಂಬಾವಿಲಾಸ ಅರಮನೆ ಆವರಣದಲ್ಲಿ ಭಾನುವಾರ ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದ ಯೋಗಾಸಕ್ತರು ಚುಮುಚುಮು ಚಳಿಯನ್ನು ಲೆಕ್ಕಿಸದೆ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿ ಯೋಗ ನಮನ ಸಲ್ಲಿಸಿದರು.
Related Articles
Advertisement
ವಸ್ತು ಪ್ರದರ್ಶನದಲ್ಲಿ ಯೋಗ: ದಸರಾ ಅಂಗವಾಗಿ ಯೋಗ ದಸರಾ ಉಪ ಸಮಿತಿ ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವೃದ್ಧರು ಮತ್ತು ವಿಶೇಷ ಮಕ್ಕಳ ಯೋಗ ಪ್ರದರ್ಶನ ನಡೆಯಿತು.
ಬೆಂಗಳೂರಿನ ಬಸವೇಶ್ವರನಗರದ 67 ವರ್ಷದ ಹಿರಿಯ ಯೋಗಪಟು ಶ್ಯಾಮ್‌ಸುಂದರರಾವ್ ಅಂಗವಿಕಲರ ವಿಭಾಗದಲ್ಲಿ ಯೋಗಾಸನ ಮಾಡಿ ಗಮನ ಸೆಳೆದರು. ಇವರೊಂದಿಗೆ ರಾಜ್ಯದ ಹಲವು ಕಡೆಗಳಿಂದ ಆಗಮಿಸಿದ್ದ ವಿವಿಧ ವಯೋಮಾನದ 800 ಸ್ಪರ್ಧಾರ್ಥಿಗಳು ಭಾಗವಸಿದ್ದರು. ಒಟ್ಟು 9 ವಿಭಾಗಗಳಲ್ಲಿ ಯೋಗಾಸನ ಸ್ಪರ್ಧೆ ನಡೆಸಲಾಯಿತು.
8ರಿಂದ 60ಕ್ಕೂ ಮೇಲ್ಪಟ್ಟ ವಯೋಮಾನದವರು ಸ್ಪರ್ಧೆಯಲ್ಲಿ ಪಾಲ್ಗೊಂಡು ವಿವಿಧ ಆಸನಗಳನ್ನು ಪ್ರದರ್ಶಿಸಿದರು. ನೀರಿಕ್ಷೆ ಶಾಲೆಯ ವಿಶೇಷಚೇತನ ಮಕ್ಕಳು ಹಾಗೂ ಗದಗ ಜಿಲ್ಲೆಯ ಹೊಳೆ-ಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿಯುತ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.