Advertisement
ಅ.7ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ ಹಾಗೂ ಅ.15ರಂದು ಅರಮನೆ ಆವರಣದಲ್ಲಿ ನಡೆಯುವ ಜಂಬೂ ಸವಾರಿಗೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನಂತೆ ಪ್ರತ್ಯೇಕ ಷರತ್ತುಗಳನ್ನೊಳ ಗೊಂಡ ಮಾರ್ಗಸೂಚಿ ರೂಪಿಸಿ ಆದೇಶ ಜಾರಿಗೊಳಿಸ ಲಾಗಿದೆ. ಉದ್ಘಾಟನಾ
Related Articles
Advertisement
ಷರತ್ತುಗಳು: ಅರಮನೆಯ ಆವರಣದಲ್ಲಿ ನಡೆಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್‌ಗಳನ್ನು ಕಡ್ಡಾಯವಾಗಿ ಬಳಸುವ ಷರತ್ತು ವಿಧಿಸಲಾಗಿದೆ. ಕೋವಿಡ್-19 ಸೋಂಕು ಹರಡುವುದನ್ನು ತಡೆ ಗಟ್ಟಲು ಈ ವರ್ಷದ ದಸರಾ ಹಬ್ಬ ಆಚರಣೆಯನ್ನು ಮೈಸೂರಿನಲ್ಲಿ ದೃಶ್ಯ ಸಂವಹನ(ವರ್ಚಯಲ್) ಮೂಲಕ ಸಾರ್ವಜನಿಕರು ವೀಕ್ಷಿಸಲು ಅವಕಾಶ ಕಲ್ಪಿಸುವುದು ಮತ್ತು ಈ ಸಮಾರಂಭಗಳಿಗೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ಮೇಯರ್‌ಗೆ ಕುದುರೆ ಸವಾರಿ ಭಾಗ್ಯ ಇಲ್ಲ: ದಸರಾ ಮಹೋತ್ಸವದಲ್ಲಿ ಮೇಯರ್ ಹಾಗೂ ಜಿಪಂ ಅಧ್ಯಕ್ಷರು ಕುದುರೆ ಸವಾರಿ ಮಾಡುವುದು ಸಂಪ್ರದಾಯ. ಆದರೆ ಈ ಬಾರಿಯೂ ದಸರಾ ಮಹೋತ್ಸವದ ಜಂಬೂ ಸವಾರಿ ಅರಮನೆ ಆವರಣಕ್ಕೆ ಸೀಮಿತವಾಗಿರುವುದರಿಂದ ಮೇಯರ್ ಕುದುರೆ ಸವಾರಿ ಮಾಡುವ ಅವಕಾಶ ಕೈತಪ್ಪಿದೆ.
ಪ್ರತಿ ಬಾರಿಯ ದಸರಾ ಜಂಬೂ ಸವಾರಿಯಂದು ಅಂಬಾರಿ ಆನೆಯ ಜೊತೆಗೆ ಮೇಯರ್ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಕುದುರೆ ಸವಾರಿ ಮಾಡುತ್ತಿದ್ದರು. ಆದರೆ, ಜಿಪಂ ಸದಸ್ಯರ ಅವಧಿ ಮುಗಿದು ಆಡಳಿತಾಧಿಕಾರಿ ನೇಮಕವಾಗಿದ್ದಾರೆ. ಮೇಯರ್ ಈವರೆಗೆ ಕುದುರೆ ಸವಾರಿ ಅಭ್ಯಾಸ ಮಾಡಿಲ್ಲ. ಕೊರೊನಾದಿಂದಾಗಿ ಕಳೆದ ಬಾರಿಯೂ ಕುದುರೆ ಸವಾರಿ ಮಾಡಿರಲಿಲ್ಲ. ಹೀಗಾಗಿ, ಈ ಬಾರಿಯೂ ಕುದುರೆ ಸವಾರಿ ಇಲ್ಲದಂತಾಗಿದೆ.
ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯ:- ದಸರಾ ಆಚರಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕರ್ತವ್ಯನಿರತ ಅಧಿಕಾರಿಗಳು, ಸಿಬ್ಬಂದಿಗಳು, ಕಲಾವಿದರು, ರಕ್ಷಣಾ ಸಿಬ್ಬಂದಿ ಮತ್ತು ಮಾಧ್ಯಮದವರು ಒಳಗೊಂಡಂತೆ ಅ.4ರ ನಂತರ ಕೋವಿಡ್-19 ಆರ್‌ಟಿಪಿಸಿಆರ್ ತಪಾಸಣೆ ನಡೆಸಿ ಸೋಂಕು ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ ಮತ್ತು ಕನಿಷ್ಠ 1 ಡೋಸ್ ಕೋವಿಡ್-19 ಲಸಿಕೆ ಪಡೆದಿರುವುದನ್ನು ಕಡ್ಡಾಯಗೊಳಿಸಲಾಗಿದೆ.
ಕಲಾವಿದರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ವೃಂದದವರು ಕಡ್ಡಾಯವಾಗಿ ಮೈಸೂರು ಮತ್ತು ರಾಜ್ಯದ ಇತರೆ ಜಿಲ್ಲೆಗಳಿಂದ ಬಂದವರಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ.