Advertisement
ಕಳೆದ 40ವರ್ಷಗಳಿಂದ ವಿಶಿಷ್ಟ ರೀತಿಯಲ್ಲಿ ಬೊಂಬೆ ಹಬ್ಬವನ್ನು ಆಚರಿಸಿಕೊಂಡು ಬಂದಿರುವ ಚನ್ನಪಟ್ಟಣದ ವಾಸುದೇವ ಶಾಸ್ತ್ರಿ ಅವರ ಪುತ್ರಿಯರಾದ ರಮಾಮಣಿ, ಪುಷ್ಪವಲ್ಲಿ, ಲತಾ ಮತ್ತು ಮಾಲಿನಿ ಎಂಬ ನಾಲ್ಕು ಮಂದಿ ಸಹೋದರಿಯರು 2 ರಿಂದ 3 ಸಾವಿರದಷ್ಟು ಬೊಂಬೆಗಳನ್ನು ಕೂರಿಸಿದ್ದು, ಇವರ ಬೃಹತ್ ಬೊಂಬೆಗಳ ಸಂಗ್ರಹ ಎಲ್ಲರ ಗಮನ ಸೆಳೆಯುತ್ತಿದೆ. ತಮ್ಮ ಸಂಗ್ರಹದಲ್ಲಿ 4 ಸಾವಿರಕ್ಕೂ ಹೆಚ್ಚು ಬೊಂಬೆಗಳಿದ್ದು ಸ್ಥಳಾವಕಾಶದ ಕೊರತೆಯಿಂದ ಹೆಚ್ಚು ಬೊಂಬೆಗಳನ್ನು ಕೂರಿಸಿಲ್ಲ ಎಂದು ಸಹೋದರಿಯರು ಹೇಳುತ್ತಾರೆ.
Related Articles
Advertisement
ಸಾರ್ವಜನಿಕ ವೀಕ್ಷಣೆಗೆ ಅವಕಾಶ: ಪ್ರತಿವರ್ಷ ಬೊಂಬೆಗಳನ್ನು ಕೂರಿಸುವ ಇವರು ದಸರಾ ಸಮ ಯದಲ್ಲಿ 10 ದಿನಗಳ ಕಾಲ ಬೊಂಬೆಗಳನ್ನು ಸಾರ್ವಜನಿಕರು ಮುಕ್ತವಾಗಿ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಯಾವುದೇ ನಿರ್ಬಂಧವಿಲ್ಲದೆ ಎಲ್ಲರೂ ಬೊಂಬೆಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದು, ಪ್ರತಿದಿನ ಇವರ ಮನೆಗೆ ನೂರಾರು ಮಂದಿ ಭೇಟಿ ನೀಡಿ ಬೊಂಬೆಗಳನ್ನು ವೀಕ್ಷಿಸಿ ಸಂತೋಷ ಪಡು ತ್ತಿದ್ದಾರೆ. ಅದರಲ್ಲೂ ಮಕ್ಕಳು ಬೊಂಬೆಗಳನ್ನು ನೋಡಿ ಆನಂದಿಸುತ್ತಿದ್ದಾರೆ.
ನಾವು ಚಿಕ್ಕವರಿದ್ದಾಗ ನಮ್ಮ ತಾಯಿ ಬೊಂಬೆಗಳನ್ನು ಕೂರಿಸುತ್ತಿದ್ದರು. ಅವರಿಂದ ಪ್ರೇರಿತರಾಗಿ ನಾವು ಬೊಂಬೆ ಕೂರಿಸುವ ಹವ್ಯಾಸವನ್ನು ಬೆಳೆಸಿಕೊಂಡೆವು. ನಾವು ಹೋದಕಡೆಯಲೆಲ್ಲಾ ಬೊಂಬೆಗಳನ್ನು ತಂದು ಮನೆಯಲ್ಲಿ ಸಂಗ್ರಹ ಮಾಡಿದ್ದು, ನಮ್ಮ ಕುಟುಂಬದಲ್ಲಿ ತಲೆಮಾರುಗಳಿಂದ ಬಂದ ಬೊಂಬೆಗಳು ನಮ್ಮ ಬಳಿ ಇವೆ. ಇವು ಹಾನಿಯಾದರೆ ಅದನ್ನು ಮರುಸೃಷ್ಟಿ ಮಾಡುತ್ತೇವೆ. ದಸರಾ ಸಮಯದಲ್ಲಿ ಸಾರ್ವಜನಿಕರು ಈ ಬೊಂಬೆಗಳನ್ನು ಮುಕ್ತವಾಗಿ ವೀಕ್ಷಣೆ ಮಾಡಬಹುದಾಗಿದೆ. – ರಮಾಮಣಿ, ಬೊಂಬೆಕೂರಿಸಿರುವವರು
ದಸರಾ ಸಮಯದಲ್ಲಿ ಬೊಂಬೆಗಳನ್ನು ಕೂರಿಸುವ ಸಂಪ್ರದಾಯ ಹಳೇ ಮೈಸೂರು ಭಾಗದ ಸಾಕಷ್ಟು ಕುಟುಂಬಗಳಲ್ಲಿ ಇವೆ. ಆದರೆ, ಇಷ್ಟೋಂದು ಬೊಂಬೆಗಳನ್ನು ನಾವು ಎಲ್ಲೂ ನೋಡಲು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿಯನ್ನು ಪಾಲಿಸುತ್ತಾ, ಎಲ್ಲರಿಗೂ ಇದರ ಬಗ್ಗೆ ಅರಿವು ಮೂಡಿಸುತ್ತಿರುವ ಈ ಸಹೋದರಿಯರ ಕಾರ್ಯ ನಿಜಕ್ಕೂ ಶ್ಲಾಘನಾರ್ಹ. – ಹೊಯ್ಸಳ, ಇಸ್ರೋ ನೌಕರ, ಚನ್ನಪಟ್ಟಣ
-ಸು.ನಾ.ನಂದಕುಮಾರ್