Advertisement

ದಸರಾ ಸಾಕು ಪ್ರಾಣಿಗಳ ಪ್ರದರ್ಶನಕ್ಕೆ ಮನಸೋತ ಪ್ರೇಕ್ಷಕ

11:36 AM Oct 15, 2018 | |

ಮೈಸೂರು: ಮೊದಲ ನೋಟದಲ್ಲೇ ನೋಡುಗರ ಮನಗೆದ್ದ ಮುದ್ದು ಪ್ರಾಣಿಗಳು, ಒಡೆಯನ ಜತೆ ಪ್ರೀತಿಯಿಂದ ಹೆಜ್ಜೆ ಹಾಕಿ ಗಮನ ಸೆಳೆದ ಶ್ವಾನಗಳು… ಇವೆಲ್ಲ ಕಂಡು ಬಂದಿದ್ದು ನಾಡಹಬ್ಬ ದಸರಾ ಅಂಗವಾಗಿ ಭಾನುವಾರ ನಡೆದ ಶ್ವಾನ ಅಥವಾ ಮುದ್ದು ಪ್ರಾಣಿಗಳ ಪ್ರದರ್ಶನದಲ್ಲಿ.

Advertisement

ಜಿಲ್ಲಾಡಳಿತ, ಪಶುಸಂಗೋಪನಾ ಇಲಾಖೆ ವತಿಯಿಂದ ನಗರದ ನ್ಪೋರ್ಟ್‌ ಪೆವಿಲಿಯನ್‌ ಮೈದಾನದಲ್ಲಿ ಏರ್ಪಡಿಸಿದ್ದ, ಶ್ವಾನ ಅಥವಾ ಮುದ್ದು ಪ್ರಾಣಿಗಳ ಪ್ರದರ್ಶನ ಪ್ರಾಣಿಪ್ರಿಯರನ್ನು ಆಕರ್ಷಿಸಿತು. ಪ್ರದರ್ಶನಲ್ಲಿ ಸ್ಥಳೀಯ ಹಾಗೂ ದೇಶ ವಿದೇಶಗಳ ಅಂದಾಜು 23 ತಳಿಗಳ ಶ್ವಾನಗಳು ಭಿನ್ನತೆ ಹಾಗೂ ಗಂಭೀರತೆಯಿಂದ ನೆರೆದಿದ್ದ ಜನರನ್ನು ಆಕರ್ಷಿಸಿದವು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ವಾನಗಳು, ಅದರ ಮಾಲಿಕರು ಹಾಗೂ ಶ್ವಾನ ಪ್ರಿಯರು ಭಾನುವಾರದ ರಜೆಯನ್ನು ಸಂತಸದಿಂದ ಕಳೆದರು.

ನೂರಾರು ಶ್ವಾನಗಳು: ಭಾನುವಾರ ಬೆಳಗ್ಗೆ ಆರಂಭಗೊಂಡ ಶ್ವಾನ ಪ್ರದರ್ಶನದಲ್ಲಿ 23 ತಳಿಯ 300ಕ್ಕೂ ಹೆಚ್ಚು ಶ್ವಾನಗಳು ಮೈಸೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಪ್ರಮುಖವಾಗಿ ಡಾಬರ್ಮನ್‌, ಜರ್ಮನ್‌ ಷಫ‌ರ್ಡ್‌, ಗ್ರೇಟ್‌ ಡೇನ್‌, ಪಗ್‌, ಪಮೋರಿಯನ್‌, ಜಾಕಿ ಹೆಸರಿನ ಜೂಜೂ, ಮುಧೋಳ್‌, ಡ್ಯಾಷೆಂಡ್‌, ಲ್ಯಾಬ್ರರ್ಡಾ, ರಾರಯಟ್‌ ವ್ಹಿರ್ಲ, ಪಿಟುºಲ…, ಸೇಂಟ್‌ ಬರ್ನಾಡ್‌, ಗೋಲ್ಡನ್‌ ರಿಟ್ರಿರ್ವ, ಡಾಲ್‌ ಮಿಷನ್‌, ಪಿಂಚರ್ಸ, ಸೈಬೀರಿಯನ್‌ ಹಸ್ಕಿ, ಬಾಕ್ಸì ಹೀಗೆ ವಿವಿಧ ತಳಿಗಳ ಶ್ವಾನಗಳು ಪ್ರದರ್ಶನದ ಆಕರ್ಷಣೆಗೆ ಕಾರಣವಾದವು.

