ಮೈಸೂರು: ದಸರಾ ಮಹೋತ್ಸವ ಹಿನ್ನೆಲೆ ಪಾಲಿಕೆ ವತಿಯಿಂದ ನಗರದೆಲ್ಲೆಡೆ ಸ್ವತ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವ ಸಲುವಾಗಿ ಏರ್ಪಡಿಸಿರುವ ಮೂರು ದಿನಗಳ ಬೃಹತ್ ಸ್ವತ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನಗರ ಪಾಲಿಕೆ ಮತ್ತು ಕಂಟ್ರಾಕ್ಟರ್ ಅಸೋಸಿ ಯೇಷನ್ ಜಂಟಿಯಾಗಿ ಹಮ್ಮಿಕೊಂಡಿರುವ ಮೆಗಾ ಸ್ವತ್ಛತಾ ಅಭಿಯಾನಕ್ಕೆ ನಗರದ ದೊಡ್ಡಕೆರೆ ಮೈದಾನ ದಲ್ಲಿ ಸೋಮವಾರ ಬೆಳಗ್ಗೆ ಶಾಸಕ ಎಲ್. ನಾಗೇಂದ್ರ ಚಾಲನೆ ನೀಡಿದರು.
ಅ.7ರಂದು ದಸರಾ ಉತ್ಸವಕ್ಕೆ ಚಾಲನೆ ಸಿಗಲಿದ್ದು, ನಗರದಲ್ಲಿ ದಸರಾ ಉತ್ಸವ ಕಳೆಗಟ್ಟಲಿದೆ. ದೇಶ, ವಿದೇಶಗಳಿಂದ ಸಾವಿರಾರು ಮಂದಿ ಮೈಸೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ ನಗರದ ವರ್ತುಲ ರಸ್ತೆ ಹಾಗೂ ಒಳಗಿನ ಮುಖ್ಯರಸ್ತೆಗಳಲ್ಲಿರುವ ಕಸ ಹಾಗೂ ತ್ಯಾಜ್ಯ ವಿಲೇವಾರಿ ಮಾಡಲು ಸ್ವತ್ಛತಾ ಕಾರ್ಯ ನಡೆಸಲಾಗುತ್ತಿದೆ ಎಂದರು.
ಇದನ್ನೂ ಓದಿ:- ಅಜೆಕಾರು: ಶಿರ್ಲಾಲು ಗ್ರಾಮ ಸಭೆಯಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಗ್ರಾಮಸ್ಥರ ಹೊಡೆದಾಟ
ಒಟ್ಟು 75 ಜೆಸಿಬಿ, ಟ್ರ್ಯಾಕ್ಟರ್, ಪಾಲಿಕೆ ವಾಹನ ಸೇರಿ ಒಟ್ಟು 150 ವಾಹನಗಳನ್ನು ಶುಚಿ ಕಾರ್ಯಕ್ಕೆ ಬಳಸಿ ಕೊಳ್ಳಲಾಗಿದೆ. ವರ್ತುಲ ರಸ್ತೆ ಹೊರಭಾಗದಲ್ಲಿ 5 ಕಡೆ ಕಸ ಹಾಕಲು ಸ್ಥಳ ಗುರುತಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಮೇಯರ್ ಸುನಂದಾ ಪಾಲನೇತ್ರ, ಉಪ ಮೇಯರ್ ಅನ್ವರ್ ಬೇಗ್, ಸದಸ್ಯರಾದ ಬಿ.ವಿ. ಮಂಜುನಾಥ್, ಎಂ.ವಿ.ರಾಮಪ್ರಸಾದ್, ಶಿವಕುಮಾರ್, ಶಾಂತಕುಮಾರಿ, ಅಶ್ವಿನಿ ಅನಂತು, ಪುಷ್ಪಾಲತಾ ಜಗ ನ್ನಾಥ್, ರಜನಿ ಅಣ್ಣಯ್ಯ, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀ ಕಾಂತರೆಡ್ಡಿ, ಆರೋಗ್ಯಾಧಿಕಾರಿ ಡಾ.ನಾಗರಾಜ್ ಇದ್ದರು.
ರಸ್ತೆ, ವೃತ್ತಗಳ ಶುಚಿ ಕಾರ್ಯ: ಮೇಯರ್ ಕೊರೊನಾ ಸಾಂಕ್ರಾಮಿಕ ರೋಗದಿಂದ 2ನೇ ವರ್ಷವೂ ಸರಳ, ಸಾಂಪ್ರದಾಯಿಕ ನಾಡಹಬ್ಬ ಆಚರಿಸಲಾಗುತ್ತಿದೆ. ಈಗಾಗಲೇ ದಸರಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ದಸರಾ ವೇಳೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ಪ್ರಮುಖ ರಸ್ತೆಗಳು, ವೃತ್ತಗಳನ್ನು ಶುಚಿಯಾಗಿಡಲು 3 ದಿನಗಳ ಬೃಹತ್‌ಸ್ವತ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದು ಮೇಯರ್ ಸುನಂದಾ ಪಾಲನೇತ್ರ ತಿಳಿಸಿದರು.