ಮೈಸೂರು :ಈ ಬಾರಿ ಮೈಸೂರು ದಸರಾ ಹಬ್ಬದ ಉದ್ಘಾಟಕರನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದು ತುಂಬಾ ಸಂತೋಷವಾಗಿದೆ ಎಂದು ಹಿರಿಯ ಸಾಹಿತಿ ಎಸ್. ಎಲ್. ಭೈರಪ್ಪ ಹೇಳಿದ್ದಾರೆ.
1949ರಿಂದಲೂ ದಸರಾ ನೋಡುತ್ತಾ ಬಂದಿದ್ದೇನೆ ನಾನು ಎರಡು, ಮೂರು ಬಾರಿ ಹತ್ತಿರದಿಂದ ದಸರಾ ನೋಡಿದ್ದೇನೆ ಅಷ್ಟೆ ಅದರ ಬಗ್ಗೆ ಮಾತನಾಡುವಷ್ಟು ನೆನಪುಗಳು ನನ್ನಲ್ಲಿ ಇಲ್ಲ, ಆಗ ಮಹಾರಾಜರು ಅದ್ದೂರಿಯಾಗಿ, ವೈಭವದಿಂದ ದಸರಾ ನಡೆಸುತ್ತಿದ್ದರು.
ಈಗ ನನ್ನನ್ನು ಆಯ್ಕೆ ಮಾಡಿರೋದು ಸಂತೋಷ ತಂದಿದೆ ನನ್ನನ್ನು ಆಯ್ಕೆ ಮಾಡಿದ ಸರ್ಕಾರಕ್ಕೆ ನನ್ನ ಧನ್ಯವಾದ ತಿಳಿಸುತ್ತೇನೆ
ಕಳೆದ ವರ್ಷ ಕೊಡಗಿಗೆ ಮಳೆ ಬಂದಾಗ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ನೀರು ಕೇಳುವ ತಮಿಳುನಾಡಿನಿಂದ ಕೊಡಗಿಗೆ ಹಣ ಕೇಳಿ ಎಂದದ್ದೆ. ಅವರು ನನ್ನ ಪತ್ರಕ್ಕೆ ಉತ್ತರವನ್ನೇ ಬರೆಯಲಿಲ್ಲ. ಅದನ್ನು ಗಂಭೀರವಾಗಿಯೂ ಪರಿಗಣಿಸಲಿಲ್ಲ. ಈಗಲೂ ಅದೆ ಒತ್ತಾಯ ಮಾಡುತ್ತೇನೆ. ರಾಜ್ಯದಲ್ಲಿ ಹೆಚ್ಚು ನೆರೆ ಬಂದಿದೆ.
ನಮ್ಮ ಬಳಿ ಇಲ್ಲದಿದ್ದಾಗಲೂ ನೀರು ಕೇಳುವ ತಮಿಳುನಾಡಿನ ನಿಲುವು ಏನು ಅಂತ ಕೇಳಿ. ಅವರು ಎಷ್ಟು ಹಣ ನಮ್ಮ ರಾಜ್ಯಕ್ಕೆ ಕೊಡ್ತಾರೆ ಕೇಳಿ.
ಈ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದರೆ ನಾಳೆ ಅದು ಉಪಯೋಗ ಆಗಲಿದೆ. ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ ಸರ್ಕಾರವನ್ನ ಈ ವಿಷಯದಿಂದ ಒತ್ತಾಯಿಸುತ್ತೇನೆ ಎಂದು ಹೇಳಿದರು.