ಕೆಲವು ಶ್ವಾನಗಳು ತಮ್ಮ ಗಾತ್ರ, ಬಣ್ಣ, ನಡಿಗೆ, ಚುರುಕುತನ ಹೀಗೆ ಬೇರೆ ಬೇರೆ ಕಾರಣಗಳಿಂದ ಗಮನ ಸೆಳೆದರೆ. ಇನ್ನೂ ಕೆಲವು ಶ್ವಾನಗಳು ಮಾಲಿಕರೊಂದಿಗೆ ಸ್ಪರ್ಧೆಯಲ್ಲಿ ವೈಯ್ನಾರದಿಂದ ಭಾಗವಹಿಸಿ ತಮ್ಮ ಜಾಣ್ಮೆ ಪ್ರದರ್ಶಿಸಿದವು. ಪ್ರದರ್ಶನದಲ್ಲಿ ಭಾಗವಹಿಸಿದ್ದ ಶ್ವಾನಗಳ ತಳಿ, ನಡಿಗೆ, ಹಲ್ಲು, ಬಾಲ, ದೇಹದ ರಚನೆ, ಗಾತ್ರ ಮತ್ತಿತರ ಅಂಶಗಳನ್ನಾಧರಿಸಿ ತೀರ್ಪುಗಾರರು ಶ್ವಾನಗಳಿಗೆ ಬಹುಮಾನ ವಿತರಿಸಿದರು. 

ಶ್ವಾನಗಳ ಮೇಲೆ ಅಕ್ಕರೆ: ಪ್ರದರ್ಶನದಲ್ಲಿ ತಮ್ಮ ಮುದ್ದಾದ ಶ್ವಾನಗಳೊಂದಿಗೆ ಭಾಗವಹಿಸಿದ್ದ ಸ್ಪರ್ಧಿಗಳು ಅವುಗಳಿಗೆ ಮಾಡುತ್ತಿದ್ದ ಆರೈಕೆ ಎಲ್ಲರ ಗಮನ ಸೆಳೆಯಿತು. ಕೆಲವು ಶ್ವಾನಗಳು ಆಕರ್ಷಕ ವಸ್ತ್ರ, ಕಣ್ಣಿಗೆ ಕನ್ನಡಕ, ತಲೆಗೆ ಹೆಲ್ಮೆಟ್‌, ಕೊರಳಿಗೆ ಮಣಿಗಳನ್ನು ಧರಿಸಿ ನೋಡುಗರನ್ನು ಆಕರ್ಷಿಸಿದವು. ಅಲ್ಲದೇ ನಾಯಿಗಳು ಇಲ್ಲಿನ ಬಿಸಿಲಿಗೆ ಹೊಂದಿಕೊಳ್ಳುವುದಕ್ಕೆ ತೊಂದರೆಯಾಗಿ ಸ್ಪರ್ಧೆಯಲ್ಲಿ ಹಿಂದೆ ಬೀಳಬಾರದು ಎಂಬ ಕಾರಣಕ್ಕೆ ಅದರ ಮಾಲಿಕರು ಶ್ವಾನಗಳನ್ನು ಕಾರಿನಲ್ಲಿರಿಸಿ, ಎಸಿ ಹಾಕಿ ಅವುಗಳ ಆರೈಕೆ ಮಾಡುತ್ತಿದ್ದರು. 

Advertisement

ಈ ವೇಳೆ ಮಕ್ಕಳು ದೈತ್ಯ ಗಾತ್ರದ ಶ್ವಾನಗಳಿಗೆ ಕೂದಲು ಬಾಚುವುದು, ಕುತ್ತಿಗೆಯ ಬೆಲ್ಟ… ಸರಿಪಡಿಸುವುದು, ಕಿವಿ ಸ್ವತ್ಛಗೊಳಿಸುತ್ತಿದ್ದ ದೃಶ್ಯಗಳು ಅವರ ನಡುವಿನ ಬಾಂಧವ್ಯವನ್ನು ಸಾರುತ್ತಿತ್ತು. ಶ್ವಾನ ಹಾಗೂ ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ 23 ತಳಿಯ ಶ್ವಾನಗಳು, 5 ತಳಿಯ ಬೆಕ್ಕುಗಳು, ಬಣ್ಣಬಣ್ಣದ ಗಿಳಿಗಳು ಪ್ರದರ್ಶನಕ್ಕೆ ಮೆರಗು ನೀಡಿದವು. ಈ ಪೈಕಿ ಸನ್‌ ಕೂಲ್ಡ್‌ ಜಾತಿಯ ಹಳದಿ ಹಾಗೂ ಕೇಸರಿ ಮಿಶ್ರಿತ ಗಿಳಿ ಪ್ರಮುಖ ಆಕರ್ಷಣೆಯಾಗಿತ್ತು. ಪ್ರದರ್ಶನ ಆರಂಭಕ್ಕೂ ಮುನ್ನ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next