Advertisement
ದಸರಾದ ಖುಷಿಗೆ ಬಹಳ ಮುಖ್ಯ ಕಾರಣ ವೇಷ. ಮೈಗೆಲ್ಲ ಹುಲಿಯಂತೆ ಬಣ್ಣ ಬಳಿದುಕೊಂಡು ತಾಸೆಯ ಪೆಟ್ಟಿಗೆ ಕುಣಿಯೋ ನಮ್ಮೂರ ಹುಲಿವೇಷದಿಂದ ಹಿಡಿದು ಅನಾರ್ಕಲಿ, ಯಕ್ಷಗಾನದ ರಕ್ಕಸರ ವೇಷದವರೆಗೆ ಅಲ್ಲಲ್ಲಿ ಒಂದೊಂದು ರೀತಿಯ ವೇಷಗಳು ಕಾಣಸಿಗುತ್ತವೆ. ಹೀಗೆ ಪದೇ ಪದೇ ಬರೋ ವೇಷಗಳಿಗೆ ಕೆಲವೊಮ್ಮೆ ಹಣ ಕೊಟ್ಟು ಕೊಟ್ಟು ಸುಸ್ತಾಗುತ್ತದೆ. ಇನ್ನು ರಸ್ತೆ ಬದಿ ಅಂಗಡಿಯವರ ಕಥೆಯಂತೂ ಕೇಳ್ಳೋದೇ ಬೇಡ. ದಿನಕ್ಕೆ ಕಮ್ಮಿ ಅಂದ್ರೂ ಮೂರ್‍ನಾಲ್ಕು ವೇಷಗಳು ಬಂದು ಹೋಗುತ್ತವೆ. ಆದರೆ, ಈ ವೇಷಗಳು ಸಂಸ್ಕೃತಿಯ ಒಂದು ಭಾಗವಾಗಿ ಬಿಟ್ಟಿವೆ. ಇವು ದಸರಾಕ್ಕೆ ಒಂದು ವಿಶೇಷ ಮೆರುಗು. ನಮ್ಮ ಬಾಲ್ಯದ ನೆನಪುಗಳಿಗೆ ಒಂದು ವಿಶೇಷ ಸೊಬಗನ್ನು ನೀಡಿದ ಈ ವೇಷಗಳು ವಿಶೇಷವಾಗಿ ದಸರಾ ಸಮಯದಲ್ಲಿ ನಮ್ಮ ಬದುಕಿನ ಅವಿಭಾಜ್ಯ ಅಂಗವೆಂದೇ ಹೇಳಬಹುದು. ನಾವು ಚಿಕ್ಕವರಾಗಿದ್ದಾಗ ಎಲ್ಲೋ ದೂರದಲ್ಲಿ ತಾಸೆಯ ಸದ್ದು ಕೇಳಿತು ಅಂತಂದ್ರೆ ನಮಗೆಲ್ಲ ಏನೋ ಒಂಥರಾ ಖುಷಿ. ಯಾವಾಗ ನಮ್ಮ ಮನೆಗೆ ವೇಷ ಬರುತ್ತೋ ಅಂತ ಕಾಯುತ್ತಿದ್ದೆವು. ಆದರೆ, ನಮ್ಮ ಮನೆಗೆ ವೇಷ ಬರುತ್ತಿದ್ದುದು ತುಂಬ ಕಡಿಮೆ. ಅಪ್ಪ-ಅಮ್ಮ ಕೆಲಸಕ್ಕೆ ಹೋಗ್ತಾ ಇದ್ದ ಕಾರಣ ಮನೆಯಲ್ಲಿ ಯಾರೂ ಇರ್ತಾ ಇರ್ಲಿಲ್ಲ. ಆದರೆ, ನಮ್ಮ ಗೆಳೆಯರ ಮನೆಗೆ ಬರುತ್ತಿದ್ದ ವೇಷಗಳನ್ನು ನೋಡ್ತಾ ಇದ್ದೆವು. ಅಷ್ಟೇ ಅಲ್ಲ , ಹುಲಿವೇಷ ಊರಿಗೆ ಬಂದ ಕ್ಷಣದಿಂದ ಊರು ಬಿಟ್ಟು ಹೋಗುವವರೆಗೆ ಅದರ ಹಿಂದೆಯೇ ಸುತ್ತುತ್ತ ಇದ್ದ ಮಕ್ಕಳ ಗುಂಪೂ ಇತ್ತು. ಹಸಿವು, ಸುಸ್ತು ಇವು ಯಾವುದೂ ಅರಿವಿಗೆ ಬರುತ್ತಿರಲಿಲ್ಲ. ಆಗ ನಮಗಿದ್ದ ವೇಷದ ಕ್ರೇಜ್ ಅಂಥದ್ದು. ಒಂದು ದಿನ ನಮ್ಮ ಮನೆಗೂ ಹುಲಿವೇಷ ಬಂದು ಅಪ್ಪ ಐವತ್ತರ ನೋಟೊಂದನ್ನು ಅವರಿಗೆ ನೀಡಿದಾಗ ನನಗಾಗಿದ್ದ ಹೆಮ್ಮೆ ಅಷ್ಟಿಷ್ಟಲ್ಲ.
Related Articles
Advertisement
ಆ ಹುಡುಗರು ನನ್ನತ್ತ ಬಂದರು. ಆ ಗದೆ ಹಿಡಿದಿದ್ದ ಹುಡುಗ ಗದೆ ಆಡಿಸುತ್ತ ವಿಚಿತ್ರ ಸದ್ದು ಮಾಡಲಾರಂಭಿಸಿದ. ಇನ್ನೊಬ್ಬ ವಿಚಿತ್ರವಾಗಿ ಕುಣಿಯಲಾರಂಭಿಸಿದ. ನಾನು ಪರ್ಸ್ ತೆಗೆದು ಹತ್ತರ ನೋಟು ಹೊರಗೆ ತೆಗೆದಿ¨ªೆ ಅಷ್ಟೇ. ಕೊಡುವ ಮೊದಲೇ ಕೈಯಿಂದ ಎಳೆದುಕೊಂಡು ಓಡಿದ್ದರು.ತುಸು ಹೊತ್ತಿನ ನಂತರ ನಾನು ಕಾಯ್ತಾ ಇದ್ದವರೆಲ್ಲ ಅಲ್ಲಿಗೆ ಬಂದರು. ನಾವು ಹೋಗಬೇಕಿದ್ದ ಕಡೆ ಹೊರಡಲು ಅಣಿಯಾದೆವು.ಅಷ್ಟರಲ್ಲಿ ರಕ್ಕಸನ ವೇಷ ಹಾಕಿದ್ದ ಇನ್ನೊಬ್ಬ ಹುಡುಗ ಸಿಕ್ಕ. ಜೊತೆಗಿದ್ದ ಸಂಪತ್ ಅಣ್ಣ ಅವನ ಜೊತೆ ಮಾತಿಗಿಳಿದರು. ಅವರ ಸಂಭಾಷಣೆ ಈ ರೀತಿ ಇತ್ತು. “”ಮನೆ ಎಲ್ಲಿ ನಿಂದು?”
“”ಉಡುಪಿ”
“”ಅಲ್ಲಿಂದ ಇಲ್ಲಿಗೆ ಬಂದ¨ದ್ದಾ”
“”ಹಾ”
“”ಶಾಲೆಗೆ ಹೋಗ್ತಿàಯಾ?”
“”ಹೌದು”
“”ಯಾವ ಶಾಲೆ?”
ಆ ಹುಡುಗ ಯಾವುದೋ ಸರಕಾರಿ ಶಾಲೆಯ ಹೆಸರು ಹೇಳಿದ್ದ.
“”ಶಾಲೆಗೆ ಹೋಗುದಾದ್ರೆ ವೇಷ ಹಾಕಿದ್ರೆ ಪರವಾಗಿಲ್ಲ ಬಿಡು” ಸಂಪತ್ ಅಣ್ಣ ನಗುನಗುತ್ತಾ ಅವನಿಗೊಂದು ಹತ್ತರ ನೋಟು ಕೊಟ್ಟರು.
ವೇಷ ಹಾಕಿದ್ದ ಆ ಆಂಧ್ರದ ಹುಡುಗಿಗೂ ಹತ್ತರ ನೋಟೊಂದನ್ನು ಕೊಟ್ಟು ಅವಳ ಫೋಟೋ ತೆಗೆದುಕೊಂಡರು.
ವೇಷ ಹಾಕಿ ತಮ್ಮ ಖರ್ಚಿಗೊಂದಿಷ್ಟು ಹಣ ಮಾಡಿಕೊಳ್ಳುವ ಆ ಮಕ್ಕಳನ್ನ ಕಂಡಾಗ ನನ್ನ ಬಾಲ್ಯದ ವೇಷಗಳ ನೆನಪು ಒತ್ತರಿಸಿ ಬಂತು. ಅಥಿಕ್ ಕುಮಾರ್
ವಾಣಿಜ್ಯ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