Advertisement
ದರ್ಶನ್‌ಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಜೈಲಿನ ಸೆಕ್ಯುರಿಟಿ ರೂಮ್ ನಂ. 3ರಲ್ಲಿ ನಟ ದರ್ಶನ್ ಹಾಗೂ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮತ್ತೂಬ್ಬ ಆರೊಪಿ ವಿನಯ್ ಸಹ ಕೈದಿಯಾಗಿ ಸೆರೆವಾಸ ಅನುಭವಿಸುತ್ತಿದ್ದಾನೆ. ಶನಿವಾರ ರಾತ್ರಿ ದರ್ಶನ್‌ಗೆ ಜೈಲಿನ ಮೆನುವಿನಂತೆ ಮುದ್ದೆ, ಚಪಾತಿ, ಅನ್ನ ಸಾಂಬಾರ್, ಮಜ್ಜಿಗೆ ನೀಡ ಲಾಗಿದೆ. ದಿನದಲ್ಲಿ ಹೆಚ್ಚು ಮಾಂಸಾಹಾರ ಸೇವನೆ ಮಾಡುತ್ತಿದ್ದ ದರ್ಶನ್‌ಗೆ ಜೈಲೂಟ ಸರಿಯಾಗಿ ಸೇರುತ್ತಿಲ್ಲ. ಚಪಾತಿ ಮಾತ್ರ ತಿಂದು ಮಜ್ಜಿಗೆ ಕುಡಿದಿರುವ ದರ್ಶನ್, ಜೈಲು ಸಿಬಂದಿ ಕೊಟ್ಟ ಅನ್ನ ಬೇಡ ಎಂದಿರುವುದು ಗೊತ್ತಾಗಿದೆ.
ಚಿಂತಾಕ್ರಾಂತ ಪವಿತ್ರಾ: ಇನ್ನು ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಕೂಡ ಜೈಲೂಟ ಉಂಡು ಚಿಂತೆಗೊಳಗಾಗಿದ್ದಾಳೆ. ಇತರ ಆರೋಪಿಗಳೂ ಅದೇ ಜೈಲಲ್ಲಿದ್ದಾರೆ. ಶೀಘ್ರ ಸ್ಥಳಾಂತರ?
ಆರೋಪಿಗಳು ಈಗಾಗಲೇ ಒಳಸಂಚಿನಲ್ಲಿ ಭಾಗಿಯಾಗಿದ್ದಾರೆ. ಎಲ್ಲರನ್ನೂ ಒಂದೇ ಜೈಲಿನಲ್ಲಿ ರಿಸಿದರೆ ಸಂಚು ರೂಪಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ರಾಜ್ಯದ ವಿವಿಧ ಜೈಲುಗಳಲ್ಲಿ ಇರಿಸಲು ನಿರ್ದೇಶಿಸುವಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಾಲಯವು ಸೋಮವಾರ ಮತ್ತೆ ವಿಚಾರಣೆ ನಡೆಸಿ ಸ್ಥಳಾಂತರಿಸುವ ಬಗ್ಗೆ ನಿರ್ಧರಿಸುವ ಸಾಧ್ಯತೆಗಳಿವೆ.
Related Articles
ದರ್ಶನ್ ಇರುವ ಜೈಲಿನ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ರವಿವಾರ ಉತ್ತರ ಕರ್ನಾಟಕ ಸೇರಿ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಅಭಿಮಾನಿಗಳು ಪರಪ್ಪನ ಅಗ್ರಹಾರದತ್ತ ಧಾವಿಸಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
Advertisement