Advertisement
ದಸರಾ ಆಚರಣೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಈ ಬಾರಿ ದಸರಾವನ್ನು ಸರಳವಾಗಿ ಅರಮನೆ ಆವರಣ, ಚಾಮುಂಡಿ ಬೆಟ್ಟಕ್ಕೆ ಸೀಮಿತವಾಗಿಆಚರಿಸಲುನಿರ್ಧರಿಸಲಾಗಿದೆ. ಜಂಬೂ ಸವಾರಿಗೆ ಸಾವಿರ ಮಂದಿಗೆ ಅವಕಾಶ ಕಲ್ಪಿಸಲಾಗಿದ್ದು, ಆರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ದೀಪಾಲಂಕಾರ ಆಯೋಜಿಸಲು ತೀರ್ಮಾನಿಸಲಾಗಿದೆ. ಆದರೆ, ಇದೀಗ ಕೋವಿಡ್ ಆರ್ಭಟದಿಂದ ಸರಳ ದಸರಾಕ್ಕೂ ಜನಪ್ರತಿನಿಧಿಗಳಿಂದ ಅಪಸ್ವರ ಕೇಳಿ ಬಂದಿದೆ.
Related Articles
Advertisement
ಆಚರಣೆಯಿಂದ ಅಪಾಯ ಇದೆಯಾ? : ದಸರಾ ಆಚರಣೆ ವೇಳೆ ಸ್ವಲ್ಪ ಎಡವಟ್ಟುಗಳು ಸಂಭವಿಸಿದರೂ ಅಪಾಯ ಕಟ್ಟಿಟ್ಟಬುತ್ತಿ. ಜಂಬೂ ಸವಾರಿ ವೀಕ್ಷಣೆಗೆ 2 ಸಾವಿರ ಮಂದಿಗೆ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.ಜಂಬೂ ಸವಾರಿ ವೇಳೆ ಸ್ವಲ್ಪ ವಿನಾಯಿತಿ ನೀಡಿದರೆಜನಪ್ರತಿನಿಧಿಗಳು, ಅವರ ಬೆಂಬಲಿಗರು, ಕಾರ್ಯಕರ್ತರು, ಕುಟುಂಬದವರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಎಲ್ಲಾ ಸೇರಿದರೆ ಈ ಸಂಖ್ಯೆ 5-6 ಸಾವಿರ ಸಂಖ್ಯೆ ದಾಟುವ ಸಾಧ್ಯತೆ ಇರುತ್ತದೆ.ಅಲ್ಲದೇ ಅಲ್ಲಿ ಯಾವುದೇ ಸಾಮಾಜಿಕ ಅಂತರಕೂಡ ಇರುವುದಿಲ್ಲ. ಕೋವಿಡ್ ಮಾರ್ಗಸೂಚಿಗಳನ್ನುಪಾಲಿಸಲು ಆಗುವುದಿಲ್ಲ. ಕಳೆದ ವಾರ ಅರಮನೆಗೆ ಗಜಪಡೆ ಪ್ರವೇಶಿಸುವ ವೇಳೆಇಂತಹ ಅವ್ಯವಸ್ಥೆ ಉಂಟಾಗಿತ್ತು.ಸಚಿವರು, ಶಾಸಕರು, ಅಧಿಕಾರಿಗಳು ತಮಗೇನೂ ನಿಯಮ ಅನ್ವಯವಾಗದಂತೆ ಸಾಮಾಜಿಕ ಅಂತರ ಕಾಪಾಡುವುದನ್ನು ಮರೆತಿದ್ದರು. ಜೊತೆಗೆ ಕೆಲವರು ಮಾಸ್ಕನ್ನು ಧರಿಸಿರಲಿಲ್ಲ. ಸಣ್ಣ ಕಾರ್ಯಕ್ರಮದಲ್ಲೇ ಇಂತಹ ಅವ್ಯವಸ್ಥೆಗಳ ಆಗರವಾಗಿತ್ತು.ಇನ್ನೂ ವಿಜಯದಶಮಿಯ ದಿನ ಜಂಬೂ ಸವಾರಿಯಲ್ಲಿ ಸಾವಿರ ಸಂಖ್ಯೆಯಲ್ಲಿ ಜನಸೇರಿದರೆ ಅಪಾಯ ತಪ್ಪಿದ್ದಲ್ಲ. ಜೊತೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಮತ್ತಷ್ಟು ತೊಂದರೆಗೆ ಸಿಲುಕಬೇಕಾಗುತ್ತದೆ.
ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರ ಗಮನಕ್ಕೆ : ನಾಡಹಬ್ಬ ದಸರಾ ಆಚರಣೆ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಕೋವಿಡ್ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಇದಕ್ಕೆಕೇರಳದಲ್ಲಿ ಓಣಂ ಆಚರಣೆ ಉತ್ತಮ ನಿದರ್ಶನ ಆಗಿದೆ. ದೇಶಕ್ಕೆ ಮಾದರಿಯಾಗಿದ್ದ ಕೇರಳ ರಾಜ್ಯದಲ್ಲೇ ಓಣಂ ಆಚರಣೆ, ನಿರಂತರ ಪ್ರತಿಭಟನೆ, ರಾಜಕೀಯ ಸಭೆ, ಅನ್‌ಲಾಕ್ ನಿಂದಾಗಿ ಕೋವಿಡ್ ಸಂಖ್ಯೆ ಮಿತಿ ಮೀರಿದೆ. ಮೈಸೂರಿನಲ್ಲೂ ಸದ್ಯ ಅದೇ ಪರಿಸ್ಥಿತಿನಿರ್ಮಾಣವಾಗಿದೆ. ಅಲ್ಲಿ ಒಣಂ ಆಚರಿಸಿದರೆ, ಇಲ್ಲಿ ದಸರಾ ಆಚರಿಸಲಾಗುತ್ತಿದೆ. ದಸರಾ ಆಚರಣೆ ಪ್ರಸ್ತುತ ಸವಾಲಿನ ಸನ್ನಿವೇಶವಾಗಿದ್ದು,ಯಾವ ರೀತಿ,ಹೇಗೆಆಚರಣೆ ಎಂಬಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಒಂದು ವೇಳೆ ನಿಯಂತ್ರಣ ತಪ್ಪಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರೆ ತೊಂದರೆಗೆಸಿಲುಕ ಬೇಕಾಗುತ್ತದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ಇನ್ನೂ ಜಿಲ್ಲೆಯಲ್ಲೂ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವಿವಿಧ ಸಂಘಟನೆಗಳ ವತಿಯಿಂದ ಸಾಲು ಸಾಲು ಪ್ರತಿಭಟನೆ ಗಳು, ರಾಜಕೀಯ ಸಭೆಗಳು ನಡೆಯುತ್ತಿವೆ. ಎಂದಿನಂತೆಯೇ ಜನಸಂದಣಿ ನೆರೆದಿರುತ್ತದೆ. ನಗರದಲ್ಲಿ ಕನಿಷ್ಠ ಎರಡೂ¾ರು ಪ್ರತಿಭಟನೆ ಸೇರಿದಂತೆ ಜಿಲ್ಲೆಯಲ್ಲಿ 10 ಧರಣಿಗಳು ನಡೆಯುತ್ತವೆ. ಮಾಸ್ಕ್, ಅಂತರ ಕೂಡ ಇರುವುದಿಲ್ಲ. ಇವುಗಳನ್ನು ನಿಯಂತ್ರಿಸಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಶ್ರವಣಬೆಳಗೊಳದಲ್ಲಿ ಜರುಗಿದ ಮಹಾ ಮಸ್ತಕಾಭಿಷೇಕದಲ್ಲಿ ಹತ್ತು ದಿನದಲ್ಲಿ 5 ಲಕ್ಷ ಜನ ಸೇರಿದ್ದರು. ಆಗ ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿಸಿಂಧೂರಿ ಅವರು ಇದನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಇದೀಗ ಅದಕ್ಕಿಂದ ಹೆಚ್ಚಿನ ಸವಾಲಿನ ದಸರಾ ಆಚರಣೆಯಲ್ಲಿ ಸುರಕ್ಷತಾ, ಮುನ್ನೆಚ cರಿಕ ಕ್ರಮಗಳೊಂದಿಗೆ ಜನ ಸಮೂಹಕ್ಕೆಕೊರೊನಾ ತಗುಲದಂತೆ ನಿಗಾವಹಿಸಬೇಕಿದೆ.
– ಸತೀಶ್ ದೇಪುರ