ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ಮುಂಗಡ ಟಿಕೆಟ್ ಇಲ್ಲದ ಜನಸಾಧಾರಣ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ಅ.8ರಂದು ರಾತ್ರಿ 9 ಗಂಟೆಗೆ ಮೈಸೂರಿನಿಂದ ಹೊರಡುವ ಮೈಸೂರು- ಚಾಮರಾಜನಗರ ಜನಸಾಧಾರಣ ವಿಶೇಷ (06207/06208) ರೈಲು ರಾತ್ರಿ 10:50ಕ್ಕೆ ಚಾಮರಾಜ ನಗರಕ್ಕೆ ಬರಲಿದೆ. ಚಾಮರಾಜನಗರದಿಂದ ಅ.8ರಂದು ರಾತ್ರಿ 11:10ಕ್ಕೆ ಪ್ರಯಾಣ ಬೆಳೆಸುವ ಚಾಮರಾಜನಗರ- ಮೈಸೂರು ಜನಸಾಧಾರಣ ವಿಶೇಷ (06208) ರೈಲು ಮೈಸೂರಿಗೆ ರಾತ್ರಿ 12:05ಕ್ಕೆ ಬಂದು ಸೇರಲಿದೆ.
ಮೈಸೂರಿನಿಂದ ಅ.8ರಂದು ರಾತ್ರಿ 10 ಗಂಟೆಗೆ ಹೊರಡುವ ಮೈಸೂರು-ಬೆಂಗಳೂರು ನಗರ ಜನಸಾಧಾರಣ ವಿಶೇಷ (06215) ರೈಲು ರಾತ್ರಿ 12:30ಕ್ಕೆ ಬೆಂಗಳೂರು ನಗರಕ್ಕೆ ಆಗಮಿಸಲಿದೆ. ಬೆಂಗಳೂರು ನಗರದಿಂದ ಅ.9ರಂದು ರಾತ್ರಿ 1 ಗಂಟೆಗೆ ತೆರಳುವ ವಿಶೇಷ (06216) ರೈಲು ಅದೇ ದಿನ ನಸುಕಿನ 3:30ಕ್ಕೆ ಮೈಸೂರಿಗೆ ಬಂದು ಸೇರಲಿದೆ. ಅ.7ರಂದು ಧಾರವಾಡ-ಮೈಸೂರು ಎಕ್ಸ್‌ಪ್ರೆಸ್ (17302) ರೈಲಿಗೆ ಹಾಗೂ ಅ.8ರಂದು ಮೈಸೂರು-ಧಾರವಾಡ (17301) ರೈಲಿಗೆ ಮಾವಿನಕೆರೆ, ಅಕ್ಕಿಹೆಬ್ಟಾಳು, ಹೊಸ ಅಗ್ರಹಾರ, ಸಾಗರಕಟ್ಟೆ, ಬೆಳಗುಳ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲಾಗುವುದು.
ಅ.1ರಿಂದ 8ರವರೆಗೆ ಮೈಸೂರು-ತಾಳಗುಪ್ಪ (56276/56275) ಪ್ಯಾಸೆಂಜರ್ ರೈಲನ್ನು ಕೃಷ್ಣರಾಜಸಾಗರ, ಕಲ್ಲೂರ, ಯೆಡಹಳ್ಳಿ, ದೋರ್ನಹಳ್ಳಿ, ಹಂಪಾಪುರ, ಅರ್ಜುನಹಳ್ಳಿ ನಿಲ್ದಾಣಗಳಲ್ಲಿ; ಅ.1ರಿಂದ ಅ.8ರವರೆಗೆ ಮೈಸೂರು-ಶಿವಮೊಗ್ಗ ಟೌನ್ (56276/56275) ರೈಲಿಗೆ ಬೆಳಗುಳ, ಅರ್ಜುನಹಳ್ಳಿ, ಹೊಸ ಅಗ್ರಹಾರ, ಮಾವಿನಕೆರೆ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ವಿಶೇಷ ರೈಲು ಸೌಲಭ್ಯ: ದಸರಾ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ನೈಋತ್ಯ ರೈಲ್ವೆ ವಲಯ, ಸುವಿಧಾ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಅಕ್ಟೋಬರ್ 4ರಂದು ಹಾಗೂ 7ರಂದು ಸಂಜೆ 5 ಗಂಟೆಗೆ ಯಲಹಂಕದಿಂದ ಹೊರಡುವ ಯಲಹಂಕ-ಕಲಬುರಗಿ ಸುವಿಧಾ ವಿಶೇಷ (82661) ರೈಲು, ಮರುದಿನ ನಸುಕಿನ 4:20ಕ್ಕೆ ಕಲಬುರಗಿ ತಲುಪಲಿದೆ.
ಅ.5 ಹಾಗೂ 8ರಂದು ರಾತ್ರಿ 8:30ಕ್ಕೆ ಕಲಬುರಗಿಯಿಂದ ಪ್ರಯಾಣ ಬೆಳೆಸುವ ಸುವಿಧಾ ವಿಶೇಷ (82662) ರೈಲು, ಮರುದಿನ ಬೆಳಗ್ಗೆ 8:40ಕ್ಕೆ ಯಲಹಂಕ ತಲುಪಲಿದೆ. ಅ.7ರಂದು ರಾತ್ರಿ 11:55ಕ್ಕೆ ಬೆಂಗಳೂರು ನಗರದಿಂದ ಹೊರಡುವ ಬೆಂಗಳೂರು ನಗರ-ಕಾರವಾರ ಸುವಿಧಾ ವಿಶೇಷ (82665) ರೈಲು, ಮರುದಿನ ಮಧ್ಯಾಹ್ನ 3:00 ಗಂಟೆಗೆ ಕಾರವಾರ ತಲುಪಲಿದೆ ಎಂದು ನೈಋತ್ಯ ರೈಲ್ವೆ ವಲಯ ಕಚೇರಿಯ ಪ್ರಕಟಣೆ ತಿಳಿಸಿದೆ.