ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಬಾರಿ ವಿವಾದದ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ವಿಚಾರವನ್ನು ಅಮ್ಮ ನೋಡಿಕೊಳ್ಳುತ್ತಾರೆ. ಆದರೆ, ಅರಮನೆಯ ದಸರಾ ಆಚರಣೆ ಪದಟಛಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ತಮ್ಮ ಪತ್ನಿ ತ್ರಿಷಿಕಾ ಕುಮಾರಿ, ಗಿರಿಜನರ ಜೀವನ ಪದ್ಧತಿ ಕುರಿತು ಅಧ್ಯಯನ ನಡೆಸಲು ಆಸಕ್ತಿ ವಹಿಸಿದ್ದಾರೆ. ಆದರೆ, ಪಿಎಚ್‌ಡಿಗೆ ಇನ್ನೂ ಹೆಸರು ನೋಂದಣಿ ಮಾಡಿಸಿಲ್ಲ ಎಂದರು.
Advertisement
ಹೈಫಾ ಯುದ್ಧದ ಸೈನಿಕರಿಗೆ ಸನ್ಮಾನ: 1918ರ ಸೆ.23ರಂದು ಇಸ್ರೇಲ್‌ನ ಹೈಫಾದಲ್ಲಿ ನಡೆದ ಯುದ್ಧದಲ್ಲಿ ವಿಜಯ ಸಾಧಿಸಿದ ಶತಮಾನೋತ್ಸವದ ಸ್ಮರಣಾರ್ಥ ಇದೇ 23ರಂದು ಮೈಸೂರಿನಲ್ಲಿ, ಇಸ್ರೇಲ್ ಪರವಾಗಿ ನಡೆದ ಯುದ್ಧದಲ್ಲಿ ಭಾಗಿಯಾಗಿದ್ದ ಮೈಸೂರು ಸಂಸ್ಥಾನದ ಕೆಲ ಸೈನಿಕರ ಕುಟುಂಬದವರನ್ನು ಸನ್ಮಾನಿಸಲಾಗುವುದು ಎಂದರು. ಮೈಸೂರು ಸಂಸ್ಥಾನದ ಒಡೆಯರ್, ಜೋಧ್ ಪುರ ಸಂಸ್ಥಾನ ಹಾಗೂ ಹೈದ್ರಾಬಾದ್ ಲಾನ್ಸರ್ಜೊತೆಗೂಡಿ ಇಸ್ರೇಲ್‌ನ ಹೈಫಾದಲ್ಲಿ ನಡೆದ ಮಹಾಯುದ್ಧದಲ್ಲಿ ಆಟೋಮಾನ್ ಟರ್ಕರ ವಿರುದ್ಧ ಜಯಗಳಿಸಿದ ಶತಮಾನೋತ್ಸವದ ಸ್ಮರಣಾರ್ಥ ಈ
ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರು ಸಂಸ್ಥಾನದಲ್ಲಿ ಇದ್ದ ನಾಲ್ಕು ಸಾವಿರ ಸೈನಿಕರ ಪೈಕಿ ಸುಮಾರು 2,500 ರಿಂದ 3 ಸಾವಿರ ಸೈನಿಕರು ಹೈಫಾ ಯುದ್ಧದಲ್ಲಿ ಭಾಗಿಯಾಗಿದ್ದರ ಮಾಹಿತಿ ಇದೆ. ಯುದ್ಧ ವಿಜಯದ ಸಂಕೇತವಾಗಿ ಹೈಫಾದಲ್ಲಿ ಇಂದಿನ ಮೈಸೂರು ಸಂಸ್ಥಾನದ ಗಂಡಭೇರುಂಡ ಲಾಂಛನವನ್ನು ಇರಿಸಲಾಗಿದೆ ಎಂದರು.