Advertisement
ಕಳೆದ ಆರು ದಿನಗಳಲ್ಲಿ ಮೂರೂವರೆ ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಲಕ್ಷಕ್ಕೂ ಅಧಿಕ ಮಂದಿ ಅನ್ನ ಪ್ರಸಾದ ಸ್ವೀಕರಿಸಿದ್ದು ಶನಿವಾರ ಒಂದೇ ದಿನ 20 ಸಾವಿರಕ್ಕೂ ಅಧಿಕ ಮಂದಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ.
Related Articles
ರವಿವಾರ ಬೆಳಗ್ಗೆ ಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾ ಮಂಗಳಾರತಿ, ಮಧ್ಯಾಹ್ನ ಮಹಾ ಪೂಜೆ, ಅನ್ನಸಂತರ್ಪಣೆ, ನಿರಂತರ ಭಜನೆ, ಸಂಜೆ 5ಕ್ಕೆ ಸಾವಿರ ಸುಮಂಗಲೆ ಯರಿಂದ ಕುಂಕುಮಾರ್ಚನೆ, ರಾತ್ರಿ 7.30ಕ್ಕೆ ಮಹಾಪೂಜೆ, ಶ್ರೀ ಚಂಡಿಕಾ ಕಲೊ³àಕ್ತ ಪೂಜೆ ಮತ್ತು ಪ್ರಸಾದ ವಿತರಣೆ ಹಾಗೂ 6ರಿಂದ 8ರ ವರೆಗೆ ನೃತ್ಯ ವೈವಿಧ್ಯ ನಡೆಯಲಿದ್ದು, ಅಪಾರ ಭಕ್ತರ ನಿರೀಕ್ಷೆಯಲ್ಲಿದ್ದೇವೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್, ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್ ತಿಳಿಸಿದ್ದಾರೆ.
Advertisement
ಕೇಂದ್ರ, ರಾಜ್ಯ ಸಚಿವರ ಭೇಟಿ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಾಜ್ಯದ ಸಚಿವ ಸುನಿಲ್ ಕುಮಾರ್ ಅವರು ಶನಿವಾರ ಭೇಟಿ ನೀಡಿದರು. ಪ್ರಥಮ ಪ್ರಯತ್ನದಲ್ಲೇ ಎಲ್ಲೆಡೆಗೆ ಮಾದರಿಯಾಗುವಂತಹ ದಸರಾವನ್ನು ಆಯೋಜಿಸಿರುವ ಡಾ| ಜಿ. ಶಂಕರ್ ಮತ್ತು ಬಳಗವನ್ನು ಸುನಿಲ್ ಅಭಿನಂದಿಸಿದರು.